ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 33 ಮಂದಿಗೆ ಕರೋನಾ ಸೋಂಕು ದೃಢಪಡುವ ಮೂಲಕ 545.ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ ಏರಿಕೆಯಾಗಿದೆ.
ಯಾವತಾಲೂಕಿನಲ್ಲಿ ಎಷ್ಟು ?
ಮುಂಡಗೋಡದಲ್ಲಿ 13.
ಹಳಿಯಾಳದಲ್ಲಿ 8.
ಕಾರವಾರದಲ್ಲಿ 10.
ಶಿರಸಿ -1
ಹೊನ್ನಾವರ-1
ಮುಂಡಗೋಡು:-
ಮಂಗಳೂರು-1 ಬೆಂಗಳೂರು-1 ವಾಪಸ್ಸಾದವರನ್ನು ಹೊರತುಪಡಿಸಿದರೆ ಉಳಿದವರೆಲ್ಲಾ ಟಿಬೆಟಿಯನ್ ಕಾಲೋನಿಯ ಸೋಂಕಿತನ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದವರಾಗಿದ್ದಾರೆ.
ಸೊಂಕಿತರಲ್ಲಿ 36, 38, 36 ವರ್ಷದ ಮಹಿಳೆ, 17, 7 ವರ್ಷದ ಬಾಲಕಿ, 14, 15, 12, 8, 12 ವರ್ಷದ ಬಾಲಕ, 43 ವರ್ಷದ ಪುರುಷ, 26, 22 ವರ್ಷದ ಯುವತಿಯರಿಗೆ ಸೋಂಕು ದೃಢಪಟ್ಟಿದೆ.
ಹಳಿಯಾಳದಲ್ಲಿ ಎಲ್ಲಾ ಸೋಂಕಿತರು ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ.


ಇಲ್ಲಿ 59, 82 ವರ್ಷದ ವೃದ್ಧೆ, 3 ವರ್ಷದ ಬಾಲಕ, 26
ವರ್ಷದ ಯುವತಿ, 40, 34, 40 ವರ್ಷದ ಮಹಿಳೆಯರು, 32 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.
ಕಾರವಾರದಲ್ಲಿ ಇಬ್ಬರು ಮಂಗಳೂರು, ಯುರೋಪಿನಿಂದ ಬಂದವರು, ಇನ್ನೋರ್ವ ಆರೋಗ್ಯ ಸಿಬ್ಬಂದಿಯಾದರೆ, ಏಳು ಸೋಂಕಿತರ ಸೋಂಕಿನ ಮೂಲ ಇನ್ನೂ ಪತ್ತೆಯಾಗಬೇಕಿದೆ.
ಇಲ್ಲಿ 36, 37 ವರ್ಷದ ಮಹಿಳೆಯರಿಗೆ, 86 ವರ್ಷದ ವೃದ್ಧೆ, 43, 34, 31, 45, 30 ವರ್ಷದ ಪುರುಷರು, 28 ವರ್ಷದ ಯುವಕ, 25 ವರ್ಷದ ಯುವತಿಗೆ ಸೋಂಕು ದೃಢಪಟ್ಟಿದೆ.
ಶಿರಸಿಯಲ್ಲಿ 28 ವರ್ಷದ ಆರೋಗ್ಯ ಸಿಬ್ಬಂದಿಗೂ ಸೋಂಕು ದೃಢಪಟ್ಟಿದ್ದು, ಹೊನ್ನಾವರದ 80 ವರ್ಷದ ವೃದ್ಧನಿಗೆ ಸೋಂಕು ತಗುಲಿದ್ದು ಮೂಲ ಪತ್ತೆಯಾಗಬೇಕಿದೆ.