ನಿಯಮ ಉಲ್ಲಂಘಿಸಿದವರ ಮೇಲೆ ಬಿತ್ತು ಕೇಸ್-ಆದೇಶ ಉಲ್ಲಂಘಿಸಿದ ಕಾರವಾರದ ಸಾಯಿ ಸೂಪರ್ ಸ್ಟೋರ್ಸ್ ಪರವಾನಿಗೆ ರದ್ದು.

849

ಕಾರವಾರ :- ನಗರಸಭೆ ಆದೇಶ ಉಲ್ಲಂಘನೆ ಮಾಡಿದ ಹಿನ್ನಲೆಯಲ್ಲಿ ಕಾರವಾರದ ಸಾಯಿ ಸೂಪರ್ ಸ್ಟೋರ್ಸ ಅಂಗಡಿ ಪರವಾನಿಗೆ ರದ್ದು ಮಾಡಿದ ಘಟನೆ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.

ಕೊರೋನಾ ಹರಡುತ್ತಿರುವ ಹಿನ್ನಲೆ ಅಂಗಡಿ ತೆರಯದಂತೆ ಆದೇಶ ನೀಡಿದ್ದ ಕಾರವಾರ ನಗರಸಭೆಯ ಆದೇಶ ಉಲ್ಲಂಘನೆ ಮಾಡಿದ್ದರು.
ಇದಲ್ಲದೇ ಜಿನಿಸಿ ಪದಾರ್ಥಗಳಿಗೆ ಹೆಚ್ಚಿನ ದರ ವಿಧಿಸುತ್ತಿರುವ ದೂರು ಸಹ ಇವರಮೇಲೆ ಕೇಳಿಬಂದಿತ್ತು.

ಇಂದು ನಗರಸಭೆ ಪರವಾನಿಗೆ ರದ್ದು ಪಡಿಸಿ ಆದೇಶ ಹೊರಡಿಸಿದೆ.

ಕಾರವಾರ ಪೊಲೀಸರ ಭರ್ಜರಿ ಕೇಸ್!


ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿದ ಕಾರವಾರ ತಾಲೂಕಿನಲ್ಲಿ ಪೊಲೀಸರು 179 ಕೇಸುಗಳನ್ನು ದಾಖಲಿಸಿದ್ದಾರೆ.179 ಕೇಸಿನಿಂದ 94500 ರೂಪಾಯಿ ದಂಡ ವಸೂಲಿಮಾಡಲಾಗಿದೆ.
ಒಂದು ವಾಹನ ಜಪ್ತಿ ಮಾಡಿ ಎರಡು ಕರ್ಪ್ಯೂ ಉಲ್ಲಂಘನೆ ಪ್ರಕರಣ ದಾಖಲು ಮಾಡಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ