ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಪೀಡಿತರ ಸಂಖ್ಯೆ ಏಳಕ್ಕೆ ಏರಿಕೆ? ಟಾರ್ಗೆಟ್ ಭಟ್ಕಳ!

878

ಕಾರವಾರ :- ಇಡೀ ದೇಶವನ್ನೇ ಕೊರೋನಾ ವೈರೆಸ್ ಕಿತ್ತು ತಿನ್ನುತ್ತಿದೆ.ಅದರಲ್ಲಿಯೂ ಉತ್ತರ ಕನ್ನಡ ಜಿಲ್ಲೆಯಲ್ಲೂ ಕರೋನಾ ಮಾರಿ ತನ್ನ ಅಟ್ಟಹಾಸ ಮೆರೆದಿದ್ದು ಜಿಲ್ಲೆಯಲ್ಲಿಯೇ ಭಟ್ಕಳ ತಾಲೂಕಿನಲ್ಲಿ ಮಾತ್ರ ಏಳು ಪ್ರಕರಣ ವರದಿಯಾಗಿದ್ದು ಭಟ್ಕಳಿಗರನ್ನ ಬೆಚ್ವಿ ಬೀಳಿಸಿದೆ.

ಮಿನಿ ದುಬೈ ಎಂದೇ ಹೆಸರು ಗಳಿಸಿರುವ ಭಟ್ಕಳ ನಗರ ದುಬೈ ನೊಂದಿಗೆ ತನ್ನದೇ ಆದ ಧಾರ್ಮಿಕ,ಔದ್ಯೋಗಿಕ,ಆರ್ಥಿಕ ಸಂಪರ್ಕ ಹೊಂದಿದೆ.ಭಟ್ಕಳದ ಜನಸಂಖ್ಯೆಯಲ್ಲೇ ಶೇಕಡ 40% ದುಬೈ ನಲ್ಲಿ ಉದ್ಯೋಗ ಮಾಡುತಿದ್ದಾರೆ.

ಇಂದು ಕರೋನಾ ಮಾರಿ ಈ ಜಿಲ್ಲೆಯ ಭಟ್ಕಳಕ್ಕೆ ಆವರಿಸಲು ಪ್ರಮುಖ ಕಾರಣ ಗಲ್ಫ ರಾಷ್ಟ್ರಗಳೊಂದಿಗಿನ ನಂಟು.

ಹೌದು ಜಿಲ್ಲೆಯಲ್ಲಿ ಭಟ್ಕಳ ತಾಲೂಕು ಮಾತ್ರ ಕೊರೋನಾ ಸೊಂಕಿತರ ಸಂಖ್ಯೆ ದಿನ ದಿಂದ ದಿನಕ್ಕೆ ಏರಲು ಕಾರಣವಾಗಿದೆ.

ಜಿಲ್ಲೆಯಲ್ಲಿ ದುಬೈ ನಿಂದ ಭಟ್ಕಳಕ್ಕೆ ಬಂದ ಇಬ್ಬರ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಪ್ರವೇಶಿಸಿದೆ.

ಮೊದಲು ಇವರ ಕುಟುಂಬ ಸದಸ್ಯರಿಗೆ ಹರಡುವ ಮೂಲಕ ಏಳು ಪ್ರಕರಣ ಹಾಗೂ ಒಂದು ಪ್ರಕರಣ ಮಂಗಳೂರಿನಲ್ಲಿ ದಾಖಲಾಗುವಂತಾಗಿದೆ.

ರಾಜ್ಯ ವಾರು ಪೀಡಿತರ ಸಂಖ್ಯೆ.

ಹರಡಿದ್ದು ಹೇಗೆ ಗೊತ್ತಾ?

ಭಟ್ಕಳದಲ್ಲಿನ ರಾಜ್ಯದ 36ನೇ ಕೊರೋನಾ ಪೀಡಿತ 62 ವರ್ಷದ ಹಿರಿಯ ಭಟ್ಕಳ ಮೂಲದ ವ್ಯಕ್ತಿ ಮುಂಬೈ- ಮಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ 17ರಂದು ಮುಂಬೈನಿಂದ ಹೊರಟು, 18ರಂದು ಭಟ್ಕಳ ತಲುಪಿದ್ದ ಈತನಿಂದ ಈತನ ಕುಟುಂಬದ 53 ವರ್ಷದ ಆತನ ಹೆಂಡತಿ,28 ವರ್ಷ, 23 ವರ್ಷದ ಇಬ್ಬರು ಪುತ್ರಿಯರು ಸೇರಿ ಮೂವರಿಗೂ ಹಬ್ಬಿದೆ.

ಇನ್ನು 21 ನೇ ತಾರೀಕಿನಂದು 40 ವರ್ಷದ ವ್ಯಕ್ತಿ ಸಹ ದುಬೈ ನಿಂದ ಮಂಗಳೂರಿಗೆ ಬಂದಿದ್ದು ಅಲ್ಲಿಂದ ಸಂಬಂಧಿ ಕಾರಿನ ಮೂಲಕ ಭಟ್ಕಳ ತಲುಪಿದ್ದಾನೆ.

ಈತನಿಗೂ ಕರೋನ ದೃಡಪಟ್ಟಿದ್ದು ಈತನನ್ನು ಕರೆತಂದ ಸಂಬಂಧಿ 24 ವರ್ಷದ ಯುವಕನಿಗೂ ಇಂದು ಕೊರೋನಾ ದೃಡಪಟ್ಟಿದೆ.

ಇನ್ನು ಭಟ್ಕಳ ಮೂಲದ‌ 22 ವರ್ಷದ ಯುವಕನಲ್ಲಿ ಪತ್ತೆಯಾಗಿದ್ದು ಮಾರ್ಚ್ 19ರಂದು ರಾತ್ರಿ 11ಗಂಟೆಯ ಏರ್ ಇಂಡಿಯಾ ವಿಮಾನದಲ್ಲಿ ಹೊರಟಿದ್ದ.

ಮಾರ್ಚ್ 20ರಂದು ಬೆಳಗ್ಗೆ 4.30ಕ್ಕೆ ಗೋವಾ ದಾಬೊಲಿಮ್ ವಿಮಾನ ನಿಲ್ದಾಣದಲ್ಲಿಳಿದು ಬಳಿಕ KA 20 D 8595 ಟೊಯೊಟಾ ಇಟಿಯೋಸ್ ಮೂಲಕ ಭಟ್ಕಳದತ್ತ ಪ್ರಯಾಣಿಸಿದ್ದ.

ಈ ನಡುವೆ ಬೆಳಗ್ಗೆ 6.45ಕ್ಕೆ
ಕಾರವಾರದ ಕೋಡಿಭಾಗ್ ರತ್ನಸಾಗರ ಹೋಟೆಲ್‌ನಲ್ಲಿ ಬೆಳಗ್ಗಿನ ಉಪಹಾರ ಸೇವಿಸಿದ್ದ
ಬಳಿಕ 8 ಗಂಟೆಗೆ ಆತನ 26 ವರ್ಷದ ಸಹೋದರನ ಜತೆ ಭಟ್ಕಳದ ಕಡೆ ನೇರ ಪ್ರಯಾಣ‌ ಬೆಳೆಸಿದ್ದ.

ಭಟ್ಕಳಕ್ಕೆ ಬೆಳಗ್ಗೆ 11 ಗಂಟೆಗೆ ತಲುಪಿದ್ದು, ಆತನ 46 ವರ್ಷದ ತಾಯಿ, 13 ವರ್ಷದ ಸಹೋದರ ಸ್ವಾಗತ ಕೋರಿದ್ದರು,ಮಾರ್ಚ್ 23ರವರೆಗೆ ಆತ ಮನೆಯಲ್ಲಿದ್ದು, ಅಂದೇ ಮಧ್ಯಾಹ್ನ 2.30ಕ್ಕೆ ಭಟ್ಕಳದ ಆಸ್ಪತ್ರೆಗೆ ದಾಖಲಾಗಿದ್ದು ಶಿವಮೊಗ್ಗದ ಪ್ರಯೋಗಾಲಯದಲ್ಲಿ ಗಂಟಲಿನ ದ್ರವ ಪರೀಕ್ಷೆಯಲ್ಲಿ ದೃಡಪಟ್ಟಿದೆ.

ಹೀಗಾಗಿ ಕೊರೋನಾ ವೈರೆಸ್ ಸೊಂಕಿತರ ಕುಟುಂಬದಲ್ಲಿ ಮಾತ್ರ ಹರಡಿದ್ದು ಭಟ್ಕಳದಲ್ಲಿ ಸೊಂಕಿತರ ಸಂಖ್ಯೆ ಏಳಕ್ಕೇರಿದ್ದು ಭಟ್ಕಳ ಮೂಲದವರು ಒಟ್ಟು ಎಂಟು ಜನರಿಗೆ ಕರೋನಾ ಫಾಸಿಟಿವ್ ಬಂದಿದೆ.

ಕರಾವಳಿ ಭಾಗದ ಜನರೇ ಎಚ್ಚರ ಎಚ್ಚರ !

ಭಟ್ಕಳ ಮಟ್ಟಿಗೆ ಬರುವುದಾದರೇ ಸಮುದಾಯಕ್ಕೆ ಹರಡುವ ಮೊದಲು ಜಿಲ್ಲಾಡಳಿತ ಜಾಗೃತಿ ವಹಿಸಿದ್ದರಿಂದ ಇನ್ನೂ ಹೆಚ್ಚು ಹರಡದಂತೆ ತಡೆಯುವಲ್ಲಿ ಆರೋಗ್ಯ ಇಲಾಖೆ ಸಫಲವಾಗಿದೆ.

ಸದ್ಯ ಭಟ್ಕಳದಲ್ಲಿ ಹೆಲ್ತ್ ಎಮರ್ಜನ್ಸಿ ಡಿಕ್ಲೇರ್ ಮಾಡಲಾಗಿದೆ.100 ಜನ ದುಬೈ ನಿಂದ ಬಂದವರನ್ನು ಹೋಮ್ ಕೊರಂಟೈನ್ ಮಾಡುವ ಮೂಲಕ ನಿಗಾ ಇಡಲಾಗಿದೆ.ಇವರಲ್ಲಿ ರೋಗ ಲಕ್ಷಣ ಇರುವವರನ್ನು ಭಟ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ವೈರೆಸ್ ಪತ್ತೆಯಾದವರನ್ನು ಭಟ್ಕಳದಿಂದ ಕಾರವಾರದ ಪತಾಂಜಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಕಾರವಾರದ ವೈದ್ಯಕೀಯ ಕಾಲೇಜಿನಲ್ಲಿ ಒಂದು ಕೋಟಿ ವೆಚ್ಚದಲ್ಲಿ ಕೊರೋನಾ ವಾರ್ಡ ಮಾಡಲಾಗಿದ್ದು ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ.

ಭಟ್ಕಳ ಸೇರಿದಂತೆ ಜಿಲ್ಲೆಯ ಎಲ್ಲಾ ಭಾಗದಲ್ಲಿ ಎರಡನೇ ಹಂತದ ಸರ್ವೆ ಕಾರ್ಯ ಮಾಡಲಾಗುತ್ತಿದ್ದು ದೇಶ ವಿದೇಶದಿಂದ ಬಂದವರ ಮಾಹಿತಿ ಕಲೆಹಾಕಲಾಗುತ್ತಿದೆ. ಸದ್ಯ ಸಮುದಾಯಕ್ಕೆ ಹರಡದಂತೆ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.

ಆದರೇ ಸರ್ಕಾರದ ಆದೇಶ ಪಾಲನೆ ಮಾಡದ ಜನ ಬೇಕಾ ಬಿಟ್ಟಿ ಓಡಾಡುತಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಗೋವಾ ಗಡಿಯಿಂದ ಕಾರವಾರ,ಕುಮಟಾ,ಹೊನ್ನಾವರ,ಭಟ್ಕಳ ಭಾಗದ ಜನರು ಅಪಾಯದಲ್ಲಿದ್ದಾರೆ.
ಸೊಂಕಿತರು ಇದೇ ಭಾಗದಲ್ಲಿ ಓಡಾಡಿದ್ದಾರೆ. ಕಾರವಾರದ ರತ್ನಸಾಗರ ಹೋಟಲ್ ನಲ್ಲಿ ಸ್ನೇಹಿತರೊಂದಿಗೆ ಆಹಾರ ಸೇವಿಸಿದ್ದಾರೆ.
ಹೋಟಲ್ ಒಳಗೆ ಓಡಾಡಿದ್ದಾರೆ. ಈ ಸಂದರ್ಭದಲ್ಲಿ ಕಾರವಾರದವರೂ ಸೇರಿ ಹಲವರು ಅವರ ಸಂಪರ್ಕದಿಂದ ಸಾಗಿದ್ದಾರೆ. ಹೀಗಾಗಿ ನಮ್ಮ ಎಚ್ಚರಿಕೆಯಲ್ಲಿ ನಾವಿರಬೇಕಿದೆ.ಇಲ್ಲವಾದರೇ ಕೊರೋನಾ ಬಾಯಿಗೆ ಆಹಾರವಾಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ವರದಿ:- ಎಸ್.ಎನ್.ಸಾಗರ್.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ