BREAKING NEWS
Search

ಸಂಸದ ಅನಂತಕುಮಾರ್ ಹೆಗಡೆ,ಶಾಸಕಿ ರೂಪಾಲಿ ನಾಯ್ಕ ಮುಖಕ್ಕೆ ಸಗಣಿ ಬಳಿದು ಚಪ್ಪಲಿಹಾಕಿದ ಮೀನುಗಾರರು!16 ಕ್ಕೆ ಕಾರವಾರ ಬಂದ್?

778

ಕಾರವಾರ :- ಕಾರವಾರ ಬಂದರು ವಿಸ್ತರಣೆ ವಿರೋಧಿಸಿಕ ಕಾರವಾರದಲ್ಲಿ ಇಂದುಕೂಡ ಪ್ರತಿಭಟನೆಯನ್ನು ಮುಂದುವರೆಸಿದರು.

ಕಾರವಾರದ ಮೀನು ಮಾರುಕಟ್ಟೆಯನ್ನು ಬಂದ್ ಮಾಡಿದ ಮೀನುಗಾರರು ಮೀನುಮಾರುಕಟ್ಟೆ ಬಳಿ ಸೇರಿ ಪ್ರತಿಭಟನೆ ಮಾಡಿದರು.ಈ ವೇಳೆ
ಉದ್ರಿಕ್ತ ಮೀನುಗಾರ ಮಹಿಳೆಯರಿಂದ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಮತ್ತು ಸಂಸದ ಅನಂತಕುಮಾರ ಹೆಗಡೆ ಬಾವಚಿತ್ರಕ್ಕೆ ಸಗಣಿ‌ಮೆತ್ತಿ ಚಪ್ಪಲಿ ಹಾರ ಹಾಕಿ ಚಪ್ಪಲಿಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಕಾಮಗಾರಿ ನಿಲ್ಲಿಸುವ ವರೆಗೆ ಪ್ರತಿಭಟನೆ!

ಕಳೆದ ಎರಡು ದಿನದಿಂದ ಕಾರವಾರ ವಾಣಿಜ್ಯ ಬಂದರು ಎರಡನೇ ಹಂತದ ಕಾಮಗಾರಿ ಯೋಜನೆಯನ್ನು ನಿಲ್ಲಿಸುವಂತೆ ಪ್ರತಿಭಟನೆ ನಡೆಸಲಾಗುತಿದ್ದು ನಿನ್ನೆ ದಿನ ಇನ್ನೂರಕ್ಕೂ ಹೆಚ್ಚು ಮೀನುಗಾರರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು.


ಇನ್ನು ಬಂದರು ವಿಸ್ತರಣೆ ಕಾಮಗಾರಿ ನಡೆಯುತಿದ್ದು ಇದನ್ನು ನಿಲ್ಲಿಸಲು ನಿರಂತರ ಪ್ರತಿಭಟನೆ ಕೈಗೊಂಡಿರುವ ಮೀನುಗಾರರು ಇದೇ ತಿಂಗಳ 16 ರಂದು ಕಾರವಾರ ಬಂದ್ ಗೆ ಕರೆ ನೀಡಿದ್ದಾರೆ.

ಎರಡನೇ ಹಂತದ ಬಂದರು ವಿಸ್ತರಣೆಯಿಂದಾಗಿ ಕಾರವಾರದ ಕಡಲತೀರ ನಶಿಸಿ ಹೋಗುತ್ತದೆ,ಮೀನುಗಾರರು ತಮ್ಮ ಬಂದರನ್ನು ಕಳೆದುಕೊಳ್ಳುವ ಜೊತೆ ಸಾವಿರಾರು ಜನ ನಿರುದ್ಯೋಗಿಗಳಾಗಬೇಕಾಗುತ್ತದೆ.ಬಂದರು ವಿಸ್ತರಣೆಯಿಂದ ಕಡಲ ಕೊರೆತ ಹೆಚ್ಚಾಗುವ ಜೊತೆ ಮೀನುಗಳ ಜೀವನ ಚಕ್ರ ಸಹ ಬದಲಾಗಿ ತೊಂದರೆ ಅನುಭವಿಸಬೇಕಿದ್ದು ಪರಿಸರಕ್ಕೆ ಹಾನಿಯಾಗಲಿದೆ ಈ ಕಾರಣದಿಂದ ತಕ್ಷಣ ವಿಸ್ತರಣೆ ಕಾಮಗಾರಿ ಕೈಬಿಡಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮೀನುಗಾರರು ನೀಡಿದ್ದಾರೆ.
ಇನ್ನು ಪ್ರತಿಭಟನೆ ಹಿನ್ನಲೆಯಲ್ಲಿ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಬಿಗಿಪೊಲೀಸ್ ಬಂದವಸ್ತ್ ಕಲ್ಪಿಸಲಾಗಿದ್ದು ಕಾಮಗಾರಿ ನಡೆಸಲಾಗುತ್ತಿದೆ.




Leave a Reply

Your email address will not be published. Required fields are marked *