ಉತ್ತರ ಕನ್ನಡ ಜಿಲ್ಲೆಯಲ್ಲಿ85 ಜನರಿಗೆ ಪಾಸಿಟಿವ್! ಕರೋನಾಕ್ಕೆ ಇಬ್ಬರು ಬಲಿ?

2588

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 85 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 90 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ತಾಲೂಕುವಾರು ವಿವರ ಇಲ್ಲಿದೆ:-

ಕಾರವಾರ-13
ಕುಮಟಾ-13
ಅಂಕೋಲಾ- 5
ಹೊನ್ನಾವರ- 4
ಭಟ್ಕಳ-11
ಶಿರಸಿ- 9
ಯಲ್ಲಾಪುರ-1
ಮುಂಡಗೋಡ-03
ಹಳಿಯಾಳ-03
ದಾಂಡೇಲಿ- 23

ಕಾರವಾರದಲ್ಲಿ ಇಬ್ಬರು, ಕುಮಟಾದಲ್ಲಿ 18, ಹೊನ್ನಾವರದಲ್ಲಿ 13, ಸಿದ್ದಾಪುರ, ಯಲ್ಲಾಪುರದಲ್ಲಿ ತಲಾ ನಾಲ್ವರು, ಮುಂಡಗೋಡದಲ್ಲಿ ಮೂವರು, ಹಳಿಯಾಳದಲ್ಲಿ 44, ಜೊಯಿಡಾದಲ್ಲಿ ಇಬ್ಬರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಹಳಿಯಾಳದಲ್ಲಿ ಇಂದು ಇಬ್ಬರ ಸಾವಾಗಿದೆ.

ಈವರೆಗೆ ಜಿಲ್ಲೆಯ 1,753 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 936 ಮಂದಿ ಗುಣಮುಖರಾಗಿದ್ದಾರೆ. 16 ಮಂದಿ ಸಾವನ್ನಪ್ಪಿದ್ದು, 801 ಸಕ್ರಿಯ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.

85 ಮಂದಿಗೆ ಹೋಮ್ ಐಸೋಲೇಶನ್

ಜಿಲ್ಲೆಯಲ್ಲಿ ಕೋವಿಡ್ ಹೆಲ್ತ್ ಸೆಂಟರ್, ಕೋವಿಡ್ ಕೇರ್ ಸೆಂಟರ್ ಹಾಗೂ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್- 19 ವಾರ್ಡಿನಲ್ಲಿ ಈವರೆಗೆ ಸೋಂಕಿತರಿಗೆ ಚಿಕಿತ್ಸೆ ನಡೆಯುತ್ತಿತ್ತು. ಸೋಂಕಿತರ ಆರೋಗ್ಯ ಸ್ಥಿತಿಯ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿ ದಾಖಲು ಮಾಡಲಾಗುತ್ತಿತ್ತು. ಆದರೆ, ಇದೀಗ ರೋಗ ಲಕ್ಷಣ ರಹಿತವಾಗಿರುವವರಿಗೆ ಹೋಮ್ ಐಸೋಲೇಶನ್ ಪ್ರಾರಂಭಿಸಲಾಗಿದೆ.

ಮನೆಯಲ್ಲೇ ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ನಿಗದಿತ ಸಮಯಕ್ಕೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಹಾಗೂ ಪೊಲೀಸರು ಇವರ ಮನೆಗಳಿಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ತೆರಳುತ್ತಾರೆ.

ಈ ರೀತಿ 85 ಮಂದಿ ಹೋಮ್ ಐಸೋಲೇಶನ್‍ಗೆ ಒಳಪಟ್ಟಿದ್ದಾರೆ. ಕಾರವಾರದಲ್ಲಿ ಐವರು, ಅಂಕೋಲಾದಲ್ಲಿ 8, ಕುಮಟಾದಲ್ಲಿ 4, ಹೊನ್ನಾವರದಲ್ಲಿ ಒಬ್ಬರು, ಭಟ್ಕಳದಲ್ಲಿ 36, ಶಿರಸಿಯಲ್ಲಿ 18, ಯಲ್ಲಾಪುರದಲ್ಲಿ 9, ಮುಂಡಗೋಡ ಹಾಗೂ ಹಳಿಯಾಳದಲ್ಲಿ ತಲಾ ಇಬ್ಬರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರವಾರದಲ್ಲಿ ಸೊಂಕಿತರನ್ನು ಕರೆದೊಯ್ಯಲು ವಿರೋಧ

ಸೋಂಕಿತರನ್ನ ಕ್ವಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಲು ಸ್ಥಳೀಯರಿಂದ ಅಡ್ಡಿ ಪಡಿಸಿ ವಿರೋಧಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ
ಕಾರವಾರದ ಕೆಇಬಿ ಕಾಲೋನಿ ಬಳಿ ನಡೆದಿದೆ.
ಇಬ್ಬರು ಮಕ್ಕಳು, ಮೂವರು ಪುರುಷರಲ್ಲಿ ಕರೋನಾ ಸೋಂಕು ಪತ್ತೆಯಾಗಿತ್ತು.ಈ ಹಿನ್ನಲೆಯಲ್ಲಿ ಇಂದು ಸೋಂಕಿತರನ್ನ ಕರೆದೊಯ್ಯಲು ಅಂಬ್ಯುಲೆನ್ಸ್ ತಂದಿದ್ದ ಆಸ್ಪತ್ರೆ ಸಿಬ್ಬಂದಿಗಳಿಗೆ ಕರೆದೊಯ್ಯಲು ಅಡ್ಡಿ ಪಡಿಸಿದ್ದು
ಕ್ವಾರಂಟೈನ್ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಇಲ್ಲ,
ಮಕ್ಕಳನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಿ,ಮನೆಯಲ್ಲಿ ಓರ್ವ ಬಾಲಕಿಯನ್ನು ಹೊರತುಪಡಿಸಿ ಉಳಿದವರಿಗೆ ಸೊಂಕು ತಗುಲಿದೆ. ಈಗ ಅವರನ್ನು ನೋಡಿಕೊಳ್ಳಲೂ ಯಾರೂ ಇಲ್ಲ. ಎಂದು ಆರೋಪಿಸಿ ಸ್ಥಳೀಯರು ಕರೆದೊಯ್ಯಲು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರಿಗು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದ್ದು ಸ್ಥಳೀಯರನ್ನ ಚದುರಿಸಿ ಸೋಂಕಿತರನ್ನ ಅಂಬ್ಯಲೆನ್ಸ್‌ಗೆ ಹತ್ತಿಸಿದ್ದು ಈ ವೇಳೆ ಸೊಂಕಿತರು ಆರೋಗ್ಯ ಸಿಬ್ಬಂದಿ ತಂದಿದ್ದ ಪಿ.ಪಿ ಕಿಟ್ ಸಹ ಧರಿಸದೇ ಅಂಬುಲೆನ್ಸ್ ಗೆ ಹತ್ತಿದ್ದು ಕೋವಿಡ್ ವಾರ್ಡ ಗೆ ಕರೆದೊಯ್ಯಲಾಯಿತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ