BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಮನೆಗೇ ಬರುತ್ತಿದೆ ಅಗತ್ಯ ವಸ್ತುಗಳು -ಸುಕಾಸುಮ್ಮನೇ ಓಡಾಡುವವರಿಗೆ ಕೊಡೋ ಶಿಕ್ಷೆ ಏನು ಗೊತ್ತಾ?

1029

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನರು ಅನಾವಶ್ಯಕವಾಗಿ ಮನೆಯಿಂದ ಹೊರ ಬಂದು ಓಡಾಟ ನಡೆಸುವುದನ್ನ ತಪ್ಪಿಸಲು ಜಿಲ್ಲಾಡಳಿತ ಮನೆ ಬಾಗಿಲಿಗೆ ವಸ್ತುಗಳನ್ನ ಕೊಡುವ ಕ್ರಮಕ್ಕೆ ಇಂದಿನಿಂದಲೇ ಚಾಲನೆ ನೀಡಿದೆ.

ರಾಜ್ಯದಲ್ಲಿಯೇ ಪ್ರಥಮ‌‌ ಪ್ರಯತ್ನ ಎನ್ನುವಂತೆ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದ್ದು ಈಗಾಗಲೇ ಅಗತ್ಯ ವಸ್ತುಗಳ ಮಾರಾಟಗಾರರಿಗೆ ಸ್ಥಳೀಯ ಸಂಸ್ಥೆಗಳ ಮೂಲಕ ಪಾಸ್ ವಿತರಣೆ ಮಾಡಿದೆ.

ಈಗಾಗಲೇ ಕೊರೋನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್ ಡೌನ್ ಆಗಿದ್ದರು ಅಗತ್ಯ ವಸ್ತುಗಳ ಖರೀದಿ ನೆಪ ಹೇಳಿ ಹಲವರು ಜಿಲ್ಲೆಯಲ್ಲಿ ಅನವಶ್ಯಕವಾಗಿ ಮನೆ ಬಿಟ್ಟು ಹೊರ ಬರುತ್ತಿದ್ದಾರೆ. ಜನರು ಗುಂಪು ಗುಂಪಾಗಿ ಸೇರುತ್ತಿರುವುದರಿಂದ ವೈರಸ್ ಹರಡುವ ಸಾಧ್ಯತೆ ಮನಗಂಡು ಮನೆ ಮನೆಗೆ ಅಗತ್ಯ ವಸ್ತುಗಳನ್ನು ಇಂದಿನಿಂದಲೇ ವಿತರಣೆ ಮಾಡುತ್ತಿದೆ.

ಅಗತ್ಯ ವಸ್ತುಗಳಾದ ದಿನಸಿ, ಹಾಲು, ತರಕಾರಿ, ಮೊಟ್ಟೆ, ಸೀಲ್ಡ್ ನೀರನ್ನ ವ್ಯಾಪಾರಸ್ಥರ ಮೂಲಕ ಮನೆಗಳ ಬಳಿಯೇ ಬಂದು ವಿತರಣೆ ಮಾಡುತ್ತಿದೆ. ಪ್ರತ್ಯೇಕ ವಾರ್ಡಗಳಿಗೆ ವ್ಯಾಪಾರಸ್ಥರನ್ನ ವಿಂಗಡಿಸಿ ವಸ್ತುಗಳ ವಿತರಣೆ ಮಾಡಲಾಗುತಿದ್ದು ಇದರಿಂದ ಜನರು ಹೊರ ಹೋಗುವುದನ್ನು ತಪ್ಪಿಸಲಾಗಿದೆ.

ಸುಮ್ಮ ಸುಮ್ಮನೆ ಓಡಾಡುವವರಿಗೆ ಶಿಕ್ಷೆ ಏನು ಗೊತ್ತಾ?:-

ಜಿಲ್ಲಾಡಳಿತದ ಆದೇಶ‌ ಮೀರುವವರ ವಿರುದ್ಧ ಇನ್ನು ಖಡಕ್ ಆ್ಯಕ್ಷನ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಜಿಲ್ಲಾಡಳಿತ ಬಂದಿದೆ.

ಆದೇಶ ಉಲ್ಲಂಘಿಸಿ ರಸ್ತೆ ಬದಿ ತಿರುಗುವವರನ್ನು ಇನ್ನು ಸುಮ್ಮನೇ ಬಿಡುವ ಮಾತಿಲ್ಲ.
ಗಂಭೀರ ಸ್ಥಿತಿಯ ಬಗ್ಗೆ ನಿರ್ಲಕ್ಷ್ಯ ಮಾಡುವವರನ್ನು ಸಾರ್ವಜನಿಕವಾಗಿಯೇ ತೋರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು ನಾಳೆಯಿಂದ ಚಾಲ್ತಿಗೆ ಬರಲಿದೆ.
ಹೌದು ಪ್ರಥಮ ಬಾರಿ ನಿಯಮ ಉಲ್ಲಂಘಿಸಿದಲ್ಲಿ ಕೈ ಮೇಲೆ ಅಳಿಸಲಾಗದ ಇಂಕ್ ಸೀಲ್ ಹಾಕಲಾಗುತ್ತದೆ.

ಜಿಲ್ಲಾಧಿಕಾರಿ ಏನು ಹೇಳಿದ್ದಾರೆ ತಿಳಿಯಲು ಕೆಳಗಿನ ವೀಡಿಯೋ ಲಿಂಕ್ ಗೆ ಕ್ಲಿಕ್ ಮಾಡಿ:-

ಎರಡನೇ ಬಾರಿ ನಿಯಮ ಉಲ್ಲಂಘಿಸಿದಲ್ಲಿ ಸಾರ್ವಜನಿಕವಾಗಿ ಹಾಗೂ ವ್ಯಕ್ತಿಯ ಮನೆಯ ಬಳಿಕ ಹೆಸರು ಮೈಕ್ ಮೂಲಕ ಘೋಷಣೆ ಮಾಡಿ ಮಾನ ಹರಾಜು ಹಾಕಲಾಗುತ್ತೆ.
ಇದಕ್ಕೂ ಮೀರಿ ಮೂರನೇ ಬಾರಿ ನಿಯಮ ಉಲ್ಲಂಘಿಸಿದಲ್ಲಿ ವ್ಯಕ್ತಿಯ ಫೋಟೊ ಜಿಲ್ಲಾಡಳಿತದ ವೆಬ್‌ಸೈಟ್ ಹಾಗೂ ಸಾರ್ವಜನಿಕ‌ ಸ್ಥಳಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ.
ನಿಯಮ‌ ಉಲ್ಲಂಘಿಸುವವರ ವಾಹನದ ರಿಜಿಸ್ಟ್ರೇಶನ್ ಹಾಗೂ ಲೈಸೆನ್ಸ್ ರದ್ದುಗೊಳಿಸುವುದಾಗಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಭಟ್ಕಳದಲ್ಲಿ ವಿದೇಶ ದಿಂದ ಬಂದವರಿಗೆ ಶಾಹಿ ಹಾಕುತ್ತಿರುವುದು.


ಜನರಿಗೆ ಮನೆಯಲ್ಲೇ ಇರಿ, ಯಾವುದಕ್ಕೂ ಭಯಪಡುವ ಅಗತ್ಯವಿಲ್ಲ,ದಿನನಿತ್ಯದ ಅಗತ್ಯ ಸಾಮಾನುಗಳನ್ನು ಮನೆಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ,ಜನರು ನಿಯಮ ಉಲ್ಲಂಘಿಸುವುದನ್ನು ಸರಿಮಾಡಲು ಸಮಯ ವ್ಯರ್ಥವಾಗುತ್ತಿದೆ,ಜಿಲ್ಲಾಡಳಿತದೊಂದಿಗೆ ಸಾಥ್ ನೀಡಿದಲ್ಲಿ ಎಲ್ಲಾ ವ್ಯವಸ್ಥೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಹೇಳಿದ್ದಾರೆ.




Leave a Reply

Your email address will not be published. Required fields are marked *