ಉತ್ತರ ಕನ್ನಡದಲ್ಲಿ 11 ಕರೋನಾ ಫಾಸಿಟಿವ್ ! ಯಾವ ಜಿಲ್ಲೆಯಲ್ಲಿ ಎಷ್ಟು ವಿವರ ಇಲ್ಲಿದೆ

1770

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಫಾಸಿಟಿವ್ ಸಂಖ್ಯೆ 11 ಕಕ್ಕೆ ಏರಿಕೆಯಾಗಿದೆ.

ಮುಂಡಗೋಡ ತಾಲೂಕಿನ ಟಿಬೇಟಿನ್ ಕ್ಯಾಂಪಿನ 32 ವರ್ಷದ ಪುರಷ, 27 ವರ್ಷದ ಯುವಕ ಹಾಗೂ ಉತ್ತರಖಾಂಡದಿಂದ ವಾಪಸ್ಸಾಗಿದ್ದ 16 ವರ್ಷದ ಬಾಲಕಿಗೆ ಕೊರೋನಾ ದೃಢಪಟ್ಟಿದೆ. ಹಳಿಯಾಳ ತಾಲೂಕಿನ 25 ಹಾಗೂ 23 ವರ್ಷದ ಯುವತಿಯರಿಗೆ ಧೃಡಪಟ್ಟಿದೆ. ಅಲ್ಲದೇ ಹೊನ್ನಾವರದಲ್ಲಿ 28 ವರ್ಷದ ಯುವಕ, ಭಟ್ಕಳದಲ್ಲಿ 29 ವರ್ಷದ ಯುವಕ, ಜೋಯಿಡಾ ತಾಲೂಕಿನಲ್ಲಿ 53 ವರ್ಷದ ವ್ಯಕ್ತಿ ಹಾಗೂ ಶಿರಸಿಯ 55 ವರ್ಷದ ವ್ಯಕ್ತಿ, ದೆಹಲಿಯಿಂದ ದಾಂಡೇಲಿಗೆ ಬಂದಿದ್ದ 50 ವರ್ಷದ ವ್ಯಕ್ತಿ, ಯಲ್ಲಾಪುರ 3 ವರ್ಷದ ಹೆಣ್ಣು ಮಗುವಿಗೆ ಕೊರೋನಾ ಧೃಡ ಪಟ್ಟಿದೆ.

ಇನ್ನು, ಮುಂಡಗೋಡಿನ ಮೂವರನ್ನ ಹೊರತು ಪಡಿಸಿ ಮಹಾರಾಷ್ಟ್ರದಿಂದ ವಾಪಸ್ ಬಂದವರಲ್ಲೇ ಹೆಚ್ಚಾಗಿ ಸೋಂಕು ಕಂಡು ಬಂದಿದೆ. ಇನ್ನು ದಾಂಡೇಲಿಯ 50 ವರ್ಷದ ಸೋಂಕಿತ ದೆಹಲಿಯಲ್ಲಿ ಸಿ.ಆರ್.ಪಿ.ಎಫ್ ಪೇದೆಯಾಗಿ ಕರ್ತವ್ಯ ನಿರ್ವಹಿಸಿ ವಾಪಾಸ್ ಆಗಿದ್ದು ಆತನಿಗೂ ಫಾಸಿಟಿವ್ ಬಂದಿದೆ.

ಜಿಲ್ಲೆಯ ಸೊಂಕಿತರ ವಿವರ ಈ ಕೆಳಗಿನಂತಿದೆ:-

ಉತ್ತರ ಕನ್ನಡ ಜಿಲ್ಲೆಯ ಯಾವ ತಾಲೂಕಿನ ಜನರಿಗೆ ಫಾಸಿಟಿವ್ ಎಂಬ ಮಾಹಿತಿ ಮೇಲಿನ ಕೋಷ್ಠಕದಲ್ಲಿ ನೀಡಲಾಗಿದೆ.

ಮಹಾರಾಷ್ಟ್ರ ದಿಂದ ಮರಳಿದ p-10174 ಸಂಖ್ಯೆಯ 3 ವರ್ಷದ ಬಾಲಕಿ ದೆಹಲಿಯಿಂದ ಮರಳಿದ p-10175 ಸಂಖ್ಯೆಯ 50 ವರ್ಷದ ಪುರುಷ,p-10176 ಸಂಖ್ಯೆಯ ಮಹಾರಾಷ್ಟ್ರ ದಿಂದ ಹಿಂತಿರುಗಿದ 53 ವರ್ಷದ ಪುರುಷ ,ದೆಹಲಿಯಿಂದ ಮುಂಡಗೋಡಿಗೆ ಆಗಮಿಸಿದ p-7274 ಸಂಖ್ಯೆಯ ಸೊಂಕಿತ ವ್ಯಕ್ತಿ ಸಂಪರ್ಕ ಮಾಡಿದ p-10177 ಸಂಖ್ಯೆಯ 32 ವರ್ಷದ ಪುರುಷ , ಹಿಮಾಚಲ ಪ್ರದೇಶದಿಂದ ಜಿಲ್ಲೆಯ ಮುಂಡಗೋಡಿಗೆ ಆಗಮಿಸಿದ p-10178 ಸಂಖ್ಯೆಯ 27 ವರ್ಷದ ಯುವಕ ,ಉತ್ತರ್ ಖಾಂಡ್ ನಿಂದ ಹಿಂತಿರುಗಿದ p_10179 ಸಂಖ್ಯೆಯ 16 ವರ್ಷದ ಬಾಲಕಿ , ಮಹಾರಾಷ್ಟ್ರ ದಿಂದ ಜಿಲ್ಲೆಗೆ ಆಗಮಿಸಿದ p-10180 ಸಂಖ್ಯೆಯ 28 ವರ್ಷದ ಯುವಕ ,ಭಟ್ಕಳ ಮೂಲದ ಕುವೈತ್ ನಿಂದ ಜಿಲ್ಲೆಗೆ ಆಗಮಿಸಿದ p-10181 ಸಂಖ್ಯೆಯ 29 ವರ್ಷದ ಯುವಕ, ಮಹಾರಾಷ್ಟ್ರ ದಿಂದ ಹಿಂತಿರುಗಿದ p-10182 ಸಂಖ್ಯೆ 25 ಯುವತಿ , ಮಹಾರಾಷ್ಟ್ರ ದಿಂದ ಹಿಂತಿರುಗಿದ p-10183 ಸಂಖ್ಯೆಯ 23 ವರ್ಷದ ಯುವತಿ , ದೆಹಲಿಯಿಂದ ಹಿಂತಿರುಗಿದ p-10184 ಸಂಖ್ಯೆಯ 55 ವರ್ಷದ ಪುರುಷ ರಿಗೆ ಕರೋನಾ ಫಾಸಿಟಿವ್ ದೃಡವಾಗಿದೆ.

ರಾಜ್ಯದ ವಿವರ ಈ ಕೆಳಗಿನಂತಿದೆ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ