ಭಟ್ಕಳದಲ್ಲಿ ಎರಡು ದಿನದಲ್ಲಿ 21 ಕ್ಕೇರಿದ ಕರೋನ ಸೊಂಕಿತರು!

2234

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದ ಮತ್ತೋರ್ವ ಮಹಿಳೆಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಸಕ್ರಿಯ ಸೋಂಕಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದ್ದು ಜಿಲ್ಲೆಯಲ್ಲಿ ಒಟ್ಟು ಸೊಂಕಿತರು 32 ಕ್ಕೆ ಜಿಗಿದಿದೆ.

ಇಂದು ಬೆಳಿಗ್ಗಿನ ಬುಲೆಟಿನ್ ನಲ್ಲಿ 7 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇಂದು ಸಂಜೆ ವೇಳೆ ಬಿಡುಗಡೆಯಾದ ಬುಲಟಿನ್ ನಲ್ಲಿ 32 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕಿತ ಮಹಿಳೆ ಕುಟುಂಬದ 8 ಜನರಿಗೆ ಹಾಗೂ ಕುಟುಂಬದ ಸಂಪರ್ಕದಲ್ಲಿದ್ದ 4ಜನರಿಗೆ ನಿನ್ನೆ ಸೋಂಕು ಧೃಡಪಟ್ಟಿತ್ತು.

ಕಳೆದ ನಾಲ್ಕು ದಿನದ ಹಿಂದೆ ಇದೇ ಕುಟುಂಬದ 18 ವರ್ಷದ ಯುವತಿಗೆ ಕೊರೋನಾ ಸೋಂಕು ಕಂಡು ಬಂದಿತ್ತು.

ಮಹಿಳೆಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಇದೀಗ ಮಹಿಳೆಗೂ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಪರ್ಕದಿಂದ ಇನ್ನೂ ಕೆಲವರಿಗೆ ಸೋಂಕು ತಗಲಿರುವ ಸಾಧ್ಯತೆ ಇದ್ದು ಮತ್ತಷ್ಟು ಸೊಂಕಿತರ ಸಂಖ್ಯೆ ಹೆಚ್ಚಾಗಲಿದ್ದು ನಾಳೆ ಮತ್ತಷ್ಟು ಏರಿಕೆಯಾಗಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ