ಭಾರಿ ಮಳೆ :ಅಂಕದಲ್ಲಿ ಗುಡ್ಡ ಕುಸಿತ

115

ಮಳೆಯಿಂದ ಗುಡ್ಡ ಕುಸಿದು ರಸ್ತೆಯಲ್ಲಿ ನಿಲ್ಲಿಸಿದ್ದ ಲಾರಿಯೆ ಮೇಲೆ ಬಿದ್ದು ಚಾಲಕನಿಗೆ ಘಾಯವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೩ ರ ರಾಮನಗುಳಿಯಲ್ಲಿ ನಡೆದಿದೆ.

ಗುಡ್ಡದ ಪಕ್ಕದಲ್ಲಿ ಲಾರಿ ನಿಲ್ಲಿಸಿದ್ದರಿಂದ ಕುಸಿತದ ವೇಳರ ಲಾರಿ ಮೇಲೆ ಬಿದ್ದ ಮಣ್ಣಿನಲ್ಲಿ ಹುಗಿದು ಹೋಗಿದೆ.
ಈ ಸಂದರ್ಭದಲ್ಲಿ ಗಾಯಗೊಂಡ ಲಾರಿ ಚಾಲಕನಿಗೆ ಅಂಕೋಲಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಗುಡ್ಡ ಕುಸಿತ ಹಿನ್ನಲೆಯಲ್ಲಿ ಹುಬ್ಬಳ್ಳಿ -ಯಲ್ಲಾಪುರ ಅಂಕೋಲ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು ರಸ್ತೆ ಸಂಚಾರಕ್ಕೆ ಅರಣ್ಯ ಇಲಾಖೆ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.




Leave a Reply

Your email address will not be published. Required fields are marked *