ಉತ್ತರ ಕನ್ನಡ ಜಿಲ್ಲೆಯಲ್ಲಿ
ಇಂದು ಕೋವಿಡ್- 19ಗೆ ಸಂಬಂಧಿಸಿದಂತೆ 17 ಹೊಸ ಪ್ರಕರಣಗಳು ವರದಿಯಾಗಿವೆ.
ಭಟ್ಕಳದಲ್ಲಿ 11, ಕುಮಟಾ, ಹಳಿಯಾಳದಲ್ಲಿ ತಲಾ ಎರಡು, ಅಂಕೋಲಾ, ಮುಂಡಗೋಡದಲ್ಲಿ ತಲಾ ಒಂದು ಪ್ರಕರಣ ಇಂದು ದೃಢಪಟ್ಟಿದೆ.
ಇಂದಿನ ಫಾಸಿಟಿವ್ ವಿವರ:-

ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 293ಕ್ಕೆ ತಲುಪಿದ್ದು, ಎರಡು ಸಾವಾಗಿದೆ. 143 ಮಂದಿ ಈಗಾಗಲೇ ಗುಣಮುಖರಾಗಿದ್ದು, ಸಕ್ರಿಯವಾಗಿ 150 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ.
ಶಿರಸಿ ಪೊಲೀಸರಿಗೆ ರಿಲೀಫ್ !
ಶಿರಸಿಯಲ್ಲಿ ಕೈದಿಯೊಬ್ಬನಿಗೆ ಫಾಸಿಟಿವ್ ಬರುವ ಮೂಲಕ ಶಿರಸಿ ನಗರ ಪೊಲೀಸರು ,ಉಪ ಕಾರಾಗೃಹದ ಸಿಬ್ಬಂದಿ ಸೇರಿ 80 ಜನ ನೇರ ಹಾಗೂ ಪರೋಕ್ಷ ಸಂಪರ್ಕದವರ ಗಂಟಲು ಗ್ರಂಥಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರಲ್ಲಿ ಬಹುತೇಕ ಎಲ್ಲರ ಮೊದಲ ಸುತ್ತಿನ ವರದಿ ನೆಗಟೀವ್ ಬಂದಿದ್ದು ಸದ್ಯ ಶಿರಸಿ ಮಟ್ಟಿಗೆ ಇಂದು ರಿಲೀಫ್ ಎನ್ನಬಹುದಾಗಿದೆ.
ಇನ್ನು ಇಂದು ಫಾಸಿಟಿವ್ ಬಂದ ಬಹುತೇಕರಲ್ಲಿ ಪ್ರಾಥಮಿಕ ಸಂಪರ್ಕ ಹಾಗೂ ಮಹಾರಾಷ್ಟ್ರದ ಲಿಂಕ್ ಹೊಂದಿದವರಾಗಿದೆ.