BREAKING NEWS
Search

ಭಟ್ಕಳದಿಂದ ಕಾರವಾರಕ್ಕೆ ಶಿಪ್ಟ್ ಆದ ಕರೋನಾ ಸೊಂಕಿತರು!

990

ಕಾರವಾರ: ಭಟ್ಕಳ ಪಟ್ಟಣದಲ್ಲಿ ಇಂದು ದೃಢಪಟ್ಟ 12 ಕೊರೋನಾ ಸೋಂಕಿತರನ್ನ ಕಾರವಾರದ ಮೆಡಿಕಲ್‌ ಕಾಲೇಜಿನಲ್ಲಿ ಪ್ರಾರಂಭಿಸಿರುವ ಕೊರೋನಾ ವಿಶೇಷ ವಾರ್ಡಿಗೆ ಇಂದು ರಾತ್ರಿ 8-45 ಕ್ಕೆ ನಾಲ್ಕು ಅಂಬುಲೆನ್ಸ್ ಮೂಲಕ ಕರೆತಂದು ಬಿಡಲಾಯಿತು.

ಕಳೆದ ಮೂರು ದಿನದ ‌ಹಿಂದೆ ಪಟ್ಟಣದ 18 ವರ್ಷದ ಯುವತಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಸೋಂಕಿತ ಯುವತಿಯ ಕುಟುಂಬದವರನ್ನ ಹಾಗೂ ಸಂಪರ್ಕದಲ್ಲಿದ್ದವರ ಗಂಟಲು ದ್ರವ ಪರೀಕ್ಷೆಗೆ ಕಳಿಸಿದಾಗ ಇಂದು ಯುವತಿಯ ಕುಟುಂಬದ 8 ಜನರಿಗೆ ಹಾಗೂ ಸಂಪರ್ಕದಲ್ಲಿದ್ದ 4 ಜನಕ್ಕೆ ಕೊರೋನಾ ಸೋಂಕು ದೃಢಪಟ್ಟಿತ್ತು.

ಈ ವರೆಗೆ ಕೊರೋನಾ ಸೋಂಕು ದೃಢಪಟ್ಟವರಿಗೆ ಕಾರವಾರ ತಾಲೂಕಿನ ಕದಂಬ ನೌಕಾನೆಲೆಯ ಪತಂಜಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತಿತ್ತು.

ಆದರೇ ಮೆಡಿಕಲ್ ಕಾಲೇಜಿನಲ್ಲಿ ವಿಶೇಷ ಕೊರೋನಾ ವಾರ್ಡ ಅನ್ನು ಜಿಲ್ಲಾಡಳಿತ ನಿರ್ಮಿಸಿದ್ದು ಮುನ್ನೂರು ಜನ ಪುರುಷ,ಮಹಿಳೆಯರಿಗೆ ಪ್ರತ್ತೇಕವಾಗಿ ಚಿಕಿತ್ಸೆ ಕೊಡಲು ವ್ಯವಸ್ಥೆ ಕಲ್ಪಿಸಲಾಗಿದೆ.

ಹೊಸದಾಗಿ ಮೆಡಿಕಲ್ ಕಾಲೇಜಿನಲ್ಲಿ ನಿರ್ಮಿಸಿದ ಕೊರೋನಾ ವಿಶೇಷ ವಾರ್ಡ್ ನಲ್ಲಿ ನಿನ್ನೆ 18 ವರ್ಷದ ಸೋಂಕಿತೆಗೆ ದಾಖಲು ಮಾಡಿದ್ದು ಇಂದು ದೃಢಪಟ್ಟ 12 ಜನರನ್ನ ರವಾನೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟು 13 ಜನ ಕೊರೋನಾ ಸೋಂಕಿತರಿಗೆ ಮೆಡಿಕಲ್ ಕಾಲೇಜಿನ ಕೊರೋನಾ ವಿಶೇಷ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತಿದೆ.
Leave a Reply

Your email address will not be published. Required fields are marked *