ಕರೋನಾ ದಿಂದ ಏಳುಜನ ಮಲೆನಾಡಿಗರು ಗುಣಮುಖ- ಇಂದು ಬಿಡುಗಡೆ

714

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್- 19 ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಏಳು ಮಂದಿ ಗುಣಮುಖವಾಗುವ ಮೂಲಕ ಭಾನುವಾರ ಬಿಡುಗಡೆಯಾದರು.ಈ ಮೂಲಕ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 106ಕ್ಕೆ ಏರಿಕೆಯಾಗಿದೆ.

ಶಿರಸಿ ಮೂಲದ 63 ವರ್ಷದ ಮಹಿಳೆ, 62 ವರ್ಷದ ಪುರುಷ, ಜೊಯಿಡಾದ 24 ವರ್ಷದ ಯುವಕ, ದಾಂಡೇಲಿಯ 9 ವರ್ಷದ ಬಾಲಕಿ, ಹಳಿಯಾಳದ 12 ವರ್ಷದ ಬಾಲಕ ಹಾಗೂ 45 ವರ್ಷದ ಪುರುಷ ಕೋವಿಡ್- 19 ಸೋಂಕಿನಿಂದ ಗುಣಮುಖರಾಗಿದ್ದಾರೆ.

ಈ ಹಿಂದೆ ಇವರೆಲ್ಲರೂ ಮಹರಾಷ್ಟ್ರ ದಿಂದ ಜಿಲ್ಲೆಗೆ ಬಂದವರಾಗಿದ್ದು ಈ ವೇಳೆ ಸೊಂಕು ಪತ್ತೆಯಾಗಿತ್ತು. ಚಿಕಿತ್ಸೆ ನೀಡಿ ಇವರ ಗಂಟಲು ದ್ರವದ ಅಂತಿಮ ವರದಿಯಲ್ಲಿ ನೆಗೆಟಿವ್ ಬಂದ ಕಾರಣ ಆಸ್ಪತ್ರೆಯಿಂದ ಭಾನುವಾರ ಬಿಡುಗಡೆ ಮಾಡಲಾಗಿದೆ.

ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ಹಾಗೂ ಆಸ್ಪತ್ರೆಯ ಸಿಬ್ಬಂದಿ ಗುಣಮುಖರಾದವರಿಗೆ ಬೀಳ್ಕೊಟ್ಟರು.

120 ಸೊಂಕಿತರಿಗೆ ಕಾರವಾರದ ಮೆಡಿಕಲ್ ಕಾಲೇಜಿನ ಕೋವಿಡ್ ವಾರ್ಡ ನಲ್ಲಿ ಚಿಕಿತ್ಸೆ !

ಜಿಲ್ಲೆಯ ಭಟ್ಕಳದಲ್ಲಿ ಮೊದಲ ಬಾರಿಗೆ ಸೋಂಕು ಪತ್ತೆಯಾದಾಗ 9 ಮಂದಿಯನ್ನು ಕಾರವಾರದ ಪತಂಜಲಿ ನೌಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.ದುಬೈ ನಿಂದ ಬಂದ ಭಟ್ಕಳದ ಓರ್ವನಿಗೆ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಯಲ್ಲಿ ಹಾಗೂ ಭಟ್ಕಳದ ಇನ್ನೋರ್ವ ಗರ್ಭಿಣಿಗೆ ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಗುಣಪಡಿಸಲಾಗಿತ್ತು.

ನಂತರ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್- 19 ವಾರ್ಡ್ ಸ್ಥಾಪನೆಯಾದಾಗಿನಿಂದ ಈವರೆಗೆ 120 ಸೋಂಕಿತರನ್ನು ದಾಖಲಿಸಲಾಗಿತ್ತು. ಈ ಪೈಕಿ ಈಗಾಗಲೇ 94 ಸೋಂಕಿತರು ಗುಣಮುಖರಾಗಿದ್ದು, ಓರ್ವ ಮಂಗಳೂರಿನಲ್ಲಿ ಚಿಕಿತ್ಸೆ ಪಡೆದು ಗುಣಮುಖನಾಗಿ ವಾಪಸ್ಸಾಗಿದ್ದಾರೆ.

ಜಿಲ್ಲೆಯ ಒಟ್ಟು 130 ಸೋಂಕಿತರು ಹಾಗೂ ಇಬ್ಬರು ಕುಂದಾಪುರ ಮೂಲದವರನ್ನೂ ಸೇರಿ 132 ಸೋಂಕಿತರ ಪೈಕಿ ಜಿಲ್ಲೆಯ ಮೂಲದವರು ಹಾಗೂ ಜಿಲ್ಲೆಯಲ್ಲಿ ಗುಣಮುಖರಾದವರ ಸಂಖ್ಯೆ 108ಕ್ಕೆ ಏರಿಕೆಯಾದಂತಾಗಿದೆ. ಸದ್ಯ 24 ಸಕ್ರಿಯ ಸೋಂಕಿತರಿಗೆ ಕ್ರಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರಿದಿದ್ದು ಎಲ್ಲರ ಆರೋಗ್ಯ ತಹಬಂದಿಯಲ್ಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ