BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟ ಮತ್ತು ಸಂಗ್ರಹಣೆಗೆ ನಿಷೇಧ ಹೇರಿದ ಜಿಲ್ಲಾಡಳಿತ!

818

ಕಾರವಾರ ಡಿ.18 : ಜಿಲ್ಲೆಯ ಗ್ರಾಮ ಪಂಚಾಯತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ಜರುಗಲಿದ್ದು, ಮುಕ್ತ ಹಾಗೂ ಶಾಂತಿಯುತ ಮತದಾನ ನಡೆಸಲು ಡಿಸೆಂಬರ 22 ಹಾಗೂ 27 ರಂದು ಮತದಾನ ಜರುಗುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮದ್ಯಪಾನ, ಮದ್ಯಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾಗಿರುವ ಡಾ. ಹರೀಶ ಕುಮಾರ ಕೆ. ಅವರು ಆದೇಶ ಹೊರಡಿಸಿದ್ದಾರೆ.


ಮೊದಲ ಹಂತದ ಮತದಾನದ 48 ಗಂಟೆ ಪೂರ್ವ ದಿವಸಗಳು ಹಾಗೂ ಮತದಾನದ ದಿವಸ ಅಂದರೆ ದಿನಾಂಕ 20-12-2020 ರಂದು ಸಾಯಂಕಾಲ 5 ಗಂಟೆಯಿಂದ ದಿನಾಂಕ 22-12-2020ರ ಸಾಯಂಕಾಲ 5 ಗಂಟೆವರೆಗೆ ಹಾಗೂ ಎರಡನೇ ಹಂತದ ಮತದಾನದ 48 ಗಂಟೆ ಪೂರ್ವ ದಿವಸಗಳು ಹಾಗೂ ಮತದಾನದ ದಿವಸ ಅಂದರೆ 25-12-2020 ರಂದು ಸಾಯಂಕಾಲ 5 ಗಂಟೆಯಿಂದ ದಿನಾಂಕ 27-12-2020ರ ಸಾಯಂಕಾಲ 5 ಗಂಟೆವರೆಗೆ ಮದ್ಯಪಾನ, ಮದ್ಯಮಾರಾಟ, ಮದ್ಯ ಸಾಗಾಣಿಕೆ ಹಾಗೂ ಮದ್ಯ ಸಂಗ್ರಹ ನಿಷೇಧಿಸಲಾಗಿದ್ದು, ಶುಷ್ಕ ದಿನಗಳೆಂದು ಘೋಷಿಸಲಾಗಿದೆ.
ಈ ಅವಧಿಯಲ್ಲಿ ಮದ್ಯದ ಅಂಗಡಿಗಳು, ಬಿಯರ್ ಬಾರ್‌ಗಳು, ಕ್ಲಬ್‍ಗಳು ಮತ್ತು ಮದ್ಯದ ಡಿಪೋಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!