BREAKING NEWS
Search

ಅಂಬಿಕಾ ನಗರದ ವಿದ್ಯುತ್ ಸಂಗ್ರಹಣಾಗಾರದಲ್ಲಿ ಸ್ಪೋಟ! ತಪ್ಪಿತು ದೊಡ್ಡ ದುರಂತ?

1519

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಅಂಬಿಕಾ ನಗರದಲ್ಲಿ ಕಾಳಿ ನದಿಗೆ ಅಡ್ಡವಾಗಿ ಕಟ್ಟಿರುವ ಕಾಳಿ ವಿದ್ಯುತ್ ಗಾರದ ವಿದ್ಯುತ್ ಸಂಗ್ರಹಣಾ ಗಾರದಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮ ಸ್ಪೋಟಗೊಂಡ ಘಟನೆ ನಡೆದಿದೆ.

ಸ್ಪೋಟದ ತೀರ್ವತೆಗೆ ಹಲವು ಟ್ರಾನ್ಸ್ ಫಾರ್ಮ ಗಳು ಸಂಪೂರ್ಣ ನಾಶವಾಗಿದ್ದು ಅದೃಷ್ಟವಶಾತ್ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಹಾಗೂ ಇಂಜಿನಿಯರ್ ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಟ್ರಾನ್ಸ್ ಫಾರ್ಮ ನಲ್ಲಿ ತಾಂತ್ರಿಕ ದೋಷ ಹಿನ್ನಲೆಯಲ್ಲಿ ಈ ಸ್ಟೋಟ ನಡೆದಿದೆ ಎನ್ನಲಾಗಿದ್ದು ನಿನ್ನೆ ಸಂಜೆವೇಳೆ ಘಟನೆ ನಡೆದಿದ್ದು ಕರ್ನಾಟಕ ವಿದ್ಯುತ್ ನಿಗಮದ ಅಧಿಕಾರಿಗಳು ಸ್ಪೋಟಗೊಂಡ ಮಾಹಿತಿಯನ್ನು ಗೌಪ್ಯವಾಗಿಟ್ಟಿದ್ದರು.

ಸ್ಪೋಟದ ವಿಡಿಯೋ ನೋಡಿ:-

https://youtu.be/3DHAuYdailo

ಸ್ಪೋಟಗೊಂಡ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ.ಈ ಹಿಂದೆ ಜೋಗಾದ ಮಹಾತ್ಮ ಗಾಂಧಿ ವಿದ್ಯುತ್ ಗಾರದಲ್ಲಿ ಬೆಂಕಿ ಅನಾಹುತವಾಗಿ ಕೋಟಿಗಟ್ಟಲೇ ನಷ್ಟವಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದ್ದು ಇದೇ ಮಾದರಿಯಲ್ಲಿ ಇಲ್ಲಿಯೂ ಸಹ ಘಟನೆ ನಡೆದಿದೆ.




Leave a Reply

Your email address will not be published. Required fields are marked *