BREAKING NEWS
Search

ಕೊಡಸಳ್ಳಿ ಡ್ಯಾಮ್ ಗೆ ಬಂತು ಅಪಾಯ!ಡ್ಯಾಮ್ ಬಳಿ ಗುಡ್ಡ ಕುಸಿತ!

667

ಕಾರವಾರ/ಜೋಯಿಡಾ/ಯಲ್ಲಾಪುರ:-ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಅಲ್ಪ ಕಮ್ಮಿಯಾದರೂ ಅದರ ಪ್ರಭಾವ ಮಾತ್ರ ಈವರೆಗೂ ಬಾಧಿಸುತ್ತಲಿದ್ದು ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಕೊಡಸಳ್ಳಿ ಜಲಾಶಯದ ಮೇಲ್ಭಾಗದ ಗುಡ್ಡ ಕುಸಿತಗೊಂಡಿದೆ.


ಗುಡ್ಡ ಕುಸಿತದಿಂದ ಜಲಾಶಯದ ಮೇಲ್ಭಾಗಕ್ಕೆ ಹಾನಿಯಾಗಿದ್ದು ಜೋಯಿಡಾ ಭಾಗದ ಬಿರ್ಕೊಲ ಗ್ರಾಮಕ್ಕೆ ಹೋಗುವ ಡ್ಯಾಮ್ ನ ಮೇಲ್ಬಾಗದ ರಸ್ತೆಯ ಹಲವು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ.


ಡ್ಯಾಮ್ ನಲ್ಲಿ 27754.00ಕ್ಯೂಸೆಕ್ಸ್ ನೀರು ಒಳಹರಿವು ಹಾಗೂ 24165.0 ಕ್ಯೂಸೆಕ್ಸ್ ನೀರು ಹೊರಹರಿವು ಇದ್ದು 20mm (ಮಿಲೀ ಮಿಟರ್) ಕಳೆದ 24 ಘಂಟೆಯಲ್ಲಿ ಮಳೆಯಾಗಿದ್ದು ಹೆಚ್ಚಿನ ಮಳೆಯಾದಲ್ಲಿ ಡ್ಯಾಮ್ ಗೆ ತೊಂದರೆಯಾಗುವ ಸಾಧ್ಯತೆಗಳಿವೆ.


ಈಗಾಗಲೇ ಜಲಾಶಯದ ಭಾಗ ಅಪಾಯದಲ್ಲಿದ್ದು
ಗುಡ್ಡ ಕುಸಿತ ಹಿನ್ನಲೆಯಲ್ಲಿ ಕೆ.ಪಿ.ಸಿ.ಎಲ್ ಇಲಾಖೆಯವರು ಸ್ಥಳೀಯರಿಗೆ ರಸ್ತೆ ಸಂಚಾರ ಸ್ಥಗಿತ ಮಾಡಿದ್ದಾರೆ.
ಇದಲ್ಲದೇ ಡ್ಯಾಮ್ ಬಳಿ ಗುಡ್ಡ ಕುಸಿದು ಡ್ಯಾಮ್ ನ ಮೇಲ್ಭಾಗ ಗಾಸಿಯಾಗಿರುವ ಕುರಿತು ಸ್ಥಳೀಯ ಜನರು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ನೀಡಿದ್ದಾರೆ.
Leave a Reply

Your email address will not be published. Required fields are marked *