ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಜನತಾ ಬಂದ್ ಸಂಪೂರ್ಣ ಯಶಸ್ಸು ಕಂಡಿದೆ.ಇಡೀ ದಿನ ಜಿಲ್ಲೆಯ ಪ್ರತಿ ಸ್ಥಳವೂ ಕಾಲಿ ಹೊಡೆಯುತಿದ್ದು ಎಲ್ಲವೂ ಬಿಕೋ ಎನ್ನುತಿದ್ದವು. ಅದರ ಚಿತ್ರ ವರದಿ ಇಲ್ಲಿದೆ ನೋಡಿ.














ಬಂದ್ ನ ವೀಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:-
ಬಂದ್ ಮುಕ್ತಾಯದಲ್ಲಿ ಜಿಲ್ಲೆಯ ಜನರು ಶಂಕ,ಜಾಂಗಟೆ,ಚಪ್ಪಾಳೆ ಮೂಲಕ ಪ್ರತಿಕ್ರಿಯೆಯ ವಿಡಿಯೋ ನೋಡಲು ಕೆಳಗಿನ ಲಿಂಕ್ ಬಳಸಿ.:-
ಮಂಗಳವಾರ ಉತ್ತರ ಕನ್ನಡ ಜಿಲ್ಲೆಯಲ್ಲಿ 144 ಕಲಂ ಜಾರಿ


ಮಾರ್ಚ್ 24 ರಿಂದ ಮಾರ್ಚ್ 30 ರವರೆಗೆ ಉತ್ತರ ಕನ್ನಡ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದರೂ ಕೂಡ ಜನರು ಇದಕ್ಕೆ ಸ್ಪಂದಿಸುತ್ತಿಲ್ಲ.
ತಹಶೀಲ್ದಾರ್ ಹಾಗೂ ಆರೋಗ್ಯಾಧಿಕಾರಿಗಳ ಮಾತಿಗೂ ಜನರಿಂದ ಸ್ಪಂದನೆ ವ್ಯಕ್ತವಾಗುತ್ತಿಲ್ಲ. ವಿದೇಶದಿಂದ ಅಗಮಿಸುತ್ತಿರೋ ಸ್ಥಳೀಯ ನಿವಾಸಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದ್ದು, ಗುಂಪು ಗುಂಪಾಗಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವುದು ಜಾಸ್ತಿಯಾಗುತ್ತಿದೆ.
ಆದ್ದರಿಂದ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸುವ ಅನಿವಾರ್ಯತೆ ಇರುವ ಕಾರಣ ಮಾರ್ಚ್ 24 ರಿಂದ ಮಾರ್ಚ್ 30 ರವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಧಾರವಾಡ ಸಂಚಾರ ಬಂದ್

