ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 78ಕರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು 40 ಮಂದಿ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ.
ಜಿಲ್ಲಾವಾರು ವಿವರ ಇಲ್ಲಿದೆ:-
ಅಂಕೋಲಾ- 16,
ಭಟ್ಕಳ-13,
ಹಳಿಯಾಳ- 39,
ಕಾರವಾರದಲ್ಲಿ -1,
ಕುಮಟಾ- 8,
ಮುಂಡಗೋಡು- 1

ಈವರೆಗೆ ಜಿಲ್ಲೆಯ 1,163 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 485 ಮಂದಿ ಗುಣಮುಖರಾಗಿದ್ದಾರೆ. 10 ಮಂದಿ ಸಾವನ್ನಪ್ಪಿದ್ದು, 668 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
ಇಂದು ಬಿಡುಗಡೆಯಾದವರಲ್ಲಿ ಹೊನ್ನಾವರದ ಓರ್ವ, ಕಾರವಾರದಲ್ಲಿ ಐವರು, ಕುಮಟಾದಲ್ಲಿ 19, ಮುಂಡಗೋಡದಲ್ಲಿ 14, ಶಿರಸಿಯಲ್ಲಿ ಒಬ್ಬರು, ಒಟ್ಟು 40 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.