ಭಟ್ಕಳದಲ್ಲಿ ಶಂಕಿತ ಕೊರೋನಾ ವ್ಯಕ್ತಿ ಆಸ್ಪತ್ರೆಯಿಂದ ಪರಾರಿ-ಕೊನೆಗೂ ಹಿಡಿದು ತಂದ ಪೊಲೀಸರು.

1712

ಕಾರವಾರ :- ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಶಂಕಿತನೆಂದು ದಾಖಲಾಗಿದ್ದ ಯುವಕ ಆಸ್ಪತ್ರೆಯಿಂದ ನಿನ್ನೆ ರಾತ್ರೋರಾತ್ರಿ ಪರಾರಿಯಾದ ಘಟನೆ ನಡೆದಿದೆ. ಮಾರ್ಚ್ 27ರಂದು ಆಸ್ಪತ್ರೆಗೆ ದಾಖಲಾಗಿದ್ದ ಈತ ನಿನ್ನೆ ರಾತ್ರಿ ವೇಳೆ
ಪರಾರಿಯಾಗಿದ್ದಾನೆ.

ನಿನ್ನೆ ಬೆಳಿಗ್ಗೆಯಿಂದ ಆಸ್ಪತ್ರೆಯ ಸುತ್ತಮುತ್ತ ಯುವತಿಯೋರ್ವಳು ಮಾಸ್ಕ್ ಧರಿಸಿಕೊಂಡು ಓಡಾಡಿಕೊಂಡಿದ್ದಳು. ಇದೇ ಯುವತಿ ಯುವಕನಿಗೆ ಊಟ ನೀಡುವ ನೆಪದಲ್ಲಿ ವಾರ್ಡ್ ಪ್ರವೇಶಿಸಿ, ಯುವಕನನ್ನು ಕರೆದುಕೊಂಡು ಹೋಗಿದ್ದಾಳೆ.

ಜ್ವರ ಹಾಗೂ ಘಂಟಲುನೋವು ಹೊಂದಿರುವ ಈತ ಸಂಶಯ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ.

ಪರಾರಿಯಾದ ಯುವಕ ಪತ್ತೆ-ಪೊಲೀಸರು ಆರೋಗ್ಯ ಇಲಾಖೆಯಿಂದ ಮನ ಒಲಿಸಿ ಆಸ್ಪತ್ರೆಗೆ ದಾಖಲು.

ಪರಾರಿಯಾಗಿದ್ದ ಶಂಕಿತ ಯುವಕ ನನ್ನು ಪೊಲೀಸರು ಕೊನೆಗೂ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಜ್ವರ ಹಾಗೂ ಗಂಟಲು ನೋವು ಹೊಂದಿದ್ದ ಈತನನ್ನು ಅನುಮಾನದ ಮೇಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈತ ಕೊರೋನಾ ಸೋಂಕಿತರ ಅಥವಾ ವಿದೇಶದಿಂದ ಬಂದ ಯಾರ ಸಂಪರ್ಕಕ್ಕೂ ಹೋಗಿರಲಿಲ್ಲ. ಜತೆಗೆ, ಕೊರೋನಾ ಲಕ್ಷಣ ಕಂಡು ಬಂದಿರಲಿಲ್ಲ ಎಂದು ವೈದ್ಯರು ದೃಡಪಡಿಸಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಕೊರಂಟೈನ್ ಮಾಡಲಾಗಿತ್ತು.

https://youtu.be/8OKHCPqHtBc
ಕುಮಟಾ ಪುರಸಭೆ ಪ್ರಕಟಣೆ-ಅವಷ್ಯಕ ವಸ್ತುಗಳಿಗೆ ಸಂಪರ್ಕಿಸಿ.

ಆದರೇ ಭಯ ಗೊಂಡ ಯುವಕ ಪರಾರಿಯಾಗಿ ತನ್ನ ಮನೆ ಸೇರಿಕೊಂಡಿದ್ದ. ಮಾಹಿತಿ ತಿಳಿದ ಭಟ್ಕಳ ಪೊಲೀಸರು ಈತನ ಮನೆಗೆ ತೆರಳಿ ಕೌಂಸಿಲಿಂಗ್ ಮಾಡಿದ್ದು ನಂತರ ಭಟ್ಕಳ ಆಸ್ಪತ್ರೆಗೆ ಮರಳಿ ಕರೆತರಲಾಗಿದ್ದು ಇಡೀ ಭಟ್ಕಳದಲ್ಲಿ ಭಯ ಹುಟ್ಟಿಸಿದ್ದ ಶಂಕಿತನ ಪರಾರಿ ಪ್ರಕರಣ ಸುಕಾಂತ್ಯ ಕಂಡಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ