ಕಾರವಾರ:- ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮ ಪಂಚಾಯತ್ ಮೇಲೆ ಎಸಿಬಿ ದಾಳಿ ನಡೆಸಿ ಇ ಸ್ವತ್ತು ನೋಂದಣಿಗಾಗಿ ಲಂಚ ಪಡೆಯುತ್ತಿದ್ದ ಅಕೌಂಟೆಂಟ್ ವಶಕ್ಕೆ ಪಡೆದಿದ್ದಾರೆ.

ಅಣ್ಣಯ್ಯ ನಾಯ್ಕ ಲಂಚಪಡೆಯುತ್ತಿದ್ದ ಅಕೌಂಟೆಂಟ್ ಆಗಿದ್ದು ದೇವಿದಾಸ ನಾಯ್ಕ ಎಂಬುವವರಿಂದ ಐದು ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ ವಶಕ್ಕೆ ಪಡೆದಿದೆ.
ಎಸಿಬಿ ಡಿವೈಎಸ್ಪಿ ಶ್ರೀಕಾಂತ ನೇತೃತ್ವದಲ್ಲಿ ದಾಳಿ ನಡೆದಿದ್ದು ಅಧಿಕಾರಿಗಳು ಪ್ರಕರಣ ಸಂಬಂಧ ತನಿಖೆ ನಡೆಸುತಿದ್ದಾರೆ.