
ಕಾರವಾರ:- ಲಾಕ್ ಡೌನ್ ಇರುವ ಹಿನ್ನೆಲೆಯಲ್ಲಿ ಆಹಾರ ಧಾನ್ಯ ಪದಾರ್ಥಳ ಕೊರತೆ ಉಂಟಾದಂತವರು ಮನೆ ಆಶ್ರಯ ಇಲ್ಲದವರು ಹಾಗೂ ನಿರ್ಗತಿಕರಿಗೆ ಸಮಾಜ ಕಲ್ಯಾಣ ಮತ್ತು ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆಯ ವಿವಿಧ ವಸತಿ ನಿಲಯಗಳಲ್ಲಿ ಜಿಲ್ಲಾಡಳಿತವು ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಮನೆ ಆಶ್ರಯ ಇಲ್ಲದೇ ತೊಂದರೆಗೆ ಒಳಗಾದ ವ್ಯಕಿಗಳು, ನಿರ್ಗತಿಕರಿಗೆ ಸಹಾಯ ಹಸ್ತ ನೀಡಬೇಕೆನ್ನುವ ಸಾರ್ವಜನಿಕರು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎಸ್. ಪುರುಷೋತ್ತಮ (9483886886) ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ಬಸವರಾಜ ಬಡಿಗೇರ (9448508383) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಮಿಕರಿಗೆ ಸಹಾಯ ಹಸ್ತ – ಶಿವರಾಮ್ ಹೆಬ್ಬಾರ್ .

ಲಾಕ್ಡೌನ್ನಿಂದ ವಲಸೆ ಕಟ್ಟಡ ಹಾಗೂ ಇತರೆ ಕಾರ್ಮಿಕರು ನಿರಾಶ್ರಿತರಾಗಿ ತಮ್ಮ ಊರಿಗೂ ಹೋಗಲಾಗದೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಅಂಥವರಿಗೆ ತಾತ್ಕಾಲಿಕ ನೆಲೆ ಒದಗಿಸಲು, ಪ್ರತಿ ತಾಲ್ಲೂಕಿಗೆ ಒಂದರಂತೆ ಕಲ್ಯಾಣ ಮಂಟಪ ಅಥವಾ ಸಮುದಾಯ ಭವನಗಳನ್ನು ಸ್ಥಳೀಯವಾಗಿ ವಶಕ್ಕೆ ಪಡೆದು, ವಲಸೆ ಹಾಗೂ ನಿರಾಶ್ರಿತ ಕಟ್ಟಡ ಕಾರ್ಮಿಕರಿಗೆ ವಸತಿ ಹಾಗೂ ಊಟ ಉಪಚಾರವನ್ನು ಒದಗಿಸಲಾಗುವುದು ಎಂದು ಕಾರ್ಮಿಕ ಮತ್ತು ಸಕ್ಕರೆ ಖಾತೆ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

‘ಕೋವಿಡ್- 19 ಸೋಂಕು ರಾಜ್ಯಾದ್ಯಂತ ತೀವ್ರವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳಲ್ಲಿ, ಪ್ರತಿ ತಾಲ್ಲೂಕಿಗೆ ಒಂದರAತೆ ಕಲ್ಯಾಣ ಮಂಟಪ, ಸಮುದಾಯ ಭವನಗಳನ್ನು ಸ್ಥಳೀಯ ಜಿಲ್ಲಾಧಿಕಾರಿ ಮೂಲಕ ವಶಕ್ಕೆ ಪಡೆದು ವಲಸೆ ಹಾಗೂ ನಿರಾಶ್ರಿತ ಕಟ್ಟಡ ಕಾರ್ಮಿಕರಿಗೆ ವಸತಿ ಹಾಗೂ ಊಟ ಉಪಚಾರವನ್ನು ಒದಗಿಸಲಾಗುತ್ತದೆ’ ಎಂದು ತಿಳಿಸಿದ್ದಾರೆ.
‘ರಾಜ್ಯದ ಯಾವುದೇ ಕಾರ್ಮಿಕರು ಸಹ ಹಸಿವಿನಿಂದ ನರಳಬಾರದು ಎಂಬ ದೃಷ್ಟಿಯಿಂದ ‘ಹಂಗರ್ ಹೆಲ್ಪ್ಲೈನ್- 155214 ಸೇವೆಯನ್ನು ಪ್ರಾರಂಭಿಸಲಾಗಿದೆ. ಈ ಸೇವೆ ದಿನದ 24 ಗಂಟೆ ಸಹ ಕಾರ್ಯನಿರ್ವಹಿಸುತ್ತದೆ. ಇದರ ಉಪಯೋಗ ಎಲ್ಲ ಅರ್ಹ ಕಾರ್ಮಿಕರು ಪಡೆಯಬಹುದಾಗಿದೆ’ ಎಂದು ಹೇಳಿದ್ದಾರೆ.
