ಡಬಲ್ ಲಾಕ್ ಡೌನ್ ಉಡುಪಿಯಲ್ಲಿ ಕಠಿಣ ಕ್ರಮ-ಭಟ್ಕಳ ಕಡೆಯಿಂದ ಹೋದ ಅಂಬುಲೆನ್ಸ್ ಗೂ ಪ್ರವೇಶ ನಕಾರ?

1795

ಉಡುಪಿ: ಕೊರೋನಾ ಹಿನ್ನೆಲೆ ಪ್ರಸ್ತುತ ಜಿಲ್ಲೆಗೆ ಹೊರ ಜಿಲ್ಲೆಯಿಂದ ಬರುವ ವಾಹನಗಳು ಮತ್ತು ಪ್ರಯಾಣಿಕರನ್ನು ನಿರ್ಭಂದಿಸಲಾಗಿದ್ದು, ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವ ವ್ಯಕ್ತಿಗಳಿಗೆ ಮತ್ತು ಸರಕು ಸಾಮಗ್ರಿ ಸಾಗಿಸುವ ವಾಹನಗಳಿಗೆ ಮಾತ್ರ ಪ್ರವೇಶ ನೀಡಿದ್ದು, ಇತರೆ ಜಿಲ್ಲೆಗಳಿಂದ ಪಾಸ್ ಪಡೆದು ಜಿಲ್ಲೆಗೆ ಬರಲು ಯತ್ನಿಸುವವರ ಪಾಸ್ ಗಳನ್ನು ಯಾವುದೇ ಕಾರಣಕ್ಕೂ ಮಾನ್ಯ ಮಾಡುವುದಿಲ್ಲ ಹಾಗೂ ಎಲ್ಲಾ ಚೆಕ್‍ಪೋಸ್ಟ್‍ಗಳಲ್ಲಿ ಸಿಸಿಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿ ಜಿ ಜಗದೀಶ್ ಸೂಚಿಸಿದ್ದಾರೆ.

ಜಿಲ್ಲೆಯ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕೈಗೊಂಡಿರುವ ಈ ಕ್ರಮಗಳಿಗೆ ಸಾರ್ವಜನಿಕರು ಸಹಕಾರ ನೀಡುವಂತೆ ಹಾಗೂ ಅಕ್ರಮವಾಗಿ ಒಳಬಂದವರಿಗೆ ಕಡ್ಡಾಯವಾಗಿ 14 ದಿನಗಳ ಸರ್ಕಾರಿ ಕ್ವಾರಂಟೈನ್ ವಿಧಿಸುವುದಾಗಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಸಿದರು.

ಜಿಲ್ಲೆಯ ಎಲ್ಲಾ ಗಡಿಗಳಲ್ಲಿ ಸಂಬಂದಪಟ್ಟ ತಹಸೀಲ್ದಾರ್ ಗಳು ಮತ್ತು ಪೊಲೀಸ್ ಇಲಾಖೆ ಅತ್ಯಂತ ಕಟ್ಟುನಿಟ್ಟಾಗಿ ತಪಾಸಣೆ ನಡೆಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಇತರೆ ಜಿಲ್ಲೆಗಳಿಂದ ನೀಡಿದ ಪಾಸ್ ಗಳನ್ನು ಮಾನ್ಯ ಮಾಡದಂತೆ ಮತ್ತೋಮ್ಮೆ ಸೂಚಿಸಿದ್ದಾರೆ.

ಉಡುಪಿ- ಭಟ್ಕಳ – ಶಿರೂರು ಚಕ್ ಪೋಸ್ಟ್ ಸಂಪೂರ್ಣ ಬಂದ್!

ಶಿರೂರು ಬಳಿಯ ಚಕ್ ಪೊಸ್ಟ್ (ಸಂದರ್ಭಿಕ ಸಂಗ್ರಹ ಚಿತ್ರ)

ಉಡುಪಿ -ಉತ್ತರ ಕನ್ನಡ ಜಿಲ್ಲೆಯ ಗಡಿ ಭಾಗದ ಶಿರೂರು ಚಕ್ ಪೋಸ್ಟ್ ಬಳಿ ಭಟ್ಕಳ ಕಡೆಯಿಂದ ಉಡುಪಿ ಕಡೆ ಹೋಗುವ 108 ಅಂಬುಲೆನ್ಸ್ ಗಳನ್ನು ಸಹ ತಡೆದು ನಿಲ್ಲಿಸಿದ್ದು ಮರಳಿ ಉತ್ತರ ಕನ್ನಡ ಜಿಲ್ಲೆಯ ಭಾಗಕ್ಕೆ ಕಳುಹಿಸಲಾಗಿದೆ.

ಈ ಕುರಿತು ಕನ್ನಡವಾಣಿ ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದ್ದು ತಕ್ಷಣ ಉಡುಪಿ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಸರಿಪಡಿಸುವುದಾಗಿ ತಿಳಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ