ಮುಂದುವರೆದ ಪ್ರವಾಹ:ಹೆಲಿಕಾಪ್ಟರ್ ಬಳಕೆ ಮತ್ತೆ ಆತಂಕ ತಂದ ನದಿ ಪ್ರವಾಹ!ಸಂಪೂರ್ಣ ವಿವರ ಇಲ್ಲಿದೆ.

1114

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಐದನೇ ದಿನವೂ ಮಳೆ ಅಬ್ಬರ ಹೆಚ್ಚಾಗಿದ್ದು ಯಲ್ಲಾಪುರ ಭಾಗದ ಬೇಡ್ತಿ ಸೇತುವೆ ಬಳಿ ಮಣ್ಣು ಕುಸಿದು ಸೇತುವೆ ಮೇಲೆ ವಾಹನ ಸಂಚಾರ ಬಂದ್ ಆಗಿದ್ದು ಯಲ್ಲಾಪುರ ಶಿರಸಿ ನಡುವಿನ ಸಂಚಾರ ಸ್ಥಗಿತವಾಗಿದ್ದು ಸೇತುವೆ ಬಿರುಕು ಬಿಟ್ಟಿದೆ.ಇನ್ನು ಅಂಕೋಲ ಭಾಗದಲ್ಲಿಯೂ ಗಂಗಾವಳಿ ನದಿ ಉಕ್ಕಿ ಹರಿದಿದ್ದು ನದಿ ಪ್ರವಾಹಕ್ಕೆ ರಾಮನಗುಳಿ ಸೇತುವೆ ಕೊಚ್ಚಿ ಹೋಗಿದ್ದು ರಾಮನಗುಳ್ಳಿ ,ಗುಳ್ಳಾಪುರ ಗ್ರಾಮದ ಸಂಪರ್ಕ ಕಡಿತಗೊಂಡಿದೆ.

ಎಚ್ಚರ ಎಚ್ಚರ ಮತ್ತಷ್ಟು ಪ್ರವಾಹ !

ಕದ್ರಾ ಡ್ಯಾಮ್ ನಿಂದ 2.2 ಲಕ್ಷ ಕ್ಯೂಸೆಕ್ಸ್ ನೀರು ಹೆಚ್ಚ ಬಿಡುಗಡೆ ಮಾಡಲಾಗಿದೆ.

ಇದರಿಂದಾಗಿ ಕಾಳಿ ನದಿ ತಡದಲ್ಲಿ ಹೆಚ್ಚಿದ ಪ್ರವಾಹ ಬೀತಿ ಎದುರಾಗಿದ್ದು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

ಕಾಳಿ ನದಿ ತೀರದಲ್ಲಿ ವಾಸಿಸುವ ಜನರು ತಮ್ಮ ಜಾನುವಾರುಗಳೊಂದಿಗೆ ಈ ಕೂಡಲೆ ಸಮೀಪದ ಗಂಜೀಕೇಂದ್ರದಲ್ಲಿ ಆಶ್ರಯಪಡೆಯುವಂತೆ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಸೂಚನೆ ನೀಡಿದ್ದಾರೆ.

ಕಾಳಿ ನದಿಪಾತ್ರದಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು ಅಪಾಯದ ಸಾಧ್ಯತೆ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ತಕ್ಷಣ ಸಮೀಪದ ಪೊಲೀಸರು ಅಥವಾ ಪರಿಹಾರ ಕ್ರಮ ಉಸ್ತುವಾರಿ ಕೈಗೊಂಡಿರುವ ಸ್ಥಳೀಯ ಅಧಿಕಾರಿಗಳು ಅಥವಾ ನಗರಸಭೆ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

  • ಸೂಫ ಡ್ಯಾಮ್ ಇಂದಿನ ನೀರಿನ ಮಟ್ಟ.

water level – 558.40
Inflow. – 123574
Outflow – 18000

ಹೆಲಿಕಾಪ್ಟರ್ ಮೂಲಕ ನಿರಾಶ್ರಿತರಿಗೆ ಆಹಾರ ವಿತರಣೆ

ಜಿಲ್ಲೆಯ ಅಂಕೋಲ ತಾಲೂಕಿನ ಹಲವಳ್ಳಿ,ಡೊಂಗ್ರಿ ಕನ್ನೇಶ್ವರ ಸೇರಿದಂತೆ ನಡುಗಡ್ಡೆಯಲ್ಲಿ ಸಿಲುಕಿರುವ 800ಕ್ಕೂ ಹೆಚ್ಚು ಜನರಿಗೆ ಹೆಲಿಕಾಪ್ಟರ್ ಮೂಲಕ ಆಹಾರ ವಿತರಣೆ ಮಾಡಲಾಗುತ್ತಿದೆ.

ಕಾರವಾರದ ಕದಂಬ ನೌಕಾ ನೆಲೆಯ ಮೂಲಕ ಹೆಲಿಕಾಪ್ಟರ್ ನಲ್ಲಿ ಹಲವು ಭಾಗಗಳಲ್ಲಿ ಆಹಾರ ವಿತರಣೆ ಇಂದು ಬೆಳಗಿನಿಂದ ಪ್ರಾರಂಭವಾಗಿದ್ದು ಅಂಕೋಲ ಹಾಗೂ ಯಲ್ಲಾಪುರ ಭಾಗದಲ್ಲಿ ನೀರಿನ ಮಧ್ಯ ಸಿಲುಕಿರುವವರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ.

ಕೇಂದ್ರ ಸರಕಾರದ ಎರಡು ಎನ್.ಡಿ.ಆರ್.ಎಫ್‌ ತಂಡ ಜಿಲ್ಲೆಗೆ ಆಗಮಿಸಲಿದ್ದು ಕಾರವಾರದ ಕಾಳಿ ನದಿಯ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಹಾಗೂ ಗಂಗಾವಳಿ ನದಿ ಪ್ರವಾಹದಲ್ಲಿ‌ ಸಿಲುಕಿರುವವರ ರಕ್ಷಣೆಗೆ ಒಂದೊಂದು ತಂಡವನ್ನು ಮೀಸಲಿಡಲಾಗಿದೆ.

ನೌಕಾದಳದ ಹೆಲಿಕಾಪ್ಟರ್ ನ್ನು ಅಂಕೋಲಾ ತಾಲ್ಲೂಕಿನಾದ್ಯಂತ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಹಾಗೂ ಆಹಾರ ಪೂರೈಕೆಗೆ ಪಡೆದುಕೊಳ್ಳಲಾಗಿದೆ.

ನಾಳೆಯಿಂದ ಎನ್.ಡಿ.ಆರ್.ಎಫ್‌. ತಂಡ ಕಾರ್ಯಾಚರಣೆಗೆ ಇಳಿಯಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.

ಮುಂಡಗೋಡು ಯಲ್ಲಾಪುರ ಭಾಗ ನದಿ ನೀರಿಂದ ಆವೃತವಾಗಿ ಸಂಪರ್ಕ ಕಡಿತಗೊಂಡಿದ್ದು ಈ ಭಾಗಕ್ಕೆ ಅಧಿಕಾರಿಗಳನ್ನು ಕಳುಹಿಸಲಾಗಿದ್ದು ರಕ್ಷಣೆ ಕಾರ್ಯ ನಡೆಯುತ್ತಿದೆ.

ಕುಮಟಾ ಹೆಗಡೆ ಗ್ರಾಮ ಜಲಾವೃತ

ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮ ಕೂಡ ನೆರೆ ಹಾವಳಿ ಯಿಂದ ಜಲಾವೃತವಾಗಿ ಜನರು ನಲುಗಿ ಹೋಗಿದ್ದಾರೆ.

ಹೆಗಡೆ ಗ್ರಾಮದ ತಾರಿಬಾಗಿಲ, ತಾಡುಕಟ್ಟು, ಅಂಬಿಗರ ಕೇರಿ, ಚಿಟ್ಟೆಕಂಬಿ, ಹಡಗದ್ದೆ ಭಾಗ ಸಂಪೂರ್ಣ ಜಲಾವೃತ ಆಗಿ ಮನೆಯೊಳಗೆ ನೀರು ತುಂಬಿದ್ದರಿಂದ ಸುಮಾರು 200 ಜನರನ್ನು ನಿನ್ನೆ ರಾತ್ರಿ ಹೆಗಡೆ ಸರ್ಕಾರಿ ಶಾಲೆಯಲ್ಲಿ ತೆರೆದ ಗಂಜಿಕೇಂದ್ರ ಕ್ಕೆ ಸ್ಥಳಾಂತರಿಸಲಾಗಿದೆ.

ಇಲ್ಲಿನ ಬಹಳಷ್ಟು ಮನೆಗಳು ಕುಸಿದಿದ್ದು, ಅನೇಕ ವಿದ್ಯುತ್ ಕಂಬಗಳು ಧರೆಗುರುಳಿವೆ.

ಶಾಸಕ ದಿನಕರ ಶೆಟ್ಟಿ ಎರಡು ಮೂರು ಬಾರಿ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದರಲ್ಲದೇ ಬೆಳಿಗ್ಗೆ ಗಂಜಿಕೇಂದ್ರ ಕ್ಕೂ ಭೇಟಿ ನೀಡಿ ಕುಮಟಾ ಸೂಪರ್ ಮಾರ್ಕೆಟ್ ನವರ ಸಹಕಾರ ದೊಂದಿಗೆ ಬೆಳಿಗಿನ ತಿಂಡಿ ವ್ಯವಸ್ಥೆ ಮಾಡಿದರು.

ಹೆಗಡೆಯಲ್ಲಿರುವ ಮುರಾರ್ಜಿ ವಸತಿ ಶಾಲೆ ಕೂಡ ನೆರೆಯಿಂದ ಜಲಾವೃತವಾಗಿ ಮಕ್ಕಳನ್ನು ಕುಮಟಾದ ಸಮಾಜಕಲ್ಯಾಣ ವಸತಿ ನಿಲಯಕ್ಕೆ ಸ್ಥಳಾಂತರಿಸಲಾಗಿತ್ತು. ಸದ್ಯ ಮಳೆ ಇಳಿಮುಖವಾಗಿದ್ದು ಅಲ್ಪ ಪ್ರವಾಹ ಈ ಭಾಗದಲ್ಲಿ ತಗ್ಗುತ್ತಿದೆ.

ಜಿಲ್ಲೆಯ‌ ಜಾಲಾಶಯದಿಂದ ನೀರು ಬಿಟ್ಟ ಹಿನ್ನಲೆಯಲ್ಲಿ ಬೇಡ್ತಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ.

ಇದರಿಂದಾಗಿ ಶಿರಸಿ ಯಲ್ಲಾಪುರ ರಸ್ತೆ ಸಂಚಾರ ಸಂಪೂರ್ಣ ಬಂದ್‌ ಆಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.
ಇನ್ನು ಅಂಕೋಲ ಭಾಗದಲ್ಲಿಯೂ ಪ್ರವಾಹದ ಅಬ್ಬರ ಕಡಿಮೆಯಾಗಿಲ್ಲ ಅಂಕೋಲ ಹುಬ್ಬಳ್ಳಿ ಮಾರ್ಗ ಇಂದೂ ಕೂಡ ಬಂದ್ ಆಗಿದ್ದು ರಾಷ್ಟ್ರೀಯ ಹೆದ್ದಾರಿ ಭಾಗದ ಗ್ರಾಮಗಳು ಜಲಾವೃತವಾಗಿದೆ.

ಸ್ಪೀಕರ್ , ಸಂಸದರ ಭೇಟಿ.

ಸಂತ್ರಸ್ತ ಕೇಂದ್ರಗಳಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಭೇಟಿ ನೀಡಿ ಪರಿಶೀಲನೆ ಮಾಡಿದರು.
ಸಿದ್ದಾಪುರದ ಕಲ್ಯಾಣಪುರ, ಅಕ್ಕುಂಜಿ ಕೇಂದ್ರಗಳಿಗೆ ಸ್ಪೀಕರ್ ಭೇಟಿನೀಡಿದ್ದು ಅರೆಂದೂರಿನಲ್ಲಿ ನೆರೆ ಪ್ರದೇಶಗಳ ವೀಕ್ಷಣೆ ಮಾಡಿದ ಸ್ಪೀಕರ್ ಭೇಟಿ ನೀಡಿ ಪ್ರವಾಹ ಪೀಡಿತ ಪ್ರದೇಶಕ್ಕೂ ಬೇಟಿ ನೀಡಿದರು .

ಇನ್ನು ಸಂಸದ ಅನಂತಕುಮಾರ್ ಹೆಗಡೆ ಕಾರವಾರ ,ಕುಮಟಾ ಭಾಗದಲ್ಲಿ ಸಂತ್ರಸ್ಥರ ಕೇಂದ್ರಕ್ಕೆ ಭೇಟಿ ನೀಡಿದ್ದು ಭಟ್ಕಳ ಹೊನ್ನಾವರ ಭಾಗದಲ್ಲಿ ಸಹ ಬೇಟಿ ನೀಡಲಿದ್ದಾರೆ.
Leave a Reply

Your email address will not be published. Required fields are marked *