BREAKING NEWS
Search

ಕೊರೋನಾ ವೈರೆಸ್ ಹರಡಿದ ಭಟ್ಕಳ ಸಂಚಾರಕ್ಕೆ ನಿಷೇಧ-ಜಿಲ್ಲಾಡಳಿತ ತೆಗೆದುಕೊಂಡ ಕ್ರಮಗಳೇನು ಗೊತ್ತಾ?

321

ಕಾರವಾರ: ಕರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಭಾರತ ಲಾಕ್ ಡೌನ್ ನ ದಿಟ್ಟ ನಿರ್ಧಾರದಂತೆ ಮೊದಲನೇ ದಿನವಾದ ಬುಧವಾರವೂ ಜಿಲ್ಲಾಢಳಿತದ ಖಡಕ್ ಆದೇಶದೊಂದಿಗೆ ಭಟ್ಕಳ ಪೊಲೀಸರು ರಸ್ತೆಯಲ್ಲಿ ಸುಮ್ಮನೆ ತಿರುಗಾಡುವವರಿಗೆ ಲಾಠಿ ರುಚಿ ತೋರಿಸಿದ್ದಾರೆ. ನಗರದ ಬೀದಿಯಲ್ಲಿ ಜನರ ಓಡಾಟಕ್ಕೆ ಪೊಲೀಸರು ಕಡಿವಾಣ ಹಾಕಿದ್ದಾರೆ.

ಹಬ್ಬದ ನಿಮಿತ್ತ ಬೆಳಿಗ್ಗೆಯಿಂದಲೇ ಜನರು ದಿನಸಿ, ತರಕಾರಿ ಖರೀದಿಗೆ ಮುಗಿಬಿದ್ದಿದ್ದು ಸಾಮಾಜಿಕ ಅಂತರ ಕಾಯ್ದು ಖರೀದಿ ಮಾಡಿ ಎಂಬ ಆದೇಶವಿದ್ದರು ಜನರು ತಾ ಮುಂದು ನಾ ಮುಂದು ಖರೀದಿಗಿಳಿದ ಹಿನ್ನೆಲೆ ಇಲ್ಲಿನ‌ ಹಳೆ ಬಸ್ ನಿಲ್ದಾಣದೊಳಗಿನ ತರಕಾರಿ ಅಂಗಡಿಯಲ್ಲಿದ್ದ ಜನರನ್ನು ಚದುರಿಸಲು ಲಾಠಿ ಬೀಸಿದ್ದಾರೆ. ಹಾಗೂ ಆಯಾ ಊರಿನ ದಿನಸಿ ತರಕಾರಿ ಅಂಗಡಿಯಲ್ಲಿ ಜನರು ದಿನಸಿ ಖರೀದಿ ಮಾಡಿ ಮನೆ ಸೇರಿದ್ದಾರೆ. ಬಳಿಕ 10 ಗಂಟೆ ನಂತರ ಜನರ ಓಡಾಟ ಸಂಪೂರ್ಣ ಬಂದ್ ಆಗಿರುವುದು ಕಂಡು ಬಂತು.

ಭಟ್ಕಳಕ್ಕೆ ಆಗಮನ- ನಿರ್ಗಮನ ನಿಷೇಧ:

ಭಟ್ಕಳದಲ್ಲಿ ಜಾರಿ ಮಾಡಿದ್ದ ನಿಷೇದಾಜ್ಞೆಗೆ ಹೆಚ್ಚುವರಿ ಮಾರ್ಪಾಡು ಮಾಡಿದ್ದು, ಜಿಲ್ಲಾಧಿಕಾರಿಯವರಿಂದ ಖಡಕ್ ಆದೇಶ ನೀಡಿದ್ದಾರೆ.ಇನ್ನು ಭಟ್ಕಳದಲ್ಲಿ ಪೊಲೀಸರು ಭಿಕ್ಷುಕರಿಗೆ ಬ್ರೆಡ್ ನೀರು ವಿತರಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಉತ್ತರ ಕನ್ನಡ ಜಿಲ್ಲಾಡಳಿತದಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮತ್ತು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯನ್ನು ಒಳಗೊಂಡ ಸಂಪೂರ್ಣ ಭಟ್ಕಳ ನಗರಕ್ಕೆ ಸೀಮಿತವಾಗಿ ಜಿಲ್ಲಾಧಿಕಾರಿಯವರ ಆದೇಶ ಸಂಖ್ಯೆ: ಡಿಸಿಬಿ/ಎಂಎಜಿ/ಇತರೆ /ವಿವ -401/2010-20 ದಿನಾಂಕ: 23-03-2020 ರನ್ವಯ ಜಾರಿ ಮಾಡಿದ ನಿಷೇದಾಜ್ಞೆಗೆ ಹೆಚ್ಚುವರಿ ಮಾರ್ಪಾಡು ಮಾಡಿ ಜಾರಿಗೊಳಿಸಿದ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಕೊರೋನಾ ಸೊಂಕಿತ ಪ್ರದೇಶದಲ್ಲಿ ಔಷಧಿ ಸಿಂಪಡಣೆ:-

ಜಿಲ್ಲಾಡಳಿತದ ಆದೇಶದಂತೆ ತಾಲೂಕಾಡಳಿತವು ಕ್ಲಸ್ಟರ್ ಕಂಟೇನ್ಮೆಂಟ್ ಗೆ ಮುಂದಾಗಿದ್ದು, ಮಾರ್ಚ್ 24 ರಂದು ದ್ರಢಪಟ್ಟಿರುವ ಸೋಂಕಿತ ವ್ಯಕ್ತಿ ವಾಸಿಸುತ್ತಿದ್ದ 3 ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಬಂಧ ಹಾಗೂ ಆ ಪ್ರದೇಶದ ಜನರಿಗೆ ಆರೋಗ್ಯ ತಪಾಸಣೆ ಮಾಡಬೇಕೆಂದು ತಿಳಿಸಿದ್ದಾರೆ‌. ಮಾರ್ಚ 24 ರಿಂದ ಮುಂದಿನ ಆದೇಶದವರೆಗೆ ಭಟ್ಕಳ ಪುರಸಭೆ ವ್ಯಾಪ್ತಿಯ ಸಿದ್ದಿಕ್ ಸ್ಟ್ರೀಟನ 3 ಕಿಮೀ ಸುತ್ತಮುತ್ತ ವ್ಯಾಪ್ತಿಯಲ್ಲಿ ವ್ಯಕ್ತಿಗಳ ನಿರ್ಬಂಧ ಹೇರಬೇಕೆಂದು ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ. ಜಾಲಿ ಪಟ್ಟಣ ಪಂಚಾಯತ್, ಭಟ್ಕಳ ಪುರಸಭೆ, ಮುಂಡಳ್ಳಿ ಗ್ರಾಮ ಪಂಚಾಯತ್, ಹೆಬಳೆ ಗ್ರಾಮ ಪಂಚಾಯತ, ಮುಟ್ಟಳ್ಳಿ ಗ್ರಾಮ ಪಂಚಾಯತ್, ಶಿರಾಲಿ ಗ್ರಾಮ ಪಂಚಾಯತ್, ಯಲ್ವಡಿಕವೂರ ಗ್ರಾಮ ಪಂಚಾಯತ್ ಹಾಗೂ ಮಾವಿನಕುರ್ವೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಪ್ರದೇಶದಲ್ಲಿ ಮಾರ್ಚ 24 ರಿಂದ ಎಪ್ರಿಲ್ 4 ರ ತನಕ ಸಂಪೂರ್ಣ ಆಗಮನ ಹಾಗೂ ನಿರ್ಗಮನ ನಿಷೇಧಿಸಲಾಗಿದೆ.
Leave a Reply

Your email address will not be published. Required fields are marked *