BREAKING NEWS
Search

ಉತ್ತರ ಕನ್ನಡ:ಸಿ.ಎಂ ಕಾರ್ಯಕ್ರಮ ರದ್ದು-ಶಾಪಗ್ರಸ್ಥವಾಯ್ತೇ ಉತ್ತರ ಕನ್ನಡ ಜಿಲ್ಲೆ!

614

ಕಾರವಾರ:- ಇಂದು ನಿಗದಿಯಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರ ಭೇಟಿ ಕಾರ್ಯಕ್ರಮ ಹವಾಮಾನ ವೈಪರಿತ್ಯದಿಂದ ರದ್ದಾಗಿದೆ.

ಹವಾಮಾನ ವೈಪರಿತ್ಯದಿಂದ ಶಿವಮೊಗ್ಗ ದಲ್ಲೇ ನಿಂತ ಹೆಲಿಕಾಪ್ಟರ್

ಇಂದು ಕಾರವಾರದಲ್ಲಿ ಸಿ.ಎಂ ಯಡಿಯೂರಪ್ಪನವರು ಅಧಿಕಾರಿಗಳೊಂದಿಗೆ ಸಭೆ ಹಾಗೂ ಪ್ರವಾಹ ಪೀಡಿತ ಪ್ರದೇಶ ಕ್ಕೆ ಭೇಟಿ ನೀಡಬೇಕಿತ್ತು. ಈ ಹಿಂದೆ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಕುಮಟಾ ಭಾಗಕ್ಕೆ ಭೇಟಿ ಸಹ ರದ್ದು ಮಾಡಲಾಗಿತ್ತು. ಆದರೇ ಎರಡನೇ ಬಾರಿ ಸಹ ಕಾರ್ಯಕ್ರಮ ರದ್ದಾಗಿದ್ದು ನಿಗದಿಯಂತೆ ಹಾವೇರಿಗೆ ಹೋಗಲಿದ್ದಾರೆ‌

ಯಾರೂ ಬರಲಿಲ್ಲ.!

ಸಿ.ಎಂ.ಗಾಗಿ ಕಾದ ಜಿಲ್ಲೆಯ ನಾಯಕರು.


ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಸ್ಥಳೀಯ ಅಧಿಕಾರಿಗಳೇ ದೇವರಾಗಿದ್ದಾರೆ. ಪ್ರವಾಹದಿಂದ 700ಕೋಟಿಗೂ ಅಧಿಕ ನಷ್ಟವಾಗಿದೆ, ನೂರಾರು ಮನೆಗಳು ದರೆಗುರುಳಿದೆ,ಹಸುಗಳು ,ಜನರು ಸಾವನ್ನಪ್ಪಿದ್ದಾರೆ ಕೇಂದ್ರದಿಂದ ಬಂದ ನಿಯೋಗ ಉತ್ತರ ಕನ್ನಡ ಜಿಲ್ಲೆಯನ್ನು ಬಿಟ್ಟು ಉಳಿದ ಪ್ರದೇಶಕ್ಕೆ ಭೇಟಿ ನೀಡಿದರು, ವಿರೋಧ ಪಕ್ಷದ ನಾಯಕರೂ ಸುತ್ತಾಡಲಿಲ್ಲ ಸ್ಥಳೀಯ ಅಧಿಕಾರಿಗಳು ಮಾಡಿದ ಸರ್ವೆ ಹಾಗೂ ಜಿಲ್ಲಾಧಿಕಾರಿಗಳ ಶ್ರಮದಿಂದ ಜಿಲ್ಲೆಯ ನೆರೆ ಪೀಡಿತ ಸಂತ್ರಸ್ಥರಿಗೆ ಬೆಳಕಾಗಿದ್ದಾರೆ.

ಉತ್ತರ ಕನ್ನಡ ಕ್ಕೆ ಸಿ.ಎಂ ಬಂದ್ರೆ ಅಧಿಕಾರ ಕಳೆದುಕೊಳ್ತಾರೆ!?

ಉತ್ತರ ಕನ್ನಡ ಜಿಲ್ಲೆಗೆ ಯಾವುದೇ ಸಿ.ಎಂ ಭೇಟಿ ನೀಡಿದ್ರೆ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಳ್ತಾರೆ ಎನ್ನುವ ಮಾತು ಈಗ ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ ಜಿಲ್ಲೆಗೆ ಭೇಟಿ ನೀಡಿ ಆರು ತಿಂಗಳಲ್ಲಿ ಅಧಿಕಾರ ಕಳೆದುಕೊಂಡರು ಇದರ ಸಾಲಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ,ಕುಮಾರಸ್ವಾಮಿ,ಹಾಗೂ ಯಡಿಯೂರಪ್ಪ ಸೇರ್ಪಡೆಯಾಗಿದ್ದಾರೆ. 2009 ರಲ್ಲಿ ಕಾರವಾರದಲ್ಲಿ ಪ್ರವಾಹ ಬಂದು ಗುಡ್ಡ ಕುಸಿತವಾಗಿ ಸಾವು ನೋವು ಸಂಭವಿಸಿತ್ತು ಈ ವೇಳೆ ಸಿ.ಎಂ ಆಗಿದ್ದ ಯಡಿಯೂರಪ್ಪ ನವರು ಕಾರವಾರಕ್ಕೆ ಭೇಟಿ ನೀಡಿದ್ರು ,ಇದಾದ ಆರು ತಿಂಗಳಲ್ಲಿ ಯಡಿಯೂರಪ್ಪ ಅಧಿಕಾರ ಕಳೆದುಕೊಂಡರು‌. ಹೀಗಾಗಿ ಚಾಮರಾಜ ನಗರ ಜಿಲ್ಲೆಗೆ ಅಂಟಿದ ಕಳಂಕ ಈಗ ಉತ್ತರ ಕನ್ನಡ ಜೊಲ್ಲೆಗೂ ಅಂಟಿದ್ದು ನಾಯಕರಿಗೆ ಭಯ ಹುಟ್ಟಿಸುವಂತೆ ಮಾಡಿದೆ.

ಸಂತ್ರಸ್ಥರ ಅಕ್ರೋಶ!


ಬೆಂಗಳೂರಿನಿಂದ ನೇರವಾಗಿ ಶಿವಮೊಗ್ಗ ಕ್ಕೆ ಬಂದಿಳಿದ ಯಡಿಯೂರಪ್ಪನವರು ಜಿಲ್ಲೆಗೆ ಬರದಿರುವುದಕ್ಕೆ ಸಂತ್ರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಎರಡನೇ ಬಾರಿ ಸಂತ್ರಸ್ಥರ ಭೇಟಿ ರದ್ದು ಮಾಡಲಾಗಿದೆ,ಕೇಂದ್ರ ಅಧಿಕಾರಿಗಳ ನಿಯೋಗವೂ ಬರಲಿಲ್ಲ,ಜಿಲ್ಲೆಯನ್ನು ಅಲಕ್ಷ ಮಾಡಿ ಮಲತಾಯಿ ದೋರಣೆ ಮಾಡಲಾಗುತ್ತಿದೆ ಎಂದು ಡೋಂಗ್ರಿ ಭಾಗದ ಸಂತ್ರಸ್ಥ ರೈತ ಮುಖಂಡ ಶಿವರಾಮ್ ಗಾಂವ್ಕರ್ ಅಸಮದಾನ ವ್ಯಕ್ತಪಡಿಸಿದ್ರು.
Leave a Reply

Your email address will not be published. Required fields are marked *