BREAKING NEWS
Search

ಈಜುಕೊಳದಲ್ಲಿ ಶಾರ್ಟ್ ಸರ್ಕ್ಯೂಟ್ ಹೊತ್ತಿ ಉರಿದ ಬೈಕ್ -ನಾಲ್ಕು ಲಕ್ಷಕ್ಕೂ ಹೆಚ್ಚು ಹಾನಿ

369

ಕಾರವಾರ; ನಗರಸಭೆಯ ಈಜು ಕೊಳ ಶಾರ್ಟ್ ಸರ್ಕ್ಯೂಟ್‌ನಿಂದ ಲಕ್ಷಾಂತರ ರೂ. ಹಾನಿಯಾಗಿದ್ದು, ಹಾಗೂ ಎರಡು ಬೈಕ್ ಸುಟ್ಟು ಕರಕಲಾಗಿದ ಘಟನೆ ನಡೆದಿದೆ.

ಈಜು ಕೊಳ ಪಕ್ಕದಲ್ಲಿ ಇರುವ ವಿದ್ಯುತ್ ಮೀಟರ್ ಬಾಕ್ಸ್ ಹತ್ತಿರ ಈಜು ಕೊಳ ಅಂಗಡಿ ಮಾಲೀಕರ ಎರಡು ಬೈಕ್ ನಿಲ್ಲಿಸಲಾಗಿತ್ತು. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಎರಡು ಬೈಕ್‌ಗೆ ಬೆಂಕಿ ತಗಲಿ ಸಂಪೂರ್ಣ ಕರಕಲಾಗಿದೆ.

ಇನ್ನೂ ಈಜು ಕೊಳ ಕಟ್ಟಡದ ಗೋಡೆಗಳು ಬೆಂಕಿಗೆ ಬಿರುಕು ಬಿಟ್ಟಿದೆ ಹಾಗೂ ಕೊಳದ ಒಳಗೆ ಕೆಲವು ಯಂತ್ರಗಳು ಸೇರಿದಂತೆ ಇನ್ನಿತರ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಸುಮಾರು ೪ ಲಕ್ಷ ೮೫ಸಾವಿರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ನಗರ ಠಾಣೆಯ ಪೊಲೀಸ್‌ರು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿದ್ದಾರೆ.
Leave a Reply

Your email address will not be published. Required fields are marked *