BREAKING NEWS
Search

ಹನಿಟ್ರಾಪ್ ಗೆ ಒಳಗಾಗಿ ಪಾಕಿಸ್ತಾನ ಬೇಹುಗಾರಿಕಾ ಸಂಸ್ಥೆಗೆ ನೌಕೆಗಳ ಚಲನವಲನ ಮಾಹಿತಿ ನೀಡುತಿದ್ದ ಕಾರವಾರ ನೌಕಾದಳದ ಇಬ್ಬರು ಸಿಬ್ಬಂದಿಗಳ ಬಂಧನ!

2587

ಜಾಯಿರಾತು:-

ಶ್ರೀ ವೈಷ್ಣವಿ ದೇವಿ ಸನ್ಮಾರ್ಗ ಜ್ಯೋತಿಷ್ಯ ದೇಗುಲ.

ಪಂಡಿತ್ . ಶ್ರೀ ಶ್ರೀ ವರ್ಮಾ ಗುರೂಜಿ ಕರ್ನಾಟಕದ ಜನಗಳ ವಿಶ್ವಾಸ ಪಡೆದಿರುವ ಜ್ಯೋತಿಷ್ಯರು. *ಶ್ರೀ ವೈಷ್ಣವಿ ದೇವಿ ಮತ್ತು ಅಂಗಳ ಪರಮೇಶ್ವರಿ ದೇವಿಯ ಆರಾಧಕರಾದ ಇವರು ಕೇರಳ, ಕೊಳ್ಳೇಗಾಲದ ಮತ್ತು ತುಳುನಾಡಿನ ತಂತ್ರ,ಮಂತ್ರಗಳ ನಿಗೂಢ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳಿಗೆ ಕೇವಲ 3 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ. 
M:- 78926 94103 / 944 888 6845

ನಿಮ್ಮ ಜೀವನದ ಸಮಸ್ಯೆಗಳಾದ:-
ಮದುವೆ ಯೋಗ,ಸ್ತ್ರೀ-ಪುರುಷ ವಶಿಕರಣ,ಜನ ವಶಿಕರಣ,ಕೆಲಸದಲ್ಲಿ ಜನಗಳ ತೊಂದರೆ,ಶತ್ರು ವಶಿಕರಣ,ಜಮೀನು ವಿಚಾರ,ಕೋರ್ಟ್ ಕೇಸ,ಸಂತಾನ ಸಮಸ್ಯೆ,ಗಂಡ ಹೆಂಡತಿ ಸಮಸ್ಯ,ಮನೆಯಲ್ಲಿ ಅಶಾಂತಿ ಹೀಗೆ ಹಲವಾರು ಸಮಸ್ಯೆಗಳ ಪರಿಹಾರಕ್ಕೆ ಕಾರಣರಾಗಿರುವ ಇವರನ್ನು ಒಮ್ಮೆ ಕರೇ ಮಾಡಿ.
ನಂಬಿಕೆಯಿರಲಿ M: 944 888 6845/ 78926 94103

ನಮ್ಮ ವೆಬ್ ಪೇಜ್ ತಾಣಕ್ಕೆ ಭೇಟಿ ನೀಡಿ ಸಂಪರ್ಕಿಸಿ:- 
https://indianbestastrocentre.com

ಕಾರವಾರ :-ಹನಿಟ್ರಾಪ್ ಹಾಗೂ ಹಣದ ಆಮೇಶಕ್ಕೆ ಒಳಗಾಗಿ ಭಾರತೀಯ ನೌಕಾದಳದ ಹಡಗುಗಳ ಚಲನವಲನ ಹಾಗೂ ಆಂತರಿಕ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರಿಕಾ ಏಜನ್ಸಿಗಳಿಗೆ ಮಾಹಿತಿ ನೀಡುತಿದ್ದ ಕಾರವಾರದ ಕದಂಬ ನೌಕಾನೆಲೆಯ ರಾಜಸ್ಥಾನ,ಒರಿಸ್ಸಾ ಮೂಲದ ಇಬ್ಬರು ಸೈಲರ್ ಸಿಬ್ಬಂದಿ ಸೇರಿದಂತೆ ಎಂಟು ಜನರನ್ನು ಆಂದ್ರದ ಸಿ.ಐ ಸೆಲ್ ಪೊಲೀಸರು ಇಂದು ಬಂಧಿಸಿದ ಘಟನೆ ನಡೆದಿದೆ.

ಆಂಧ್ರ ಸಿ.ಐ ಸೆಲ್ ಪೊಲೀಸರು ಕಾರವಾರದ ಅರಗಾದ ಕದಂಬ ನೌಕಾನೆಲೆ,ಮುಂಬೈ,ವಿಶಾಕಪಟ್ಟಣಮ್ ನಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿ ಬಂಧಿಸಿದ್ದಾರೆ.

ಸಾಂದರ್ಭಿಕ ಚಿತ್ರ- Google

ಕಾರವಾರದ ಕದಂಬ ನೌಕಾನೆಲೆಯ ಇಬ್ಬರು,ವಿಶಾಕಪಟ್ಟಣಮ್ ನ ಮೂವರು ,ಮುಂಬೈನ ಭೂಗತ ಲೋಕದ ನಂಟು ಹೊಂದಿರುವ ಹವಾಲ ಹಣ ವ್ಯವಹಾರದ ವ್ಯಕ್ತಿ ಸೇರಿ ಮೂವರು ಒಟ್ಟು ಎಂಟು ಜನರನ್ನು ರಾತ್ರೂ ರಾತ್ರಿ ವಶಕ್ಕೆ ಪಡೆಯಲಾಗಿದೆ.

ಬಂಧಿತರಿಂದ ಮೊಬೈಲ್ , ಅಂತರಾಷ್ಟ್ರೀಯ ಬ್ಯಾಂಕ್ ವ್ಯವಹಾರ ಮಾಡಿದ ದಾಖಲೆ,ನೌಕಾನೆಲೆಯ ಆಂತರಿಕ ಸಿಗ್ನಲ್ ಮ್ಯಾಪ್ ಸೇರಿದಂತೆ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರವಾರ ಕದಂಬ ನೌಕಾ ನೆಲೆ-ಸಾಂದರ್ಭಿಕ ಚಿತ್ರ . Photo courtesy Google

ಬಂಧಿತರು ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆಗಳಿಗೆ ಕಾರವಾರ ಸೇರಿದಂತೆ ದೇಶದ ಪ್ರಮುಖ ನೌಕೆಗಳ ಚಲನ ವಲನದ ಬಗ್ಗೆ ಹಾಗೂ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡುತಿದ್ದರು.

ಇದಲ್ಲದೇ ಇವರೊಂದಿಗೆ ಹಲವು ಅಧಿಕಾರಿಗಳು ಹನಿ ಟ್ರಾಪ್ ಆಗಿರುವ ಬಗ್ಗೆ ಆಂದ್ರದ ಗುಪ್ತದಳ ಮಾಹಿತಿ ಪಡೆದಿದ್ದು ಅವರನ್ನು ಬಂಧಿಸುವಲ್ಲಿ ಕಾರ್ಯೋನ್ಮುಕವಾಗಿದೆ.
ಘಟನೆ ಸಂಬಂಧ ಆಂದ್ರ ಪ್ರದೇಶದ ವಿಜಯವಾಡ ಇಂಟಲಿಜನ್ಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಸಿಕ್ಕಿದ್ದು ಹೇಗೆ?

ಆಂದ್ರದ ಸಿ.ಐ ಸೆಲ್ ನ ಅಧಿಕಾರಿಗಳಿಗೆ ಮುಂಬೈನಲ್ಲಿರಿವ ಹವಾಲ ಹಣ ವ್ಯವಹಾರ ಮಾಡುತಿದ್ದ ಭೂಗತ ಲೋಕದ ನಂಟು ಹೊಂದಿದ್ದ ವ್ಯಕ್ತಿಯನ್ನು ಆಂದ್ರದ ವಿಜಯವಾಡದಲ್ಲಿ ಬಂಧಿಸಲಾಗಿತ್ತು. ಈತನನ್ನು ತನಿಖೆ ನಡೆಸಿದಾಗ ಹವಾಲ ಹಣ ಬಳಸಿ ಹಾಗೂ ಹನಿಟ್ರಾಪ್ ಮಾಡುವ ಮೂಲಕ ಕಾರವಾರದ ಕದಂಬ ನೌಕಾನೆಲೆ,ವಿಶಾಕಪಟ್ಟಣಮ್, ಮುಂಬೈ ನೌಕಾನೆಲೆಯ ನೌಕೆಯ ಸೈಲರ್ ಗಳ ಮೂಲಕ ಕಾರವಾರದ ಕದಂಬ ನೌಕಾನೆಲೆ,ವಿಶಾಕಪಟ್ಟಣಮ್ ,ಮುಂಬೈ ನೌಕಾನೆಯಲ್ಲಿ ಯುದ್ದ ಹಡಗುಗಳ ಚಲನವಲನ,ಮ್ಯಾಪ್ ಗಳು,ಸಿಗ್ನಲ್ ಗಳ ಬಗ್ಗೆ ಮಾಹಿತಿ ಪಡೆಯಲಾಗುತಿತ್ತು.

ಈ ಕುರಿತು ಮಾಹಿತಿಯನ್ನು ಆತ ಬಾಯಿ ಬಿಟ್ಟಿದ್ದು ತಕ್ಷಣ ಕಾರ್ಯಪ್ರವೃತ್ತರಾದ ಆಂದ್ರ ಸಿ.ಐ ಸೆಲ್ ಅಧಿಕಾರಿಗಳು ಆತನ ಪೊನ್ ಸೇರಿದಂತೆ ಬ್ಯಾಂಕ್ ವ್ಯವಹಾರದ ದಾಖಲೆ ಪರಿಶೀಲಿಸಿದ್ದು ಈ ವೇಳೆ ವಿಷಯ ಹೊರಬಂದಿದೆ. ನಂತರ ಏಕ ಕಾಲದಲ್ಲಿ ದಾಳಿ ನಡೆಸಿ ಇಂದು ಏಳುಜನ ನೌಕಾದಳದ ಸೈಲರ್ ಸಿಬ್ಬಂದಿಗಳನ್ನು ವಶಕ್ಕೆ ಪಡೆಯಲಾಗಿದೆ.

ಗೋವಾದಲ್ಲಿ ಹನಿ ಟ್ರಾಪ್ ಆದ್ರು?

ಸಾಂದರ್ಭಿಕ ಚಿತ್ರ- Photo courtesy Google

ಕಾರವಾರ ,ಮುಂಬೈನ ಸೈಲರ್ ಗಳಿಗೆ ಹೆಣ್ಣಿನ ಆಸೆ ತೊರಿಸಿ ಪಾಕಿಸ್ತಾನದ ಗುಪ್ತದಳ ಏಜನ್ಸಿ ಗೋವಾದ ಪ್ರತಿಷ್ಠಿತ ಹೋಟಲ್ ನಲ್ಲಿ ರೂಮ್ ಬುಕ್ ಮಾಡುವ ಮೂಲಕ ಹನಿಟ್ರಾಪ್ ಮಾಡಿದೆ ಎಂದು ಮೂಲಗಳು ಹೇಳುತ್ತವೆ.

ಇದಲ್ಲದೇ ಬಂಧಿತರಿಗೆ ಹಣ ಕೂಡ ನೀಡಲಾಗಿದ್ದು ಅವರ ಖಾತೆಗಳಿಗೆ ಅಂತರಾಷ್ಟ್ರೀಯ ಬ್ಯಾಕ್ ವ್ಯವಹಾರದ ದಾಖಲೆ ಸಹ ಸಿಕ್ಕಿದೆ.

ಇನ್ನು ಈ ಹನಿ ಟ್ರಾಪ್ ಗೆ ಕೇವಲ ನೌಕೆಯ ಸೈಲರ್ ಗಳಲ್ಲದೇ ನೌಕಾ ನೆಲೆಯ ಪ್ರಮುಖ ಹುದ್ದೆಯಲ್ಲಿರುವ ದೆಹಲಿ ಸೇರಿದಂತೆ ಪ್ರಮುಖ ನೌಕಾ ಕಚೇರಿಯ ಅಧಿಕಾರಿಗಳು ಸಹ ಒಳಗಾಗಿರುವ ಕುರಿತು ತನಿಖೆ ನಡೆದಲಾಗುತಿದ್ದು ವಿಚಾರಣೆ ಮುಂದುವರೆದಿದೆ.
Leave a Reply

Your email address will not be published. Required fields are marked *