ಉತ್ತರ ಕನ್ನಡ 24 ಕರೋನಾ ಫಾಸಿಟಿವ್ ! ಕಾರವಾರ ,ಭಟ್ಕಳ,ಶಿರಸಿ,ಯಲ್ಲಾಪುರಕ್ಕೆ ಶಾಕ್ !

2127

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 24 ಕರೋನಾ ಫಾಸಿಟಿವ್ ಬರುವ ಸಾಧ್ಯತೆಗಳಿವೆ.

ಮುಂಡಗೋಡದ ಇಬ್ಬರು, ಹೊನ್ನಾವರದ ಐವರು, ಶಿರಸಿಯಲ್ಲಿ ಒಬ್ಬರಿಗೆ, ಕಾರವಾರದ ಆಟೋ ಚಾಲಕ ಸೇರಿ ಇಬ್ಬರು, ಮಹಾರಾಷ್ಟ್ರ ದಿಂದ ಬಂದ ಗೋಕರ್ಣದ ಒಬ್ಬರು, ಯಲ್ಲಾಪುರದ ಏಳು ಮಂದಿಗೆ ಇಂದು ಸೋಂಕು ದೃಢಪಟ್ಟಿದ್ದು ಭಟ್ಕಳದ ವಿದೇಶದಿಂದ ಬಂದವರಿಗೂ ಕರೂನಾ ಸೊಂಕು ದೃಡಪಟ್ಟಿದ್ದು ಇಂದಿನ ಬುಲಟಿನ್ ನಲ್ಲಿ ಒಟ್ಟು 24 ಜನರ ಫಾಸಿಟಿವ್ ವರದಿ ಬರುವ ಸಾಧ್ಯತೆಗಳಿವೆ.

ಯಲ್ಲಾಪುರದಲ್ಲಿ ಸಾರಿಗೆ ಸಿಬ್ಬಂದಿಗೂ ಕರೋನಾ ಫಾಸಿಟಿವ್!

22/06/2020 ರಂದು ಪತ್ತೆಯಾದ p-9167 ಸಂಖ್ಯೆ 25 ವರ್ಷ ವಯಸ್ಸಿನ ಯಲ್ಲಾಪುರದ ಕಂಡಕ್ಟರ್ ಸಂಪರ್ಕ ಹೊಂದಿದ್ದ ಐದು ಜನ ಸಾರಿಗೆ ಸಿಬ್ಬಂದಿಗೆ ಇಂದು ಫಾಸಿಟಿವ್ ದೃಡ ಪಟ್ಟಿದೆ . ಇನ್ನು ಬಸ್ ನಲ್ಲಿ ಸಂಚರಿಸಿದ ಪ್ರಯಾಣಿಕರಿಗೂ ಫಾಸಿಟಿವ್ ಸಾಧ್ಯತೆ ಇದ್ದು ಇದರ ವಿವರ ಬಹಿರಂಗವಾಗಬೇಕಿದೆ.

ಸಮುದಾಯಕ್ಕೆ ಹಬ್ಬದಂತೆ ತಡೆದಿರುವ ಜಿಲ್ಲಾಡಳಿತ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಮಾಧಾನದ ವಿಷಯವೆಂದರೆ ಈ ವರೆಗೂ ಸಮುದಾಯಕ್ಕೆ ಹರಡದಂತೆ ತಡೆಯುವಲ್ಲಿ ಜಿಲ್ಲಾಡಳಿತ ಯಶಸ್ಸು ಕಂಡಿದೆ. ಇನ್ನು ಭಟ್ಕಳದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಫಾಸಿಟಿವ್ ಬರುವ ಸಾಧ್ಯತೆಗಳಿದ್ದು ಈ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದೆ.

ಭಟ್ಕಳದಲ್ಲಿ ಪ್ರತಿ ವಾರ್ಡ ಗೆ ಎರಡು ಫಿವರ್ ಕ್ಲೀನಿಕ್ ಅನ್ನು ತೆರೆಯಲಾಗಿದ್ದು 65 ವರ್ಷದಿಂದ ಮೇಲ್ಪಟ್ಟ ಹಾಗೂ ಗರ್ಭಿಣಿ ಸ್ತ್ರೀಯರು ಕಡ್ಡಾಯವಾಗಿ ತಪಾಸಣೆಗೆ ಒಳಗಾಗಬೇಕಿದೆ. ಒಂದುವೇಳೆ ತಪಾಸಣೆಗೆ ಒಳಗಾಗದೇ ಇದ್ದಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ರವರು ನೀಡಿದ್ದಾರೆ.ಇನ್ನು ಆರೋಗ್ಯ ಹದಗೆಟ್ಟಿದ್ದು ಓಡಾಡಲು ಆಗದ ಸ್ಥಿತಿಯಲ್ಲಿ ಇರುವವರಿಗೆ ಮೊಬೈಲ್ ಕ್ಲೀನಿಕ್ ವ್ಯವಸ್ತೆ ಮಾಡಲಾಗಿದೆ.

ಬೆಂಗಳೂರಿನಿಂದ ಬಂದವರಿಗೂ ತಪಾಸಣೆ!

ರಾಜ್ಯದಲ್ಲಿ ಕರೋನಾ ಫಾಸಿಟಿವ್ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತಿದ್ದು ಈ ಹಿಂದೆ ಮುಂಬೈ ನಿಂದ ಬಂದವರಿಗೆ ಯಾವರೀತಿ ತಪಾಸಣೆ ಮಾಡಲಾಗುತಿತ್ತೋ ಅದೇ ಮಾದರಿಯಲ್ಲಿ ಆರೋಗ್ಯ ತಪಾಸಣೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ.ಬಸ್ ನಲ್ಲಿ ಬಙದವರನ್ನು ನೇರ ಫೀವರ್ ಕ್ಲೀನಿಕ್ ನಲ್ಲಿ ತಪಾಸಣೆ ನಡೆಸಲಾಗುತ್ತದೆ. ಸೊಂಕಿನ ಲಕ್ಷಣ ಇದ್ದವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವ ಪರೀಕ್ಷೆ ಸಹ ನಡೆಸಲಾಗುತ್ತದೆ. ಒಂದುವೇಳೆ ಖಾಸಗಿ ವಾಹನದಲ್ಲಿ ಬಂದವರು ಫೀವರ್ ಕ್ಲೀನಿಕ್ ನಲ್ಲಿ ತಪಾಸಣೆ ಮಾಡಿಕೊಳ್ಳದಿದ್ದರೂ ಅಂತವರನ್ನು ಗುರುತು ಹಚ್ಚಿ ತಪಾಸಣೆ ಮಾಡಲಾಗುತ್ತದೆ. ಯಾರೂ ಕೂಡ ಹೆದರುವ ಅವಷ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಕರೋನಾ ವಾರಿಯರ್ಸ ಆಗಿರುವ ವ್ಯಕ್ತಿಗಳಿಗೆ ಹಾಗೂ ಅಂಗನವಾಡಿ ಕಾರ್ಯಕರ್ತರಿಗೆ ಸೊಂಕು ಪತ್ತೆಯಾದರೆ ಅವರಿಗೆ ವಿಶೇಷ ವಾರ್ಡ ನಲ್ಲಿ ಪ್ರತ್ತೇಕ ಚಿಕಿತ್ಸೆ ನೀಡಲಾಗಿವು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Leave a Reply

Your email address will not be published. Required fields are marked *