ನೌಕಾನೆಲೆಯಲ್ಲಿ ಜನರ ಸಂತೆ! ವಿಕ್ರಮಾದಿತ್ಯನ ದರ್ಶನಕ್ಕೆ ಮುಗಿಬಿದ್ದ ಜನಸಾಗರ!

625

ಕಾರವಾರ:-

ಕಾರ್ಗಿಲ್ ವಿಜಯ್ ದಿವಸದ ಆಚರಣೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬಾ ನೌಕಾನೆಲೆಯಲ್ಲಿ ಇಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಐ.ಎನ್.ಎಸ್.ವಿಕ್ರಮಾಧಿತ್ಯ ಹಾಗೂ ಸುವರ್ಣ ಹಡಗನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು.

ಜಿಲ್ಲೆಯ ಜನರಲ್ಲದೇ ಹೊರರಾಜ್ಯದ ಜನರು ಇಂದು ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಯುದ್ಧ ನೌಕೆಯನ್ನು ವೀಕ್ಷಿಸುವ ಮೂಲಕ ಕಣ್ತುಬಿಂಕೊಂಡರು.

ಪ್ರತಿ ವರ್ಷದಲ್ಲಿ ಒಂದುಬಾರಿ ಮಾತ್ರ ಸಾರ್ವಜನಿಕರಿಗೆ ಏಷ್ಯಾದ ಅತಿದೊಡ್ಡ ಹಡಗು ವಿಕ್ರಮಾದಿತ್ಯ ಹಾಗೂ ನೌಕಾನೆಲೆಯನ್ನು ನೋಡಲು ಅವಕಾಶ ಕಲ್ಪಿಸಲಾಗುತಿದ್ದು ಇಂದು ಒಂದೇ ದಿನದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಭೇಟಿ ನೀಡಿ ವೀಕ್ಷಿಸಿದ್ರು.

ವಿಕ್ರಮಾದಿತ ಹಡಗಿನ ಫೊಟೋ ನೋಡಿ:-

ನೌಕೆಯ ಮೇಲ್ಭಾಗ.



Leave a Reply

Your email address will not be published. Required fields are marked *