BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಜೆ 6 ರಿಂದ ಎಲ್ಲಾ ಚಟುವಟಿಕೆಗಳು ಬಂದ್ -ಡಾ.ಹರೀಶ ಕುಮಾರ ಕೆ.

937

ಕಾರವಾರ:- ಕೊವಿಡ್-19 ತಡೆಗೆ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು, ಮೇ 31 ರವರೆಗೆ ಸಂಜೆ 6 ರಿಂದ ಬೆಳಗಿನ 7 ಗಂಟೆವರೆಗೆ ಎಲ್ಲ ಚಟುವಟಿಕೆಗಳನ್ನು ನಿಷೇಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ಹೇಳಿದ್ದಾರೆ.

ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಂಟಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಕೋರೋನಾ ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಜಿಲ್ಲೆಯಾಧ್ಯಂತ ಮೇ 31 ರವಗೆ ನಿಷೇದಾಜ್ಞೆ ಜಾರಿಗೊಳಿಸಿ ಕೆಲವು ಚಟುವಟಿಕೆಗಳನ್ನು ನಿರ್ಭಂಧಿಸಲಾಗಿರುತ್ತದೆ.

ಈ ನಿಷೇಧಿತ ಅವಧಿಯಲ್ಲಿ ವೈಧ್ಯಕೀಯ ಕಾರಣವನ್ನು ಹೊರತುಪಡಿಸಿ ಇನ್ನಿತರೆ ಯಾವುದೇ ಕಾರಣಕ್ಕಾಗಿ 65 ವರ್ಷ ಮೇಲ್ಪಟ್ಟವರು, ಗರ್ಭಿಣಿ ಮಹಿಳೆಯರು ಬಹು ಅಸ್ವಸ್ಥತೆಯಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಿಂದ ಹೊರಗಡೆ ಬರಲು ನಿರ್ಭಂಧಿಸಲಾಗಿದೆ ಎಂದರು.

ಸಾರ್ವಜನಿಕರು ಮಾಸ್ಕ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದ್ದು. ಮದುವೆ ಸಮಾರಂಭಕ್ಕೆ 50 ಹಾಗೂ ಶವ ಸಂಸ್ಕಾರಕ್ಕೆ 20 ಜನರಿಗೆ ಮಾತ್ರ ಅವಕಾಶವಿರುತ್ತದೆ.

ಹೊರ`ರಾಜ್ಯದಿಂದ ಬರುವವರು ಇ-ಪಾಸ್ ಹೊಂದಿರಬೇಕಾಗುತ್ತದೆ, ಕ್ವಾರಂಟೈನ್ ಕೂಡ ಕಡ್ಡಾಯವಾಗಿರುತ್ತದೆ ಅದೇ ರೀತಿ ವಿದೇಶದಿಂದ ಬರುವವರಿಗೆ ಮೊದಲು ಸಾಂಸ್ಥಿಕ ನಂತರ ಹೊಮ್ ಕ್ವಾರಂಟೈನ್ ಕಡ್ಡಾಯವಾಗಿರುತ್ತದೆ ಎಂದ ಅವರು ಜಿಲ್ಲೆಯಿಂದ ಹೊರ ಜಿಲ್ಲೆಗೆ ಹೋಗಲು ಯಾವುದೇ ಪಾಸ್ ನ ಅವಷ್ಯಕತೆ ಇಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾತನಾಡಿ ಮೇ 31 ರವರೆಗೂ ಶಾಲಾ ಕಾಲೇಜು ಪ್ರಾರಂಭಿಸಲಾಗುವದಿಲ್ಲ, ಜನರು ಅನಗತ್ಯವಾಗಿ ಓಡಾಡಬಾರದು, ಪೊಲೀಸ್ ಇಲಾಖೆಯಿಂದ ದ್ರೋಣ ಕ್ಯಾಮೆರಾ ಮೂಲಕ ಸಾರ್ವಜನಿಕ ಚಲನವಲನಗಳನ್ನು ಸೆರೆ ಹಿಡಿಯಲಾಗುತ್ತಿದ್ದು, ನೀಷೇದಾಜ್ಞೆಯನ್ನು ಉಲ್ಲಂಗಿಸುವರ ಮೇಲೆ ಕೇಸ್ ಬುಕ್ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಮ್ ರೋಶನ್ ಅವರು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಇಂದು ಪತ್ತೆಯಾಗಿದ್ದು ನಾಲ್ಕು ಸೊಂಕಿತರು!

ಮಂಗಳವಾರ ಜಿಲ್ಲೆಯಲ್ಲಿ 4 ಕೋವಿಡ್-19 ಪ್ರಕರಣಗಳು ಪತ್ತೆಯಾಗಿರುತ್ತವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ದಾಂಡೇಲಿ, ಯಲ್ಲಾಪುರ, ಜೋಯಿಡಾ ಹಾಗೂ ಹೊನ್ನಾವರದಲ್ಲಿ ತಲಾ 1 ರಂತೆ ಕೋರೋನಾ ಸೊಂಕಿತರು ಪತ್ತೆಯಾಗಿದ್ದು ಎಲ್ಲರೂ ಅಂತರಾಜ್ಯ ಪ್ರಯಾಣದ ಹಿನ್ನಲೆ ಹೊಂದಿದವರಾಗಿದ್ದಾರೆ ಅಲ್ಲದೇ ಎಲ್ಲರೂ ಕ್ವಾರಂಟೈನ್ ದಲ್ಲಿ ಇದ್ದವರಾಗಿರುವದರಿಂದ ಎಲ್ಲ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದು, ಜನರು ಆತಂಕ ಪಡಬೇಕಾಗಿಲ್ಲ ಎಂದು ಅವರು ಹೇಳಿದರು.
Leave a Reply

Your email address will not be published. Required fields are marked *