BREAKING NEWS
Search

ಸರ್ಕಾರದ ಕೆಲಸ ಸರಿಯಾದ ಸಮಯದಲ್ಲಿ ಆಗಲ್ಲ,ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪ!

174

ಕಾರವಾರ :- ರಾಜ್ಯದಲ್ಲಿ ಭ್ರಷ್ಟಾಚಾರ ಕಿತ್ತು ತಿನ್ನುತ್ತಿದೆ,ಸರಕಾರದ‌ ಕೆಲಸ ಸರಿಯಾದ ಸಮಯದಲ್ಲಾಗಲ್ಲ, ಪರಿಹಾರ ಪಡೆಯಲು ಕೆಲವೆಡೆ ಹಣ ನೀಡಬೇಕಾದ ಕೆಲಸಗಳೂ ನಡೀತಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಅಸಮದಾನ ಹೊರಹಾಕಿ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ನೀಡಿದರು.ಉತ್ತರ ಕನ್ನಡ ಜಿಲ್ಲೆಯ ಬನವಾಸಿಯ ಕದಂಬೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭ್ರಷ್ಟ ಅಧಿಕಾರಿಗಳಿಗೆ ಸರಿಯಾದ ಶಿಕ್ಷೆ ಹಾಗೂ ಅಗತ್ಯ ಬಿದ್ದರೆ ಕೆಲಸದಿಂದ ತೆಗೆಯಲಾಗುವುದು,ಭ್ರಷ್ಟಾಚಾರದ ವಿರುದ್ಧ ಸೂಕ್ತ ಕಾನೂನು ಜಾರಿಗೊಳಿಸಲಾಗುವುದು,ಸರಕಾರಿ ನೌಕರರು ಸುಧಾರಣೆಯಾಗದಿದ್ರೆ ಕಠಿಣ ಕ್ರಮ ಕೈಗೊಳ್ಳಲಿದ್ದೇನೆ ಎಂದರು.

ಬನವಾಸಿ ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ ಕ್ಷೇತ್ರ,ಕದಂಬೋತ್ಸವಕ್ಕೆ ಕರ್ನಾಟಕ ಸರಕಾದ ಮರುಜೀವ ನೀಡಿದೆ,ಈ ನಾಡು ಧರ್ಮ ಭೂಮಿ, ಕರ್ಮ ಭೂಮಿ ರಾಜ್ಯದ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಕೆಲಸ ನಡೆಯಲಿದೆ,
ಡಾ.‌ಸುಧಾಮೂರ್ತಿಯವರ ಅಧ್ಯಕ್ಷತೆಯಲ್ಲಿ ಸಮಿತಿ ಮಾಡಿ ಕೆಲಸ‌ ಮಾಡ್ತಿದ್ದೇವೆ,
ಪಂಪ‌ ಪ್ರಶಸ್ತಿಯನ್ನು ದಲಿತ ಕವಿ ಎಂದು ಖ್ಯಾತಿ ಅವರಿಗೆ ನೀಡಿರೋದು ಉತ್ತಮವಾಗಿದೆ,ದಲಿತ ಹೋರಾಟಕ್ಕೆ ಕಾವ್ಯದ ಮೂಲಕ ಧ್ವನಿ ಎತ್ತಿದವರು ಡಾ. ಸಿದ್ಧಲಿಂಗಯ್ಯ.ಯುವಕರಿಗೆ ಉದ್ಯೋಗ ಕೆಲಸ ಒದಗಿಸಲು ಪ್ರವಾಸೋದ್ಯಮ ಇಲಾಖೆ ಸಮರ್ಥವಾಗಿದೆ ,ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಬೆಳೆಸಲಾಗುವುದು,
ಬನವಾಸಿಯನ್ಮು ಪ್ರವಾಸೋದ್ಯಮ ಕ್ಷೇತ್ರವನ್ನಾಗಿಸಲಲು ಸರಕಾರ ಆದ್ಯತೆ ನೀಡಿದೆ
25 ಕೆರೆಗಳ ಪುನಶ್ಚೇತನ, ಮಂಗನ ಕಾಯಿಲೆ ಬಗ್ಗೆ ವಿಶೇಷ ಸಭೆ ನಡೆಸಿ ಹಬ್ಬದಂತೆ ಕ್ರಮ,‌ಮೀನುಗಾರ ರಕ್ಷಣೆಗೂ ಸರಕಾರ ಆದ್ಯತೆ ನೀಡಿದೆ.ರಾಜ್ಯದ ಸುಸ್ಥಿರ ಅಭಿವೃದ್ಧಿಗೆ ಪ್ರಾಮುಕ್ಯತೆ ನೀಡಲಾಗುತ್ತದೆ.
ಮಾ. ೫ಕ್ಕೆ ಬಜೆಟ್ ಮಂಡನೆಯಾಗಲಿದ್ದು, ಸಿದ್ಧತೆ ಪ್ರಾರಂಭವಾಗಿದೆ,ಅನ್ನದಾತ ರೈತನ ಸಮಸ್ಯೆ ಇನ್ನೂ ಪರಿಹಾರಗೊಳ್ಳಬೇಕಿದೆ ಎಂದರು.
Leave a Reply

Your email address will not be published. Required fields are marked *