ಕರಾವಳಿಯ ಮಳೆಗೆ ಇಬ್ಬರು ಬಲಿ!300ಕ್ಕೂ ಹೆಚ್ಚು ಜನ ಗಂಜಿ ಕೇಂದ್ರಕ್ಕೆ!

559

ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ವ್ಯಾಪಕ ಮಳೆ ಬಿದ್ದ ಹಿನ್ನೆಲೆಯಲ್ಲಿ ಹಲವು ಗ್ರಾಮಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ಥವ್ಯಸ್ತ ವಾಗಿದೆ.

ಇನ್ನು ಮಳೆಯ ಆರ್ಭಟಕ್ಕೆ ಕಾರವಾರ ಹಾಗೂ ಸಿದ್ದಾಪುರದಲ್ಲಿ ಅರಣ್ಯ ಪಾಲಕ ಹಾಗೂ ಲೈನ್ ಮನ್ ಬಲಿಯಾಗಿದ್ದಾರೆ.

ಎಲ್ಲಿ ಎಷ್ಟು ಮಳೆ!

ಕಳೆದ 24 ಘಂಟೆಯಲ್ಲಿ ಸುರಿದ ಮಳೆಯ ವಿವರ ಈ ಕೆಳಗಿನಂತಿವೆ.
ಕಾರವಾರ- 137.3mm
ಅಂಕೋಲ-141.0mm
ಕುಮಟಾ-197.2mm
ಹೊನ್ನಾವರ-134.3mm
ಭಟ್ಕಳ-228.0mm
ಹಳಿಯಾಳ-3.2mm
ಯಲ್ಲಾಪುರ-22.4mm
ಜೋಯಿಡಾ–11.0mm
ಶಿರಸಿ-31.5mm
ಸಿದ್ದಾಪುರ-54.2mm
ಮುಂಡಗೋಡು-5.6mm

ಎಲ್ಲಿ ಅನಾಹುತ!?

ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಕುಮಟಾ, ಹೊನ್ನಾವರ,ಭಟ್ಕಳ ಭಾಗದಲ್ಲಿ ಅತಿಹೆಚ್ಚು ಮಳೆಯಿಂದ ಹಾನಿಯಾಗಿದೆ.

ಕುಮಟಾದಲ್ಲಿ ಮನೆಗೆ ನುಗ್ಗಿದ ನೀರು

ಕುಮಟಾ ಭಾಗದ ಹಲವೆಡೆ ತಗ್ಗು ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ್ದುಕುಮಟ ತಾಲೂಕಿನ ಕೂಜಳ್ಳಿ,ಕೋನಳ್ಳಿ ಗ್ರಾಮ ಬಹುತೇಕ ಜಲಾವೃತವಾಗಿತ್ತು.

ರಸ್ತೆಗಳನ್ನು ನುಂಗಿದ ಮಳೆ

ಇನ್ನು ಕುಮಟಾದಲ್ಲಿ ಹರಿಯುತ್ತಿರುವ ಬಡಗಣಿ ನದಿ ತುಂಬಿ ಹರಿದು ಸಾಕಷ್ಟು ತೊಂದರೆ ತಂದಿಟ್ಟಿದೆ.

ಅಂಕೊಲ ಭಾಗದಲ್ಲಿನ ಚಿತ್ರಣ

ಇನ್ನು ಕುಮಟಾ, ಹೊನ್ನಾವರ ಭಾಗದಲ್ಲಿ ಒಟ್ಟು ಏಳು ಗಂಜಿ ಕೇಂದ್ರ ವನ್ನು ಜಿಲ್ಲಾಡಳಿತ ತೆರೆದಿದ್ದು ಹೊನ್ನಾವರ ಭಾಗದ ಮುಗ್ವ,ಕರ್ಕಿ, ಕುಮಟಾ ತಾಲೂಕಿನ ಕಡತೋಕ ಭಾಗದಲ್ಲಿ ಗಂಜಿ ಕೇಂದ್ರ ಸ್ಥಾಪನೆ ಮಾಡಲಾಗಿದೆ.

ಕುಮಟಾ ದ ರಸ್ತೆಗಳಲ್ಲಿ ತುಂಬಿ ತುಳುಕಿದ ನೀರು

ಕುಮಟಾ ತಾಲೂಕಿನ ಕೊನ್ನಳ್ಳಿ ಗ್ರಾಮದ 200ಜನ ಊರಕೇರಿ ಗ್ರಾಮದ 110 ಜನರನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.

ಹೊನ್ನಾವರ ,ಕುಮಟಾ ಭಾಗದ 187000 ಸಾವಿರ ಅಂದಾಜು ಮಳೆಯಿಂದ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಗಂಜಿ ಕೇಂದ್ರದಲ್ಲಿ ಜನಗಳು
ಗಂಜಿ ಕೇಂದ್ರದಲ್ಲಿ ಊಟದ ವ್ಯವಸ್ಥೆ

ಮಳೆಗೆ ಎರಡು ಬಲಿ!

ಕಾರವಾರ ತಾಲೂಕಿನ ಬಿಣಗಾದಲ್ಲಿ ವಿದ್ಯುತ್ ಕಂಬ ದುರಸ್ತಿ ಮಾಡಲು ಹೋಗಿದ್ದ ಲೈನ್ ಮನ್ ಮಧುಕರ್ ಶಾಕ್ ನಿಂದ ಸಾವುಕಂಡಿದ್ದಾರೆ.

ವಿದ್ಯುತ್ ಕಂಬದ ಶಾಕಿಗೆ ಒಳಗಾಗಿ ಸಾವುಕಂಡ ಮಧುಕರ್.

ಮಳೆಯಿಂದ ಹಾನಿಯಾಗಿದ್ದ ವಿದ್ಯುತ್ ಕಂಬ ದುರಸ್ತಿ ಮಾಡುವಾಗ ಘಟನೆ ನಡೆದಿದೆ.

ಸಿದ್ದಾಪುರ ಮಾವಿನಗುಂಡಿ ರಸ್ತೆಯ ಕುಳಿಬಿಡು ಬಳಿ

ಸಿದ್ದಾಪುರ ದಲ್ಲಿನ ಘಟನೆ

ಅರಣ್ಯ ರಕ್ಷಕ ಶಶಿಧರ್ (58) ಕರ್ತವ್ಯಕ್ಕೆ ವಾಹನದಲ್ಲಿ ಹೋಗುತಿದ್ದಾಗ ಮರ ಬಿದ್ದು ಸಾವುಕಂಡಿದ್ದಾರೆ.

ಇನ್ನು ಜಿಲ್ಲಾಡಳಿತ ತಕ್ಷಣದಲ್ಲಿ 4 ಲಕ್ಷ ರುಪಾಯಿಯನ್ನು ಪರಿಹಾರ ಚಕ್ ಅನ್ನು ಕುಟುಂಬಕ್ಕೆ ನೀಡಿದೆ.

ಕಾರವಾರದಲ್ಲಿ ಗುಡ್ಡ ಕುಸಿತ

ಇನ್ನು ಕಾರವಾರ,ಭಟ್ಕಳ, ಅಂಕೋಲ ಭಾಗದಲ್ಲಿ ಗುಡ್ಡ ಕುಸಿತ ಕಂಡಿದ್ದು ಅಂಕೋಲದ ಹುಲಿದೇವರ ವಾಡ ಭಾಗದಲ್ಲಿ ರೈಲಿನ ಹಳಿ ಮೇಲೆ ಗುಡ್ಡ ಕುಸಿದೆರೆ ಭಟ್ಕಳದ ಪುರವರ್ಗದಲ್ಲಿ ಗುಡ್ಡ ಕುಸಿದಿದೆ,ಇನ್ನು ಕಾರವಾರದ ಸಂಕ್ರುಭಾಗದಲ್ಲಿ ಗುಡ್ಡ ಕುಸಿತ ಕಂಡಿದ್ದು ಯಾವುದೇ ಹೆಚ್ಚಿನ ಹಾನಿಯಾಗಿಲ್ಲ .
Leave a Reply

Your email address will not be published. Required fields are marked *