BREAKING NEWS
Search

ಉತ್ತರ ಕನ್ನಡ ಜಿಲ್ಲೆ ಜಿಲ್ಲೆಯಲ್ಲಿ ನಾಳೆ ಕರೋನಾ ಲಸಿಕೆ ಡ್ರೈ ರನ್ !

611

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಳೆ ಕರೋನಾ ವ್ಯಾಕ್ಸಿನ್ ಡ್ರೈ ರನ್ ಮಾಡಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.

ಲಸಿಕೆ ನೀಡಲು ಮೂರು ಕೊಠಡಿಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ನಾಳೆ ನಡೆಯುವ ಕರೋನಾ ಲಸಿಕೆಯ ಡ್ರೈ ರನ್ ಪರೀಕ್ಷಿಸಲು ಹಾಗೂ ಸಾಧಕ ಭಾದಕಗಳನ್ನು ತಿಳಿಯಲು ಎಸಿ ಮತ್ತು ತಹಶಿಲ್ದಾರ್ ರವರು ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಈಗಾಗಲೇ ನೂರು ಜನರನ್ನು ಲಸಿಕೆ ನೀಡಲು ಆಯ್ಕೆ ಮಾಡಲಾಗಿದೆ. ಆದರೇ ಒಂದು ಸೆಂಟರ್ ನಲ್ಲಿ ಮೊದಲು 25 ಜನರ ಮೇಲೆ ಮಾತ್ರ ಪ್ರಯೋಗಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ರವರು ಮಾಹಿತಿ ನೀಡಿದ್ದಾರೆ.

ಕರೋನಾ ವ್ಯಾಕ್ಸಿನ್ ಡ್ರೈ ರನ್ ವ್ಯವಸ್ಥೆ ಮಾಡಿರುವ ಆಸ್ಪತ್ರೆಗಳು ಈ ಕೆಳಗಿನಂತಿದೆ.

1)ಕಾರವಾರ ಮೆಡಿಕಲ್ ಕಾಲೇಜಿನ ಜಿಲ್ಲಾ ಆಸ್ಪತ್ರೆ.

2)ತಾಲೂಕು ಆಸ್ಪತ್ರೆ ಹೊನ್ನಾವರ

3)ಸಮುದಾಯ ಆರೋಗ್ಯ ಕೇಂದ್ರ ಹೊನ್ನಾವರ.

4) ಹೆಗಡೆ ಕಟ್ಟ ಸಮುದಾಯ ಆರೋಗ್ಯ ಕೇಂದ್ರ.ಶಿರಸಿ.

5) ಟಿ.ಎಸ್.ಎಸ್. ಖಾಸಗಿ ಆಸ್ಪತ್ರೆ. ಶಿರಸಿ.

6) ಕಾರವಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ.ಚಿತ್ತಾಕುಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ