BREAKING NEWS
Search

ಪೇಜಾವರ ಶ್ರೀ ಕೃಷ್ಣೈಕ್ಯ-ಇಡೀ ದಿನ ನಡೆದಿದ್ದು ಇಷ್ಟು!

230

ಉಡುಪಿ:- ಉಡುಪಿ ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ವಿಧಿವಶರಾಗಿದ್ದಾರೆ.

ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕಳೆದ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 9 ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತಿತ್ತು ಆದರೇ ಇಂದು ಬೆಳಗ್ಗೆ ಅವರು ವಿಧಿವಶರಾಗಿರುವುದನ್ನು ಮಠದ ಆಡಳಿತಮಂಡಳಿ ಅಧಿಕೃತ ಘೋಷಣೆ ಮಾಡಿತು.

ಶ್ರೀಗಳನ್ನು ವೆಂಟಿಲೇಟರ್ ನಿಂದಲೇ ಪೇಜಾವರ ಮಠಕ್ಕೆ ಕರೆತಂದು ನಂತರ ದೈವಾದೀನರಾಗುರುವ ಕುರಿತು ಮಾಹಿತಿ ನೀಡಿದ್ದು ನಂತರ ಶ್ರೀಗಳ ದೇಹವನ್ನು ಕೃಷ್ಣ ಮಠಕ್ಕೆ ತಂದು ಪೂಜೆ ಮಾಡಿ,ಮಠದ ಆವರಣದಲ್ಲಿರುವ ಮಾದ್ವಸರೋವರದಲ್ಲಿ ಸ್ನಾನಮಾಡಿಸಿ ನಗರದಲ್ಲಿ ಮೆರವಣಿಗೆ ಮೂಲಕ ಅಜ್ಜರಕಾಡು ಕ್ರೀಡಾಂಗಣದಲ್ಲಿ ಭಕ್ತರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಯಿತು.
ನಂತರ ಕೃಷ್ಣೈಕ್ಯರಾದ ಪೇಜಾವರ ಶ್ರೀಗಳ ಪಾರ್ಥಿವ ಶರೀರವನ್ನು ಉಡುಪಿಯಿಂದ ಸೇನಾ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತರಲಾಯಿತು.

ಹರ್ನಿಯಾ ಆಪರೇಷನ್ ನಡೆದಾಗಲೇ ವಿದ್ಯಾಪೀಠದಲ್ಲಿ ನನ್ನ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಎಂಬ ಕೊನೆಯ ಆಸೆಯನ್ನು ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉಡುಪಿಯ ಅಜ್ಜರಕಾಡು ಮೈದಾನದಿಂದ ಬೆಂಗಳೂರಿಗೆ ಪಾರ್ಥಿವ ಶರೀರವನ್ನು ತಂದು ನ್ಯಾಷನಲ್ ಮೈದಾನದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿತ್ತು.
ನಂತರ ಪೇಜಾವರ ಮಠದ ವಿಶ್ವ ಪ್ರಸನ್ನ ಕಿರಿಯ ಶ್ರೀಗಳು ವಿದ್ಯಾಪೀಠ ದಲ್ಲಿ ಧಾರ್ಮಿಕ ವಿಧಿ ವಿಧಾನ ಪೂರೈಸಿ ಬ್ರಹ್ಮ ರಂದ್ರದಲ್ಲಿ ತೆಂಕಿನಕಾಯಿ,ಹತ್ತಿ,ಸಾಸಿವೆ,ಉಪ್ಪು,ತುಳಸಿಗಳನ್ನು ಹಾಕಿ ಜೊತೆಯಲ್ಲಿ ಶ್ರೀಗಳು ಬಳಸಿದ ವಸ್ತುಗಳು,ಸಾಲಿಗ್ರಾಮವನ್ನು ಇಟ್ಟು ಮಣ್ಣು ಮುಚ್ಚಿ ನಂತರ ತುಳಸಿಗಿಡ ನೆಟ್ಟು ಬೃದಾವನ ನಿರ್ಮಿಸಲಾಯಿತು‌

ವಿದ್ಯಾಪೀಠದಲ್ಲಿ ಅಂತಿಮ ಕ್ರಿಯೆ ಮಾಡುವಂತೆ ಪದೇ ಪದೇ ಹೇಳುತಿದ್ರು!

ವಿದ್ಯಾಪೀಠದಲ್ಲಿ ಅಂತಿಮ ಕ್ರಿಯಾ ವಿಧಿವಿಧಾನ ನಡೆಯಬೇಕು ಎಂದು ಪೇಜಾವರ ಶ್ರೀಗಳು ಲಿಖಿತ ರೂಪದಲ್ಲಿ ಬರೆದುಕೊಟ್ಟಿದ್ದರು. ಲಿಖಿತ ರೂಪದಲ್ಲಿ ಬರೆದು ಆಗಾಗ ಕಿರಿಯ ಶ್ರೀಗಳಿಗೆ ಅದನ್ನು ತೋರಿಸುತ್ತಿದ್ದರು. ಜಾಗವನ್ನು ಕೂಡ ಸೂಚಿಸಿ, ಇಲ್ಲೇ ನನ್ನ ಬೃಂದಾವನ ಆಗಬೇಕು ಎಂದು ಶ್ರೀಗಳು ಬರೆದು ಕೊಟ್ಟಿದ್ದರು. ಕಳೆದ ಬಾರಿ ಹರ್ನಿಯಾ ಅಪರೇಷನ್‍ಗೆ ಒಳಗಾಗಿದ್ದ ಶ್ರೀಗಳು ತಮ್ಮ ಕೊನೆಯಾಸೆಯ ಬಗ್ಗೆ ತಿಳಿಸಿದ್ದರು ಎಂದು ರಘುಪತಿ ಭಟ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಶ್ರೀಗಳವಬಗ್ಗೆ ಕೆಲವು ಮಾಹಿತಿ:-

ಅಷ್ಟಮಠಗಳಲ್ಲೇ88 ವರ್ಷದ ಹಿರಿಯ‌ ಯತಿ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ

ಉಡುಪಿಯಿಂದ 120ಕಿಲೋಮೀಟರ್ ದೂರವಿರುವ ಸುಭ್ರಮಣ್ಯದ ಸಮೀಪವಿರುವ ರಾಮಕುಂಜ ಗ್ರಾಮದಲ್ಲಿ 1931 ಏಪ್ರಿಲ್ 27 ರಂದು ರಾಮಕುಂಜ‌ ಎಂಬ ಹಳ್ಳಿಯಲ್ಲಿ ಪೇಜಾವರ‌ ಶ್ರೀ‌ ಜನನ.

ನಾರಾಯಣಾಚಾರ್ಯ ಕಮಲಮ್ಮ‌ ದಂಪತಿಯ ಎರಡನೇ ಪುತ್ರ ಪೇಜಾವರ ಶ್ರೀ ವಿಶ್ವೇಶತೀರ್ಥರು

ವೆಂಕಟರಮಣ ಪೇಜಾವರ ಸ್ವಾಮೀಜಿ ಮೂಲ ಹೆಸರು.

ರಾಮಕುಂಜದ ಹಳ್ಳಿಯ ಸಂಸ್ಕೃತ ಎಲಿಮೆಂಟರಿ ಶಾಲೆಯಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ

ಏಳನೆಯ ವರ್ಷದಲ್ಲೇ ಗಾಯತ್ರಿಯ ಉಪದೇಶ.

ಎಂಟನೇ ವಯಸ್ಸಲ್ಲೇ ಮುಖ್ಯಪ್ರಾಣ‌ ಸನ್ನಿಧಿಯಲ್ಲಿ‌ ಧೀಕ್ಷೆ ಪಡೆದ ಪೇಜಾವರ ಶ್ರೀಗಳು

ಪೇಜಾವರ ಮಠದ ಪರಂಪರೆಯ 32ನೆಯ ಯತಿಯಾಗಿ ಪೇಜಾವರ ಶ್ರೀ ನೇಮಕ

ಅಸ್ಪೃಶ್ಯತೆ ವಿರುದ್ದ ಧ್ವನಿ‌ ಎತ್ತುತ್ತಿದ್ದ ಪೇಜಾವರ ‌ಶ್ರೀ

ಗಾಂಧೀಜಿ‌ ವಿಚಾರದಾರೆ ಪಾಲಿಸುತ್ತಿದ್ದ ಪೇಜಾವರ ಶ್ರೀ

ಮಠದ ಯತಿಗಳು ಉತ್ಸವಗಳಲ್ಲಿ ಧರಿಸುತ್ತಿದ್ದ ಪಟ್ಟೆ ಪೀತಾಂಬರಗಳ ವೈಭವದ ಪೋಷಾಕನ್ನು ತೊರೆದು ಶುದ್ಧ ಖಾದಿಧಾರಿಯಾಗುವ ದೀಕ್ಷೆ ತೊಟ್ಟ ಪೇಜಾವರ ಶ್ರೀ

ಮಠದಲ್ಲಿ ಸ್ವಾಮಿಗಳಿಗೆ ಪ್ರತ್ಯೇಕ ಅಡುಗೆ ಮಾಡುವ ಪದ್ಧತಿಯನ್ನು ರದ್ದುಗೊಳಿಸಿದ ಪೇಜಾವರ‌ ಶ್ರೀ.

1951 ಜನವರಿ 18ರಂದು 21ರ ಹರೆಯದಲ್ಲೇ ಮೊದಲ ಪರ್ಯಾಯ ಪೀಠವೇರಿದ ಪೇಜಾವರ ವಿಶ್ವೇಶ ತೀರ್ಥರು

ಒಟ್ಟು 5ಬಾರಿ ಪರ್ಯಾಯ ಪೀಠವೇರಿ ಕೃಷ್ಣಪೂಜೆ‌‌ ನಡೆಸಿದ‌ ಎರಡನೇ ಹಿರಿಯ ಯತಿ ಎಂದು ಖ್ಯಾತಿ ಪಡೆದ ಪೇಜಾವರ ಸ್ವಾಮೀಜಿ

ಕೃಷ್ಣನನ್ನ ಉಡುಪಿಯಲ್ಲಿ ಪ್ರತಿಷ್ಟಾಪಿಸಿದ‌ ಮಧ್ವಾಚಾರ್ಯರು ಬಿಟ್ಟರೆ ಐದು ಬಾರಿ ಪರ್ಯಾಯ ಪೀಠವೇರಿದ್ದು ಪೇಜಾವರ ಶ್ರೀ ವಿಶ್ವೇಶತೀರ್ಥರು

ದಲಿತರ ಪರ ಧ್ವನಿ ಎತ್ತಿ‌‌ ದಲಿತರ ಅಭಿವೃದ್ದಿ ಪರ ಹೋರಾಟ ನಡೆಸಿದ್ದ ಪೇಜಾವರ ‌ಶ್ರೀ

ಅಸ್ಪೃಶ್ಯತೆ ವಿರುದ್ದ ಹೋರಾಟ‌‌ ನಡೆಸಿದ ಪೇಜಾವರ ಶ್ರೀ

ಲಿಂಗಾಯುತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದ ಪೇಜಾವರ ಶ್ರೀ

ಪ್ರಧಾನಿ‌ ಮೋದಿಯವರೊಂದಿಗೆ ಆತ್ಮೀಯತೆ ಹೊಂದಿರುವ ಪೇಜಾವರ ಶ್ರೀ

ಧರ್ಮ ಸಂಸತ್ ಮೂಲಕ ರಾಮಮಂದಿರ ನಿರ್ಮಾಣಕ್ಕೆ ಕರೆಕೊಟ್ಟ ಪೇಜಾವರ ಶ್ರೀ

ರಾಮಮಂದಿರ ನಿರ್ಮಾಣ ದಲ್ಲಿ ಮುಂಚೂಣಿಯಲ್ಲಿದ್ದ ಪೇಜಾವರ ಶ್ರೀ

ಕೃಷ್ಣ ಮಠದಲ್ಲಿ ಎಡೆ ಹಾಗೂ ಮಡೆ ಸ್ನಾನ ನಿಲ್ಲಿಸಿದ್ದ ಪೇಜಾವರ ಶ್ರೀ

ದಲಿತ ಖೇರಿ ಭೇಟಿ ಹಾಗೂ ವಾಸ್ತವ್ಯ ಮಾಡುತ್ತಿದ್ದ ಪೇಜಾವರ ಶ್ರೀ

ನಕ್ಸಲ್‌‌ ಪ್ರದೇಶದಲ್ಲ ಹೆಲ್ತ್ ಕ್ಯಾಂಪ್‌ ನಡೆಸಿದ‌ ಪೇಜಾವರ ಶ್ರೀ

‌ಅಡ್ವಾಣಿ, ನಿರ್ಮಲಾ ಸೀತಾರಾಮನ್ , ರಾಜನಾಥ್ ಸಿಂಗ್ ಆಪ್ತರಾಗಿದ್ದ ಪೇಜಾವರ ಶ್ರೀ

ವಿಶ್ಚಹಿಂದೂ ಪರಿಷತ್ ಪ್ರಮುಖರಾಗಿದ್ದ ಪೇಜಾವರ ಶ್ರೀ

ರಾಷ್ಟ್ರದ ‌ಸಂತರಲ್ಲಿ ಪ್ರಭಾವಿ ಹಿರಿಯ ಯತಿಯಾಗಿದ್ದ ಪೇಜಾವರ ಶ್ರೀ

ಉಡುಪಿಯ ಅಷ್ಟಮಠದಲ್ಲೇ ಹಿರಿಯ ಯತಿ

ಶೀರೂರು ಲಕ್ಷ್ಮೀವರ ತೀರ್ಥ ಸ್ಚಾಮೀಜಿ ಸಾವಿನ ಸಮಯದಲ್ಲಿ ಅಷ್ಟಮಠಕ್ಕೆ‌ ಮಾರ್ಗದರ್ಶಕರಾಗಿದ್ದ ಪೇಜಾವರ ಶ್ರೀ

ದಲಿತರಿಗೆ ಧೀಕ್ಷೆ ನೀಡುತ್ತಿದ್ದ ಪೇಜಾವರ ಶ್ರೀ

ಯೋಗ ಪೂಜೆಯಲ್ಲಿ ತಲ್ಲಿನರಾಗಿರುತ್ತಿದ್ದ ಪೇಜಾವರ ‌ಶ್ರೀ

ವಿರೋಧದ ನಡುವೆ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ನಡೆಸಿದ್ದ ಪೇಜಾವರ ಶ್ರೀ

ರಾಮಮಂದಿರ ನಿರ್ಮಾಣ ಕ್ಕೆ ಸುಪ್ರೀಂ ಗ್ರೀನ್ ಸಿಗ್ನಲ್‌ ಹಿನ್ನಲೆ ಖುಷಿ ಪಟ್ಟಿದ್ದ ಪೇಜಾವರ ಶ್ರೀ
Leave a Reply

Your email address will not be published. Required fields are marked *