ಮಳೆ ಅಬ್ಬರ ಅಂಕೋಲಾದಲ್ಲಿ 40 ಮನೆಗಳು ಜಲಾವೃತ

1796

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ವರುಣನ ಆರ್ಬಟಕ್ಕೆ ನದಿಬಾಗ ಸಮುದ್ರ ತೀರದಲ್ಲಿನ ೪೦ಕ್ಕೂ ಹೆಚ್ಚು ಮನೆಗಳು ಜಲಾವ್ರತವಾಗಿವೆ. ಮನೆಯಲ್ಲಿ ಸುಮಾರು ಆರು ಅಡಿ ನೀರು ಎರುತ್ತಿದ್ದು ಮನೆಗಳಲ್ಲಿ ನೀರು ತುಂಬುತ್ತಿದೆ.

ಗಂಜಿ ಕೇಂದ್ರ ದಲ್ಲಿ ಸಂತ್ರಸ್ಥರು

ಈ ಮನೆಯ ಜನರನ್ನು ನದಿಬಾಗ ಶಾಲೆಗೆ ಸ್ಥಳಾಂತರಿಸಿದ್ದಾರೆ. ಶಾಲೆಯಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ. ಗಂಜಿ ಕೇಂದ್ರಕ್ಕೆ ಸುಮಾರು ೮೦ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಸ್ಥಳಕ್ಕೆ ತಹಶಿಲ್ದಾರರ ಉದಯ ಕುಂಬಾರ ಪಿಎಸ್ಐ ಸಂಪತಕುಮಾರ ತಾ.ಪಂ ಇಒ ಪಿ.ವಾಯ.ಸಾವಂತ ಬೇಟಿ ನೀಡಿ ಜನರನ್ನು ಸ್ಥಳಾಂತರಿಸುತಿದ್ದು ನದಿ ಭಾಗದ ಕೋಡಿಯನ್ನು ಒಡೆಯಲಾಗಿದ್ದು ನೀರು ಸರಾಗವಾಗಿ ಸಮುದ್ರ ಸೇರಲು ಅನುವುಮಾಡಿಕೊಡಲಾಗಿದೆ. ಇನ್ನು ಸಮುದ್ರದಲ್ಲಿ ಅಲೆಗಳ ಹೊಡೆತದ ಜೊತೆ ಸಮುದ್ರ ಉಬ್ಬರ ಪ್ರಾರಂಭವಾಗಿದ್ದು ಸಮುದ್ರ ಭಾಗದ ಜನರಿಗೆ ಕಂಠಕವಾಗಿ ಪರಿಣಮಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ