BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ವ್ಯಾಕ್ಸಿನ್ ಸಂಗ್ರಹ! ಶೀಘ್ರದಲ್ಲಿ ಸಿಗಲಿದೆ ರೋಗ ನಿರೋಧಕ ಚುಚ್ಚುಮದ್ದು.

895

ಕಾರವಾರ :-ದೇಶದಲ್ಲಿ ಶೀಘ್ರದಲ್ಲಿ ಕೋವಿಡ್-19 ವ್ಯಾಕ್ಸಿನ್ ಬರುವ ಬಗ್ಗೆ ಸುದ್ದಿ ಸದ್ದುಮಾಡುತ್ತಿದೆ. ಹಾಗೆಯೇ ಈವರೆಗೂ ವ್ಯಾಕ್ಸಿನ್ ಸಿದ್ದವಾಗಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ.ಆದ್ರೆ ಶೇ.94.3 % ಗುಣಪಡಿಸಬಲ್ಲ ಹಾಗೂ ಕೋವಿಡ್ ನಿಂದ ರಕ್ಷಿಸಿಕೊಳ್ಳುವ ವ್ಯಾಕ್ಸಿನ್ ಸಿದ್ದವಾಗಿದೆ ಎಂದು ಮೂಲಗಳು ಹೇಳುತ್ತವೆ.

ಇದಕ್ಕೆ ಸಾಕ್ಷಿಯಾಗಿ ಪ್ರಧಾನಮಂತ್ರಿಗಳು ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನೆಡೆಸಿದ್ದು ಮುಖ್ಯಮಂತ್ರಿ ಯಡಿಯೂರಪ್ಪನವರು ಸಹ ಮೂರ್ನಾಲ್ಕು ದಿನದಲ್ಲಿ ಕೋವಿಡ್ ವ್ಯಾಕ್ಸಿನ್ ಬರುವ ಕುರಿತು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇನ್ನು ಸರ್ಕಾರದಿಂದ ಈಗಾಗಲೇ ಆದೇಶ ಬಂದಿದ್ದು ಔಷಧಿ ಸಂಗ್ರಹಣೆಗೆ ಕೋಲ್ಡ್ ಸ್ಟೋರೇಜ್ ನನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡ ಕೋವಿಡ್ -೧೯ ವ್ಯಾಕ್ಸಿನ್ ಸ್ಟೊರೇಜ್ ಮಾಡಲು ಸಕಲ ಸಿದ್ದತೆ ಮಾಡಿಕೊಂಡಿದ್ದು ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಡೀಪ್ ಪ್ರಿಜ್ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಐಸ್ ಲ್ಯಾಂಡ್ ರೆಪ್ರಿಜಿಯೇಟರ್ (ILR) -105,ಪಶು ಇಲಾಖೆಯಿಂದ ಪಡೆದ – 18 ಒಟ್ಟು 123 ಐ.ಎಲ್.ಆರ್ ಪ್ರಿಜ್ ವ್ಯವಸ್ತೆಗಳಿದ್ದು
ಆರೋಗ್ಯ ಇಲಾಖೆಯಿಂದ – 1 ಪಶು ಇಲಾಖೆಯಿಂದ ಪಡೆದ -2 ವಾಕ್ ಇನ್ ಕೂಲರ್ ವ್ಯವಸ್ಥೆಗಳಿದ್ದು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ್ ರವರು ಕನ್ನಡವಾಣಿಗೆ ತಿಳಿಸಿದ್ದಾರೆ.

ಹೇಗಿದೆ ಕೋವಿಡ್ -19 ಸಂಗ್ರಹಣಾಗಾರ? ಕೆಳಗಿನ ಲಿಂಕ್ ನ ವೀಡಿಯೋ ನೋಡಿ:-

ಯಾರಿಗೆಲ್ಲಾ ಸಿಗಲಿದೆ ಕೋವಿಡ್ ವ್ಯಾಕ್ಸಿನ್!

ಸದ್ಯ ಮೂರ್ನಾಲ್ಕು ದಿನದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಗೆ ಈ ವ್ಯಾಕ್ಸಿನ್ ನನ್ನು ಕೇಂದ್ರ ಸರ್ಕಾರ ಕಳುಹಿಸಿಕೊಡಲಿದೆ.

ಮೊದಲ ಹಂತವಾಗಿ ಕೋವಿಡ್ ವಾರಿಯರ್ಸ,ವೈದ್ಯರು,ಆರೋಗ್ಯ ಕಾರ್ಯಕರ್ತರು ಹಾಗೂ ವಯಸ್ಸಾದವರಿಗೆ ಮೊದಲ ಹಂತದಲ್ಲಿ ನೀಡಲಾಗುತ್ತದೆ.
ನಂತರ ಗ್ರಾಮಪಂಚಾಯ್ತಿ ಮಟ್ಟದಲ್ಲಿ ಈ ವ್ಯಾಕ್ಸಿನ್ ಅನ್ನು ಹಂತ ಹಂತವಾಗಿ ನೀಡಲಾಗುತ್ತದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!