ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ಕೈಕೊಟ್ಟ ಕಾರ್ಯಕರ್ತರು!

826

ಕಾರವಾರ:- ಯಲ್ಲಾಪುರದ ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ರಾಜೀನಾಮೆ ನೀಡಿ ಪಕ್ಷದ ವಿರುದ್ಧ ಬಂಡಾಯ ಎದ್ದಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಶಾಸಕರ ಮನೆಯ ಮುಂದೆ ಪ್ರತಿಭಟನೆಗೆ ಕರೆ ನೀಡಿದ್ದು ಯಾವೊಬ್ಬ ಕಾರ್ಯಕರ್ತರೂ ಪ್ರತಿಭಟನೆಗಿಳಿಯದೇ ಕೈ ಕೊಟ್ಟಿದ್ದಾರೆ.ಈ ಮೂಲಕ ಜಿಲ್ಲಾ ಕಾಂಗ್ರೆಸ್ ನಲ್ಲಿಯೂ ಕಾರ್ಯಕರ್ತರು ಹಾಗೂ ನಾಯಕರು ಬಂಡಾಯವೇಳುವ ಮುನ್ಸೂಚನೆ ಸಿಕ್ಕಂತಾಗಿದೆ.

ಇಂದು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ರವರ ನಿವಾಸದ ಮುಂದೆ ಪ್ರತಿಭಟೆನೆಗೆ ಮುಂದಾಗಿದ್ದ ಜಿಲ್ಲಾ ಕಾಂಗ್ರೆಸ್ ಮೊದಲು 11 ಗಂಟೆಗೆ ಪ್ರತಿಭಟನೆಗೆ ನಿಗದಿ ಮಾಡಿತ್ತು ,ಹೀಗಾಗಿ ಶಾಸಕರ ಮನೆಯ ಮುಂದೆ ಬಿಗಿ ಪೊಲೀಸ್ ಬಂದವಸ್ತ್ ಸಹ ಕಲ್ಪಿಸಲಾಗಿತ್ತು.


ಆದರೇ ನಿಗದಿ ಸಮಯದಲ್ಲಿ ಕಾರ್ಯಕರ್ತರು ಬಾರದೇ ಕೈಕೊಟ್ಟ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು 12 ಘಂಟೆಗೆ ಮುಂದೂಡಲಾಗಿಯಿತು. ಆದರೇ ಈ ಸಮಯದಲ್ಲೂ ಬಾರದ ಹಿನ್ನಲೆಯಲ್ಲಿ ಪ್ರತಿಭಟನೆ ಕೈ ಬಿಡಲು ಮುಂದಾಗಿದ್ದಾರೆ.




Leave a Reply

Your email address will not be published. Required fields are marked *