add

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೂರು ಕರೋನಾ ಫಾಸಿಟಿವ್ !ಮೂರು ಜನ ಬಿಡುಗಡೆ?

2303

ಕಾರವಾರ :- ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ 3 ಕೊರೊನಾ ಪಾಸಿಟಿವ್ ಪತ್ತೆಯಾಗುವ ಮೂಲಕ
99ಕ್ಕೆ ಏರಿಕೆಯಾಗುವ ಮೂಲಕ ಮತ್ತೆ ಬೆಚ್ಚಿ ಬೀಳಿಸಿದೆ.ಮಹಾರಾಷ್ಟ್ರದಿಂದ ವಾಪಸ್ಸಾದ ಮೂವರಲ್ಲಿ ಕೋವಿಡ್-19 ಪಾಸಿಟಿವ್ ದೃಡವಾಗಿದೆ.ಹಳಿಯಾಳ ಮೈಲದ 21 ವರ್ಷದ ಸೋಂಕಿತ ಯುವತಿ ಸಂಖ್ಯೆ 6045, ದಾಂಡೇಲಿಯ 34 ವರ್ಷದ ಸೋಂಕಿತ ವ್ಯಕ್ತಿ ಸಂಖ್ಯೆ 6046 ಹಾಗೂ 24 ವರ್ಷದ ಸೋಂಕಿತ ಯುವಕ ಸಂಖ್ಯೆ 6047 ಆಗಿದೆ‌.

ನಾಲ್ಕು ದಿನಗಳ ಬಳಿಕ ಜಿಲ್ಲೆಯಲ್ಲಿ ಮತ್ತೆ ಕೊರೊನಾ ಪ್ರಕರಣ ದಾಖಲಾಗಿದೆ.

ರಾಜ್ಯದ ವಿವರ ಇಲ್ಲಿದೆ:-

ಕೊರೊನಾ ಸೋಂಕಿನಿಂದ ಗುಣಮುಖರಾದ ಮೂವರ ಬಿಡುಗಡೆ !

ಇಂದು ಕರೋನಾ ದಿಂದ ಗುಣಮುಖರಾದವರು.

ಸಿದ್ಧಾಪುರ ಮೂಲದ ಇಬ್ಬರು ಯುವತಿಯರು ಓರ್ವ ಮಹಿಳೆ ಗುಣಮುಖರಾಗಿ ಕಾರವಾರದ ವೈದ್ಯಕೀಯ ಕಾಲೇಜಿನ ಕೋವಿಡ್ ವಾರ್ಡ ನಿಂದ ಇಂದು ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 85 ಮಂದಿ ಕೊರೊನಾ ಸೋಂಕಿನಿಂದ ಗುಣಮಖರಾಗಿದ್ದು ಸದ್ಯ 14 ಮಂದಿ ಸೋಂಕಿತರಿಗೆ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ