ಕದ್ರಾ ಡ್ಯಾಮ್ ಬಿರುಕು ವದಂತಿ!ಎಲ್ಲಿ ಏನಾಗಿದೆ?ಸತ್ಯ ಇಲ್ಲಿದೆ.

1328

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ಕಾಳಿ ನದಿ ನೀರನ್ನು ಕದ್ರಾ ಡ್ಯಾಮ್ ನಿಂದ 1.90ಲಕ್ಷ ಕ್ಯಾಸೆಕ್ಸ್ ನೀರನ್ನು ಹೊರಬಿಡಲಾಗಿದೆ.
ಇದರಿಂದಾಗಿ ಕದ್ರ,ಮಲ್ಲಾಪುರ,ಕಿನ್ನರರ ಗ್ರಾಮ ,ಕಡವಾಡ,ಬೂವಿವಾಡ,ಉಳಗ,ಕೆರೋಡಿ,ಕಾರ್ಗ,ಸೇರಿಂದಂತೆ ಇಲ್ಲಿನ ಸುತ್ತಮುತ್ತಲ ಗ್ರಾಮಗಳು ಕಾಳಿ ಪ್ರವಾಹಕ್ಕೆ ಜಲಾವೃತವಾಗಿದೆ.

ಸಾವಿರಕ್ಕೂ ಹೆಚ್ಚು ಜನರನ್ನು ದೋಣಿ ಮೂಲಕ ಸುರಕ್ಷಿತ ಜಾಗಕ್ಕೆ ಸ್ಥಳಾಂತರ ಮಾಡಲಾಗಿದೆ.

ಇನ್ನು ಕಾರವಾರದಲ್ಲಿ ಕಾಳಿ ನದಿಗೆ ಅಡ್ಡಲಾಗಿ ಕಟ್ಟಲಾದ ಕದ್ರ ಆಣೆಕಟ್ಟು ಬಿರುಕು ಬಿಟ್ಟಿದೆ ಎಂಬ ಗಾಳಿ ಸುದ್ದಿ ಹರಡಿದ್ದು ಕಾಳಿ ನದಿಗೆ ಕಟ್ಟಲಾದ ಮೂರು ಆಣೆಕಟ್ಟು ಗಳು ಬಿರುಕು ಬಿಟ್ಟಿರುವುದಿಲ್ಲ .
ಗಾಳಿ ಸುದ್ದಿಗೆ ಬೆಲೆ ಕೊಡಬೇಡಿ.

ನಾಳೆ ಶಾಲೆಗೆ ರಜೆ ಮುಂದುವರಿಕೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ, ಪ್ರವಾಹ ಮುಂದುವರಿದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲಾ, ಕಾಲೇಜುಗಳು ಹಾಗೂ ಅಂಗನವಾಡಿಗಳಿಗೆ ನಾಳೆ ಶುಕ್ರವಾರವೂ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಆದೇಶಿಸಿದ್ದಾರೆ.

ಕಾಳಿ ನದಿ ತಡದಲ್ಲಿ ಹೆಚ್ಚಾದ ಪ್ರವಾಹ ಹಿನ್ನೆಲೆಯಲ್ಲಿ
ಕಾರವಾರದ ಕಿನ್ನರ ಭಾಗದ ಗಂಜಿ ಕೆಂದ್ರಗಳು ಜಲಾವೃತವಾಗುವ ಹಂತ ತಲುಪಿದೆ.

ಕಿನ್ನರ ಗ್ರಾಮ.


ಈ ಹಿನ್ನೆಲೆಯಲ್ಲಿ ಕಾರವಾರ ತಾಲೂಕಿನ ಸಿದ್ದರ ಐ.ಟಿ.ಐ ಕಾಲೇಜು,ಅಂಬೆಜೂಗ್,ಕಿನ್ನರ,ಕಾರ್ಗ ಗಂಜಿ ಕೇಂದ್ರಗಳು ಕಾರವಾರದ ಗುರು ಭವನಕ್ಕೆ ಸ್ಥಳಾಂತರ ಮಾಡಲಾಗಿದ್ದು ಒಂದು ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ ಮಾಡುವ ಕಾರ್ಯ ನಡೆಯುತಿದ್ದು 30 ಕ್ಕೂ ಹೆಚ್ಚು ಬಸ್ ಗಳು ಸಂತ್ರಸ್ತರನ್ನು ಕಾರವಾರದೆಡೆ ಕರೆ ತರುವ ಕಾರ್ಯ ನಡೆಸುತ್ತಿದೆ.

ಅಂಕೋಲದಲ್ಲಿ ಗಂಗಾವಳಿ ನದಿ ಪ್ರವಾಹ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಗಂಗಾವಳಿ ನದಿ ಪ್ರವಾಹ ಹೆಚ್ಚಾಗಿದ್ದು ಇಂದು ಕೂಡ ಮನೆಗಳಿಗೆ ನೀರು ನುಗ್ಗಿದ್ದು ಹಲವು ಭಾಗಗಳು ಜಲಾವೃತವಾಗಿದೆ.


ಅಂಕೋಲದ ದಂಡೆಬಾಗ್ ,ಡೊಂಗ್ರಿ,ಸುಂಕಸಾಳ,ಮೊಕ್ಟ ,ವಾಸರಕುದರಿಗೆ,ಸಗಳಗೇರಿ,ಬೆಳಸೆ ಸೇರಿದಂತೆ ಹತ್ತಕ್ಕೂ ಹೆಚ್ಚು ಗ್ರಾಮಗಳು ಜಲಾವೃತವಾಗಿದೆ.ಇನ್ನು ಮೊಗಟ ಗ್ರಾಮದಲ್ಲಿ ಮನೆಗಳು ದರೆಗುರುಳಿದ್ದು ಜನರನ್ನು ದೋಣಿ ಮೂಲಕ ಅಂಕೋಲ ನಗರದ ಗಂಜಿ ಕೇಂದ್ರಕ್ಕೆ ತರಲಾಗುತ್ತಿದೆ. ಅಂಕೋಲ ತಾಲೂಕಿನೊಂದರಲ್ಲಿಯೇ 14 ಗಂಜಿ ಕೇಂದ್ರ ಗಳನ್ನು ತೆರೆಯಲಾಗಿದ್ದು ನೌಕಾದಳದ ರಕ್ಷಣಾ ತಂಡಗಳು,ಕರಾವಳಿ ರಕ್ಷಣಾ ಪಡೆ, ಪೊಲೀಸ್ ,ಅಗ್ನಿಶಾಮಕ ದಳದ ಸಿಬ್ಬಂದಿಗಳು ಈ ಭಾಗದಲ್ಲಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು 1550ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ

ಎಲ್ಲಲ್ಲಿ ರಸ್ತೆ ಬಂದ್!


ಸದ್ಯದ ಮಾಹಿತಿ ಆದಾರದಲ್ಲಿ ಕಾರವಾರ ದಿಂದ ಕದ್ರಾಕ್ಕೆ ಹೋಗುವ ಎಲ್ಲಾ ರಸ್ತೆಗಳು ಬಂದ್ ಆಗಿವೆ.

ಅಂಕೋಲದ ಹುಬ್ಬಳ್ಳಿ ಬೆಂಗಳೂರು ಮಾರ್ಗವೂ ಬಂದ್ ಆಗಿದೆ.

ಶಿರಸಿ ಭಾಗದ ದೇವಿಮನೆ ಗಟ್ಟದಲ್ಲಿ ಗುಡ್ಡ ಕುಸಿತ ಹಾಗೂ ಮರ ಬಿದ್ದಿದ್ದು ಸಂಚಾರಕ್ಕೆ ಅಲ್ಪ ತೊಂದರೆಯಾಗಿತ್ತು ಆದರೇ ಸದರಿ ವಾಹನ ಸಂಚಾರಕ್ಕೆ ಅಡ್ಡಿಯಿಲ್ಲ.
Leave a Reply

Your email address will not be published. Required fields are marked *