ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಕರೋನಾ ಫಾಸಿಟಿವ್! ನಾಳೆ ಭಟ್ಕಳಿಗರಿಗೆ ಶಾಕ್ !

2447

ಕಾರವಾರ:- ಉತ್ತರಕನ್ನಡ ಜಿಲ್ಲೆಯಲ್ಲಿ ಇಂದು ಒಂದು ಕೋವಿಡ್ -19 ಪಾಸಿಟಿವ್ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಈ ಮೂಲಕ ಕೋವಿಡ್-19 ಪ್ರಕರಣಗಳ ಸಂಖ್ಯೆ ಒಟ್ಟು 126ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಿಂದ ವಾಪಸ್ಸಾದ ಹಳಿಯಾಳದ 35 ವರ್ಷದ ಪುರುಷ ಸೋಂಕಿತ ಸಂಖ್ಯೆ 7949 ಆಗಿದ್ದು ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣ 33ಕ್ಕೆ ಏರಿಕೆಯಾಗಿದೆ.ಈಗಾಗಲೇ ಜಿಲ್ಲೆಯಲ್ಲಿ 93 ಮಂದಿ ಸೋಂಕಿತರು ಗುಣಮುಖರಾಗಿ ಬಿಡುಗಡೆಗೊಂಡಿದ್ದು ಸೋಂಕಿತರಿಗೆ ಕಾರವಾರದ ಕ್ರಿಮ್ಸ್‌ನ ಕೋವಿಡ್-19 ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಾಳೆ ಭಟ್ಕಳ ಜನತೆಗೆ ಶಾಕ್ !

ನಾಳೆ ಬರುವ ಬುಲಟಿನ್ ನಲ್ಲಿ ನಾಲ್ಕು ಜನರಿಗೆ ಕರೋನಾ ಸೊಂಕು ದೃಡಪಡಲಿದ್ದು ಇಂದಿನ ಗಂಟಲು ದ್ರವ ಪರೀಕ್ಷೆಯಿಂದ ದೃಡಪಟ್ಟಿದೆ.
ಇದರಲ್ಲಿ ಭಟ್ಕಳದ ಮೂರು ಜನರು ಇದ್ದು ಇದರಲ್ಲಿ ಓರ್ವರು ಅಂತರಾಷ್ಟ್ರೀಯ ಪ್ರಯಾಣ ಬೆಳಸಿ ಬಂದವರಾಗಿದ್ದರೆ ಉಳಿದವರು ಮಹರಾಷ್ಟ್ರ ದಿಂದ ಬಂದವರಾಗಿದ್ದಾರೆ. ಇನ್ನೋರ್ವರು ಕುಮಟಾದವರಾಗಿದ್ದು ಇವರು ಸಹ ಮಹಾರಾಷ್ಟ್ರ ದಿಂದ ಮರಳಿದವರಾಗಿದ್ದಾರೆ.

ಇಂದಿನ ರಾಜ್ಯ ಕೋವಿಡ್ -೧೯ ಬುಲಟಿನ್ ಇಲ್ಲಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ