39 ಕ್ಕೆ ಜಿಗಿತ ಕಂಡ ಕರೋನಾ ಸೊಂಕಿತರ ಸಂಖ್ಯೆ! ಬಾಲಕರು, ಆಟೋ ಡ್ರೈವರ್ ಗೂ ಸೊಂಕು! ಇನ್ನೂ ಏರಲಿದೆಯೇ ಸಂಖ್ಯೆ? ಟ್ರಾವೆಲ್ ಹಿಸ್ಟರಿ ಬಿಚ್ಚಿಡುತ್ತಿದೆ ಸತ್ಯ!

3488

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಏಳು ಪ್ರಕರಣ ದೃಡವಾಗುವ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 39 ಕ್ಕೆ ಏರಿಕೆಯಾಗಿದ್ದು ಉತ್ತರ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ.

ನಿನ್ನೆದಿನ ಸೊಂಕಿತರಾದ ಎಂಟು ಮಂದಿ ಸಂಪರ್ಕ ಮಾಡಿರುವ ಏಳು ಜನರಲ್ಲಿ ಐದು ಜನ ಪುರುಷರು ಹಾಗೂ ಇಬ್ಬರು ಮಹಿಳೆಯರಿಗೆ ಸೊಂಕು ದೃಡವಾಗಿದೆ.

ಇವರೆಲ್ಲರೂ ಉತ್ತರಕನ್ನಡ ಜಿಲ್ಲೆಯ ಭಟ್ಕಳ ಪಟ್ಟಣದವರಾಗಿದ್ದು ಸೋಂಕಿತೆ ಸಂಖ್ಯೆ 659ರ ದ್ವಿತೀಯ ಹಾಗೂ ನೇರ ಸಂಪರ್ಕಕ್ಕೆ ಬಂದಿದ್ದವರಲ್ಲಿ ಸೋಂಕು ದೃಢವಾಗಿದೆ.
50 ವರ್ಷದ ಮಹಿಳೆ, 21 ವರ್ಷದ ಯುವತಿ, 16 ಮತ್ತು 15 ವರ್ಷದ ಬಾಲಕರು, 42, 31, 60 ವರ್ಷದ ಪುರುಷರು ಸೊಂಕಿತರಾಗಿದ್ದಾರೆ‌.ಈ ಮೂಲಕ ಎರಡು ದಿನದಲ್ಲಿ 28 ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ.

ಜಿಲ್ಲಾಡಳಿತ 30 ಮಂದಿಯ ಗಂಟಲ ದ್ರವದ ಮಾದರಿ ಕಳುಹಿಸಿದ್ದು ಇವುಗಳಲ್ಲಿ ಮೊದಲ ಹಂತದ ಪರಿಕ್ಷಾ ಪಲಿತಾಂಶ ಬಂದಿದ್ದು ಮಲ್ಲಿಗೆ ನಗರಿಯಲ್ಲಿ ಭಯವನ್ನು ಹುಟ್ಟುಹಾಕಿದೆ.

ಸೊಂಕಿತರ ಪಟ್ಟಿ ಈ ಕೆಳಗಿನಂತಿವೆ:-

ಆಟೋ ಚಾಲಕನು ಸೇರಿ ಏಳು ಮಂದಿಗೆ ದೃಡ!

ಇಂದು ಪಾಸಿಟಿವ್ ಬಂದವರಲ್ಲಿ ಆಟೋ ಚಾಲಕನೂ ಸೇರಿದ್ದು ಎಲ್ಲರೂ ಏಳು ಮಂದಿ ನಿನ್ನೆ ದೃಡಪಟ್ಟ ಸೊಂಕಿತರ ಸಂಬಂಧಿಗಳಾಗಿದ್ದಾರೆ.

ಇನ್ನು ಆಟೋ ಚಾಲಕನಿಗೂ ಸೊಂಕು ದೃಡಪಟ್ಟ ಹಿನ್ನಲೆಯಲ್ಲಿ ಆತ ಯಾವ ಪ್ರದೇಶಕ್ಕೆ ಸಂಚರಿಸಿದ್ದ ಎಂಬ ಮಾಹಿತಿ ಹೊರಬರಬೇಕಿದೆ‌ .
ಸೊಂಕಿತರಲ್ಲಿ ಕೆಲವರು ಉಡುಪಿ ಹಾಗೂ ಭಟ್ಕಳದಲ್ಲಿ ಸಂಚರಿಸಿದ್ದು ಮೆಡಿಕಲ್ ಸ್ಟೋರ್ ನಲ್ಲಿ ಮಾತ್ರೆ ಕರೀದಿಸಿದ್ದರು ಎಂದು ಮೊದಲ ಹಂತದ ವಿವರದಲ್ಲಿ ತಿಳಿದುಬಂದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ