BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಕ್ಕೆ ಸಾಥ್ ನೀಡುತ್ತಿದೆ ಡೆಂಗ್ಯು! ರೆಡ್ ಝೋನ್ ಜಿಲ್ಲೆಯಲ್ಲಿ ಕೊರೋನಾ ಜೊತೆ ಡೆಂಗ್ಯು ರೋಗ ಪತ್ತೆ!

936

ಕಾರವಾರ :- ರಾಜ್ಯದಲ್ಲಿ ಸದ್ಯ ಕೊರೊನಾ ವೈರಸ್ ಭೀತಿ ಉಂಟುಮಾಡಿರುವ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯಲ್ಲಿ ಇದೀಗ ಡೆಂಗ್ಯೂ ಆತಂಕ ಮೂಡಿಸಿದೆ.

ಕಾರವಾರದ ಬೈತಖೋಲ ಬಂದರು ಪ್ರದೇಶದಲ್ಲಿನ ಮೀನುಗಾರಿಕಾ ಬೋಟ್ ಕಾರ್ಮಿಕನೋರ್ವನಲ್ಲಿ ಇದೀಗ ಡೆಂಗ್ಯೂ ಕಾಣಿಸಿಕೊಂಡಿದೆ.

ಕಳೆದ 11 ದಿನಗಳಿಂದ ಆಳಸಮುದ್ರ ಮೀನುಗಾರಿಕೆ ತೆರಳುವ ಬೋಟುಗಳು ಬಂದರಿನಲ್ಲೇ ಲಂಗರು ಹಾಕಿ ನಿಂತಿದ್ದು ಲಾಕ್ ಡೌನ್ ಆದ ಹಿನ್ನಲೆ ಬೋಟಿನ ಕಾರ್ಮಿಕರು ಊರಿಗೆ ತೆರಳಲಾಗದೇ ಬೋಟುಗಳಲ್ಲೇ ವಾಸ್ತವ್ಯ ಹೂಡಿದ್ದಾರೆ.

ಆದ್ರೆ ಬೋಟುಗಳು ಒಂದೇ ಕಡೆಗಳಲ್ಲಿ ನಿಂತುಕೊಂಡಿದ್ದ ಪರಿಣಾಮ ಬೋಟುಗಳಲ್ಲಿ ಸಂಗ್ರಹವಾಗಿದ್ದ ನೀರಿನಿಂದ ಓರಿಸ್ಸಾ ಮೂಲದ ಕಾರ್ಮಿಕರಿಗೆ ಇದೀಗ ಡೆಂಗ್ಯೂ ಸೋಂಕು ಕಾಣಿಸಿಕೊಂಡಿದೆ.

ಈ ನಿಟ್ಟಿನಲ್ಲಿ ಬೈತಖೋಲಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿದ್ದು ಸದ್ಯ ಬೋಟಿನ ಕಾರ್ಮಿಕರನ್ನ ಬೋಟು ಮಾಲೀಕರ ಯೂನಿಯನ್ ಕಛೇರಿ ಹಾಗೂ ಹಾಲ್ ಗಳಲ್ಲಿ ಉಳಿದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ಪೀಡಿತ ಐದು ಜಿಲ್ಲೆಗಳನ್ನು ರೆಡ್ ಝೋನ್ ಗೆ ಸೇರ್ಪಡಿಸಲಾಗಿದ್ದು ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯೂ ಒಂದಾಗಿದೆ. ಹೀಗಿರುವಾಗ ಜಿಲ್ಲೆಯಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು ಜನರಲ್ಲಿ ಮತ್ತೆ ಭಯ ಹುಟ್ಟಿಸುವಂತೆ ಮಾಡಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ