BREAKING NEWS
Search

ಭಟ್ಕಳದಲ್ಲಿ ನಾಳೆಯಿಂದ ಕಂಟೈನ್ಮೆಂಟ್ ಝೋನ್ ನಲ್ಲಿ ಸಡಿಲಿಕೆ!

872

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಾಳೆಯಿಂದ ಮುಂಜಾನೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಾರ್ವಜನಿಕ ಚಟುವಟಿಕೆಗೆ ಅವಕಾಶ ನೀಡುವ ಮೂಲಕ ಲಾಕ್ ಡೌನ್ ನಲ್ಲಿ ಸಡಿಲಿಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಹೇಳಿದ್ದಾರೆ.

ಇಂದು ಭಟ್ಕಳದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಿರಾಣಿ, ಮೆಡಿಕಲ್, ದಿನಸಿ, ಬ್ಯಾಂಕ್, ಗ್ಯಾರೇಜ್, ಸಲೂನ್, ಪೆಟ್ರೋಲ್ ಬಂಕ್, ಕಟ್ಟಡ ನಿರ್ಮಾಣದ ಸಾಮಗ್ರಿಗಳ ಅಂಗಡಿಗಳಿಗೆ, ಆಟೋ ಮೊಬೈಲ್, ಬಟ್ಟೆ, ಸೂಪರ್ ಮಾರ್ಕೆಟ್ ಗಳನ್ನು ಷರತ್ತುಬದ್ಧವಾಗಿ ತೆರೆಯಲು ಅವಕಾಶ ನೀಡಲಾಗುತ್ತಿದೆ. ಆಟೊಗಳನ್ನು ಓಡಿಸಲೂ ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

ಜೂನ್ 8ರವರೆಗೆ ಈ ಸಡಿಲಿಕೆ‌ ಜಾರಿಯಲ್ಲಿದ್ದು, ಜನರ ಓಡಾಟದ ಮೇಲೆ ನಿಗಾ ಇಡಲಾಗುತ್ತದೆ. ನಂತರ ಇನ್ನಷ್ಟು ಸಡಿಲಿಕೆಗೆ ಚಿಂತನೆ ಮಾಡಲಿದ್ದೇವೆ ಎಂದರು.

ಲಾಕ್ ಡೌನ್ ಸಡಿಲಿಕೆಯ ಅವಧಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಧರಿಸುವಿಕೆ ಕಡ್ಡಾಯವಾಗಿದೆ. ಅಂಗಡಿಗೆ ಬರುವ ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ನೋಡಿಕೊಳ್ಳುವುದು ಅಂಗಡಿಕಾರರ ಜವಾಬ್ದಾರಿ. ಇದಕ್ಕೆ ವಿಫಲವಾದಲ್ಲಿ ಅವರ ಅಂಗಡಿ ಪರವಾನಿಗೆ ರದ್ದಾಗಲಿದೆ ಎಂದು ಹೇಳಿದರು.ಕಳೆದ ಮೂರು ತಿಂಗಳಿಂದ ಕರೋನಾ ಸೊಂಕಿನಿಂದ ಭಟ್ಕಳ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು ಸ್ಥಳೀಯ ಜನರಿಗೆ ಅಗತ್ಯ ವಸ್ತುಗಳು ಸಹ ಸಿಗುವುದು ದುಸ್ತರವಾಗಿತ್ತು.ಆದರೇ ನಾಳೆಯಿಂದ ಭಟ್ಕಳ ಜನರಿಗೆ ಅಲ್ಪ ನೆಮ್ಮದಿ ದೊರೆಯಲಿದೆ.
Leave a Reply

Your email address will not be published. Required fields are marked *