ಕರೋನಾಕ್ಕೆ ಕಾರವಾರದ ವೃದ್ಧೆ ಸಾವು!ಕುಟುಂಬದವರು ಮಾಡಿದ ತಪ್ಪಿಗೆ ವೈದ್ಯಕೀಯ ಸಿಬ್ಬಂದಿಗೂ ಬಂತು ಕಂಟಕ

2706

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾಕ್ಕೆ ವೃದ್ದೆ ಬಲಿಯಾಗಿದ್ದಾಳೆ.ಈ ಮೂಲಕ ಜಿಲ್ಲೆಯಲ್ಲಿ ಮೂರನೇ ಸಾವಾಗಿದೆ.

ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾರವಾರದ 71 ವರ್ಷದ ವೃದ್ಧೆ ಪಿ 28375 ಸಾವು ಕಂಡಿದ್ದಾಳೆ.

ಕಾರವಾರ ತಾಲೂಕಿನ ಹೊಟೆಗಾಳಿ ನಿವಾಸಿಯಾಗಿರುವ 71 ವರ್ಷದ ಈ ಸೋಂಕಿತ ವೃದ್ಧೆ ಮಂಗಳೂರಿಗೆ ಹೋಗಿ ಬಂದಿದ್ದರು. ಮೂತ್ರಪಿಂಡದ ಸಮಸ್ಯೆಯಿಂದಾಗಿ ಜಿಲ್ಲಾ ಆಸ್ಪತ್ರೆಗೆ ನಾಲ್ಕು ದಿನಗಳ ಹಿಂದೆ ದಾಖಲಾಗಿದ್ದರು‌. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಈಕೆಯನ್ನು ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.

ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುತ್ತಿರುವುದು.

ಈಕೆ ಮಂಗಳೂರಿಗೆ ಹೋಗಿ ಬಂದಿದ್ದು ಹಾಗೂ ಜ್ವರ ಇರುವುದನ್ನು ಕುಟುಂಬಸ್ಥರು ಮುಚ್ಚಿಟ್ಟಿದ್ದರು‌. ಆದರೆ, ಐಸಿಯುಗೆ ದಾಖಲಿಸಿದ ಬಳಿಕ ತಪಾಸಣೆ ನಡೆಸಿದಾಗ ಜ್ವರವಿದ್ದ ಕಾರಣ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಸೋಂಕು ದೃಢಪಟ್ಟಿರುವುದಾಗಿ ನಿನ್ನೆ ವರದಿ ಬಂದಿತ್ತು. ತೀವ್ರ ಅನಾರೋಗ್ಯದಲ್ಲಿದ್ದ ಈಕೆಯನ್ನು ಬಳಿಕ ಕೋವಿಡ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಆದರೆ, ಇಂದು ಆರೋಗ್ಯ ಸಂಪೂರ್ಣ ಹದಗೆಟ್ಟಿದ್ದರಿಂದ ವೆಂಟಿಲೇಟರ್ ವ್ಯವಸ್ಥೆಯಡಿ ಈಕೆಗೆ ಚಿಕಿತ್ಸೆ ಮುಂದುವರಿಸಲಾಗಿತ್ತಾದರೂ, ದೇಹ ಚಿಕಿತ್ಸೆಗೆ ಸ್ಪಂದಿಸದೆ ಇಂದು ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಈಕೆಯ ಕುಟುಮಬದವರು ಸೊಂಕಿನ ಲಕ್ಷಣ ವಿದ್ದರೂ ಮುಚ್ಚಿಟ್ಟಿದ್ದರ ಪ್ರತಿಫಲವಾಗಿ ಈಕೆ ಪರೀಕ್ಷೆಗೊಳಪಟ್ಟಿದ್ದ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯ ಹಾಗೂ ಸ್ಯ್ಕಾನ್ ಸೆಂಟರ್ ನ ಸಿಬ್ಬಂದಿಗೂ ಇಂದು ಸೋಂಕು ದೃಢಪಟ್ಟಿದ್ದು ಇವರಿಂದಾಗಿ ಕರೋನಾ ವಾರಿಯರ್ಸ್ ಗೂ ಸೊಂಕು ತಗಲಿದೆ.

ಇನ್ನು ಮೃತಳ ಅಂತ್ಯ ಸಂಸ್ಕಾರ ವನ್ನು ತಕ್ಷಣದಲ್ಲಿ ಮಾಡಲಾಗಿದ್ದು ಹೈ ಚರ್ಚ ಬಳಿಯ ಸ್ಮಶಾನದಲ್ಲಿ ಮೃತ ವೃದ್ದೆಯ ಅಂತ್ಯ ಸಂಸ್ಕಾರ ಮಾಡಲಾಗಿದೆ. ಆದರೇ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು ಈವೇಳೆ ಲಘು ಲಾಟಿ ಪ್ರಹಾರ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ