BREAKING NEWS
Search

ಅಯೋಧ್ಯೆ ತೀರ್ಪು- ಹಿಂಸಾರೂಪ ಪಡೆದರೆ ಉಪವಾಸ ಮಾಡುವೆ-ಪೇಜಾವರ ಶ್ರೀ!

153

ಉಡುಪಿ:- ಅಯೋಧ್ಯೆಯ ತೀರ್ಪು ಹಿಂದೂ ಅಥವಾ ಮುಸಲ್ಮಾನರ ಪರ ಅಥವಾ ವಿರುದ್ಧ ಬಂದರೂ ಅತಿರೇಕದ ವರ್ತನೆ ಬೇಡ ಎಂದು ಪೇಜಾವರಶ್ರೀ ಮನವಿ ಮಾಡಿದ್ದಾರೆ.

ಇಂದು ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವೇಶತೀರ್ಥ ಶ್ರೀಪಾದರು, ಹಿಂದೂಗಳು-ಮುಸಲ್ಮಾನರು ಸಮಾನವಾಗಿ ಸುಪ್ರೀಂ ಕೋರ್ಟ್ ತೀರ್ಪನ್ನು ಸ್ವೀಕರಿಸಿ ಎಂದು ಕರೆ ನೀಡಿದ್ದಾರೆ.

ತೀರ್ಪಿನ ನಂತರ ಸಂಘರ್ಷ ಹಿಂಸೆಯಾದರೆ ನಾನು ಉಪವಾಸ ಮಾಡುತ್ತೇನೆ ಎಂಬ ಎಚ್ಚರಿಕೆಯನ್ನು ಸಹ ನೀಡಿದ್ದಾರೆ. ಒಂದು ವಾರದ ಒಳಗೆ ರಾಮಮಂದಿರ ತೀರ್ಪು ಬರಬಹುದು, ತೀರ್ಪು ಅನುಕೂಲವಾಗಿ ಬರುತ್ತದೆ ಎಂದು ಭಾವಿಸಿದ್ದೇವೆ ಎಂದ ಶ್ರೀಗಳು ಸಂವಿಧಾನ, ಸುಪ್ರೀಂ ಕೋರ್ಟ್ ಗೆ ದೇಶದ ಜನ ಗೌರವ ಕೊಡಬೇಕು.

ಸಂಘರ್ಷ ಪ್ರತಿಭಟನೆಗೆ ಯಾರೂ ಅವಕಾಶ ಮಾಡಿಕೊಡಬಾರದು ಎಂದರು.

ಹಿಂದೂಗಳ ಪರ ತೀರ್ಪು ಬಂದ್ರೆ ವಿಜಯೋತ್ಸವ ಬೇಡ ಬೀದಿಗಿಳಿದು ಮೆರವಣಿಗೆ ಮಾಡಬಾರದು.ಶಾಂತವಾಗಿ ಸ್ವೀಕರಿಸಬೇಕು ಎಂದು ವಿಹಿಂಪ ಕೂಡಾ ಹೇಳಿದೆ. ದೇವಸ್ಥಾನ, ಮಠದ ಒಳಗೆ ಹರ್ಷಾಚರಣೆ ಮಾಡಿದರೆ ಸಾಕು ಎಂಬ ಕರೆಯನ್ನು ನೀಡಿದ್ರು.

ಮುಸಲ್ಮಾನ ಬಾಂಧವರೂ ಕೂಡಾ ತೀರ್ಪನ್ನು ಶಾಂತವಾಗಿ ಸ್ವೀಕರಿಸಬೇಕು. ಕರ್ನಾಟಕ , ಕರಾವಳಿ ಜನ ಶಾಂತವಾಗಿರಬೇಕು.

ಹೀಗಾಗಿ ಸಂತರ ಅಭಿಪ್ರಾಯ ಕೇಳಿಕೊಂಡು ಪತ್ರಿಕಾ ಗೋಷ್ಠಿ ಮಾಡುತ್ತಿದ್ದೇನೆ.ರವಿಶಂಕರ್ ಗುರೂಜಿ ಕೂಡಾ ಶಾಂತಿ ಕಾಪಾಡಲು ಕರೆ ಕೊಟ್ಟಿದ್ದಾರೆ. ಈ ನಡುವೆ ಮಂದಿರ ವಿಚಾರದಲ್ಲಿ ಅಂತರಂಗದ ಸಂಧಾನ ಆಗಿದೆ ಎಂಬ ಮಾಹಿತಿಯು ಇದೆ ಎಂದರು.




Leave a Reply

Your email address will not be published. Required fields are marked *