ಕೋವಿಡ್ ವಾರ್ಡ ಬಾಗಿಲು ಒಡೆದು ಸೊಂಕಿತ ಕಳ್ಳ ಪರಾರಿ! ಆತಂಕ ಮೂಡಿಸುತ್ತಿರುವ ಸೊಂಕಿತ ಎಸ್ಕೇಪ್ ಪ್ರಕರಣ!

1767

ಕಾರವಾರ:- ಕಳೆದ ಒಂದು ದಿನದ ಹಿಂದೆ ಕಾರವಾರದ ಮೆಡಿಕಲ್ ಕಾಲೇಜಿನ (ಕಿಮ್ಸ್) ಕೋವಿಡ್ ವಾರ್ಡಿನಿಂದ ಮೊಬೈಲ್ ಎಗುರಿಸಿ ಆಸ್ಪತ್ರೆ ಗಾಜನ್ನು ಒಡೆದು ಪರಾರಿಯಾಗಿ ಕದ್ರಾದಲ್ಲಿ ಪೊಲೀಸರ ಅಥಿತಿಯಾಗಿದ್ದ ಕೊರೋನಾ ಸೊಂಕಿತ ಬೈಕ್ ಕಳ್ಳ ರಾಜೇಶ್ ಮಂಗಳವಾರ ರಾತ್ರಿ 12 ಗಂಟೆ ನಂತರ ಕಿಮ್ಸ್ ನ ಕೊವಿಡ್ ವಿಶೇಷ ವಾರ್ಡ್ ನಿಂದ ಮತ್ತೆ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಈತನನ್ನು ಧಾರವಾಡ,ಉಡುಪಿ,ಮಂಗಳೂರು,ಶಿವಮೊಗ್ಗ ದಲ್ಲಿ ಬೈಕ್ ಕಳ್ಳತನ ಮಾಡಿ ಪರಾರಿಯಾಗಿದ್ದು ಶಿರಸಿಯಲ್ಲೂ ಎರಡು ಬೈಕ್ ಕಳ್ಳತನ ಮಾಡಿ ಸಿಕ್ಕಿಹಾಕಿಕೊಂಡಿದ್ದ .ನಂತರ ಈತನಲ್ಲಿ ಕರೋನಾ ಸೊಂಕು ಕಾಣಿಸಿಕೊಂಡಿದ್ದು ಈತನಿಂದಾಗಿ ಶಿರಸಿ ನಗರ ಠಾಣೆ, ಉಪಕಾರಾಗೃಹ ಸೀಲ್ ಡೌನ್ ಮಾಡಲಾಗಿತ್ತು.

ತಪ್ಪಿಸಿಕೊಂಡ ಕರೋನಾ ಸೊಂಕಿತ ಕಳ್ಳ

ಕಿಮ್ಸ್ ನಲ್ಲಿ ಮಂಗಳವಾರ ರಾತ್ರಿ ಆತನಿಗೆ ಚಿಕಿತ್ಸೆ ನೀಡಲು ನರ್ಸ್ ಒಬ್ಬರು ಈತನನ್ನು ಇರಿಸಿದ್ದ ವಿಶೇಷ ವಾರ್ಡ್ನಲ್ಲಿ ಹೋದಾಗ ಈತ ಹಿಂದಿನ ಬಾಗಿಲು ಮುರಿದು ಓಡಿಹೋಗಿದ್ದು ಪತ್ತೆಯಾಗಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಈತನಿಗಾಗಿ ನಗರಾದ್ಯಂತ ಹುಡುಕಾಟ ನಡೆಸುತಿದ್ದಾರೆ.

ಈತನಿಂದಾಗಿ ಈತ ಓಡಾಡಿದ ಭಾಗದಲ್ಲಿ ವೈರೆಸ್ ಪಸರಿಸಿದರೆ ಯಾವ ಜನರಿಗೆ ಏನು ಸೊಂಕು ತಗಲುತ್ತದೋ ಎಂಬ ಆತಂಕ ಸಹ ಇದ್ದು ಈತ ಎಲ್ಲೇ ಕಂಡರು ತಕ್ಷಣ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
Leave a Reply

Your email address will not be published. Required fields are marked *