ಹಳಿಯಾಳ ಕ್ವಾರಂಟೈನ್ ಸೆಂಟರ್ ನಲ್ಲಿ ಅವ್ಯವಸ್ಥೆ!ದುಃಖ ತೋಡಿಕೊಂಡ ಜನ ಹೇಳಿದ್ದೇನು ಗೊತ್ತಾ?

1630

ಕಾರವಾರ :- ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಗಳಿಲ್ಲದ ಹಿನ್ನಲೆ ಕ್ವಾರಂಟೈನ್‌ನಲ್ಲಿರುವವರು ಉಳಿಯಲು ಪರದಾಡುತ್ತಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.

ತಾಲ್ಲೂಕಿನ ಕೆಸರೊಳ್ಳಿ ಗ್ರಾಮದ ದೇವರಾಜ ಅರಸು ವಸತಿ ನಿಲಯದಲ್ಲಿ ಹೊರರಾಜ್ಯ ಹಾಗೂ ಹೊರಜಿಲ್ಲೆಯಿಂದ ಬಂದವರನ್ನ ಕ್ವಾರಂಟೈನ್ ಮಾಡಲಾಗಿದೆ.

ಇಬ್ಬರು ಗರ್ಭಿಣಿಯರು, ಮಕ್ಕಳು ಸೇರಿದಂತೆ 25ಕ್ಕೂ ಅಧಿಕ ಮಂದಿ ಕ್ವಾರಂಟೈನ್ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಆದರೆ ಕ್ವಾರಂಟೈನ್ ಮಾಡಲಾದವರಿಗೆ ಉಳಿದುಕೊಳ್ಳಲು ಕನಿಷ್ಠ ಸೌಲಭ್ಯವನ್ನ ಸಹ ಅಧಿಕಾರಿಗಳು ಒದಗಿಸಿಲ್ಲವಾಗಿದ್ದು ಕುಡಿಯಲು ಬಿಸಿನೀರು, ಕೈ ತೊಳೆಯಲು ಸ್ಯಾನಿಟೈಸರ್, ಹ್ಯಾಂಡ್‌ವಾಷ್‌ ಸಹ ನೀಡಿಲ್ಲ.

ಸಮಸ್ಯೆಯ ವಿಡಿಯೋ ನೋಡಿ:-

ಅಲ್ಲದೇ ಕ್ವಾರಂಟೈನ್‌ಗೆ ಒಳಗಾದವರು ಮನೆಗಳಿಂದಲೇ ಚಾಪೆಗಳನ್ನ ತರಿಸಿಕೊಂಡಿದ್ದು ಇಲ್ಲವಾದಲ್ಲಿ ನೆಲದ ಮೇಲೆ ಮಲಗುವ ಸ್ಥಿತಿ ಇದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಊಟವನ್ನ ಸಹ ಒದಗಿಸುತ್ತಿಲ್ಲ ಅಂತಾ ಕ್ವಾರಂಟೈನ್ ಕೇಂದ್ರದಲ್ಲಿರುವವರು ಆರೋಪ ಮಾಡಿದ್ದು ಅಧಿಕಾರಿಗಳೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ