ಉಡುಪಿ ಜಿಲ್ಲಾಪಂಚಾಯತ್ ಸಿಬ್ಬಂದಿ ,ಪೊಲೀಸರಿಗೂ ಕೊರೋನಾ ಸೊಂಕು!

408

ಉಡುಪಿ:- ಉಡುಪಿ ಜಿಲ್ಲೆಯಲ್ಲಿ ಒಟ್ಟು 32 ಪ್ರಕರಣ ವರದಿಯಾಗಿದ್ದು ಈ ಪೈಕಿ 28 ಮಂದಿ ಮುಂಬಯಿಯಿಂದ ಬಂದವರು ಎರಡು ದುಬೈ ಸಂಪರ್ಕದಿಂದ ಕೊರೋನಾ ಪಾಸಿಟಿವ್ ಧೃಡಪಟ್ಟಿದೆ.

ಇಬ್ಬರು ಸ್ಥಳೀಯರಿಗೆ ಕೊರೋನಾ ಸೋಂಕು ತಗುಲಿದ್ದು ಉಡುಪಿಯಲ್ಲಿ ಓರ್ವ ಹೆಡ್ ಕಾನ್ ಸ್ಟೇಬಲ್ ಗೆ ಪಾಸಿಟಿವ್ ಬಂದಿದ್ದು ಸೋಂಕು ಅಂಟಿದ ಮೂಲದ ತಪಾಸಣೆ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚೆಕ್ ಪೋಸ್ಟ್ ನಿಂದ ಸೋಂಕು ಆವರಿಸಿರುವ ಸಾಧ್ಯತೆ ಇದ್ದು ಉಡುಪಿಯ ಜಿಲ್ಲಾ ಪಂಚಾಯಿತಿ ಸಿಬ್ಬಂದಿಗೂ ಕೊರೋನಾ ಸೋಂಕು ದೃಢಪಟ್ಟಿದೆ.

ಜಿಲ್ಲಾ ಪಂಚಾಯಿತಿ ಸಿಬ್ಬಂದಿ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು
ಅವರನ್ನು ತಪಾಸಣೆ ಮಾಡಿದ ಸಂದರ್ಭದಲ್ಲಿ ಸೋಂಕು ಇರುವುದು ದೃಢಪಟ್ಟಿದೆ.ಒಟ್ಟು 10 ಮಹಿಳೆಯರು,12 ಪುರುಷರು 10ಮಕ್ಕಳಲ್ಲಿ ಕೊರೋನಾ ಪ್ರಕರಣ ಪತ್ತೆಯಾಗಿದೆ ಎಂದು
ಉಡುಪಿ ಡಿಸಿ ಜಿ. ಜಗದೀಶ್ ಹೇಳಿದ್ದಾರೆ.

ಸಶಸ್ತ್ರ ಮೀಸಲು ಪಡೆಯ ಎಎಸೈಗೆ ಸೋಂಕು, ಉಡುಪಿ ಎಸ್ಪಿ ಕಚೇರಿಯೂ ಸೀಲ್ ಡೌನ್ ಮಾಡ್ತಾರಾ?

ಇಲ್ಲಿನ ಜಿಲ್ಲಾ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಒಂದು ವಾರಗಳ ಕಾಲ ಕೆಲಸ ನಿರ್ವಹಿಸಿದ್ದ ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯ ಹೆಡ್ ಕಾನ್ಟೇಬಲ್ ಗೂ ಕೊರೋನಾ ವೈರಸ್ ಸೋಂಕು ದೃಢಪಟ್ಟಿದೆ.

ಈ ಕಾರಣದಿಂದ ಎಸ್ ಪಿ ಕಚೇರಿಯನ್ನುಎರಡು ದಿನಗಳ ಹಿಂದೆ ಸ್ಯಾನಿಟೈಸರ್ ಮಾಡಲಾಗಿದ್ದು, ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಜಿಲ್ಲಾ ಶಸ್ತ್ರಾಸ್ತ್ರ ಮೀಸಲು ಪಡೆಯ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರ ಕಚೇರಿಯಲ್ಲಿ ಒಂದು ವಾರ ಕೆಲಸ ನಿರ್ವಹಿಸಿದ್ದರು. ಅಲ್ಲಿ ಹಲವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದ್ದು ಈಗ ಕಚೇರಿಯನ್ನು ಸೀಲ್ ಡೌನ್ ಮಾಡುವ ಆತಂಕ ಶುರುವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ