ಉತ್ತರ ಕನ್ನಡ ಜಿಲ್ಲೆಯಲ್ಲಿ ಭರ್ಜರಿ ಮಳೆಗೆ ಮನೆಗಳಿಗೆ ತುಂಬಿದ ನೀರು!ಎಲ್ಲೆಲ್ಲಿ ಎಷ್ಟು ಮಳೆ ಗೊತ್ತಾ

826

ಉತ್ತರಕನ್ನಡ ಜಿಲ್ಲೆಯಾಧ್ಯಾಂತ ವರುಣನ ಅಬ್ಬರಕ್ಕೆ ಜನಜೀವನ ಅಸ್ಥವೆಸ್ತವಾಗಿದೆ.
ಜಿಲ್ಲೆಯ ಮಲೆನಾಡು ಭಾಗಕ್ಕಿಂತ ಕರಾವಳಿ ಭಾಗದಲ್ಲಿ ತನ್ನ ರೌದ್ರ ನರ್ತನ ತೋರಿದ್ದಾನೆ.

ಅಂಕೋಲ ಭಾಗದಲ್ಲಿ ಸುರಿದ ಮಳೆಗೆ ಜಲಾವೃತಗೊಂಡ ಮನೆಗಳು

ಕರವಾಳಿ ಭಾಗದಲ್ಲಿ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ಮಳೆಯಿಂದಾಗಿ ರಾಷ್ಟ್ರಿಯ ಹೆದ್ದಾರಿ 63ರಲ್ಲಿ ಗುಡ್ಡ ಕುಸಿತ ಉಂಟಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಇನ್ನು ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಅಂಕೋಲಾ ತಾಲೂಕಿನ ಬಿಳಿಹೊಂಯ್ಗಿ ಗ್ರಾಮ ಜಲಾವೃತವಾಗಿದೆ ,ಇನ್ನು ಯಲ್ಲಾಪುರ ಭಾಗದಲ್ಲಿ ಸಹ ವ್ಯಾಪಕ ಮಳೆಯಿಂದ ಹಲವು ಕಡೆ ನೀರು ಹೆಚ್ಚಾಗಿದ್ದು ಕೊಡ್ಲಗದ್ದೆ ಭಾಗದ ಗುಡ್ಡ ಕುಸಿದು ಹಾನಿಯಾಗಿದೆ.

ಇನ್ನು ಭಟ್ಕಳದಲ್ಲಿ ಸಹ ದೊಡ್ಡ ಪ್ರಮಾಣದಲ್ಲಿ ಮಳೆ ಬಂದಿದ್ದು 42.0 ಮಿ.ಮೀಟರ್ ಮಳೆಯಾಗಿದೆ. ಮಳೆಯ ಹೊಡೆತಕ್ಕೆ ವಿದ್ಯುತ್ ಕಂಬಗಳು ದರೆಗುರುಳಿದ್ದು ಹಲವು ಪ್ರದೇಶಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ಇನ್ನು ಜಿಲ್ಲೆಯಲ್ಲಿ ಇನ್ನೆರಡು ದಿನ ಬಾರಿ ಮಳೆಯಾಗುವ ಸಾಧ್ಯತೆ ಯನ್ನು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜಿಲ್ಲೆಯ ತಗ್ಗು ಪ್ರದೇಶ ಹಾಗೂ ನದಿ ದಡದಲ್ಲಿ ವಾಸವಿರುವ ಜನರು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಹಾಗೂ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
Leave a Reply

Your email address will not be published. Required fields are marked *