BREAKING NEWS
Search

ಉಕ್ರೇನ್ ನಿಂದ ಸುರಕ್ಷಿತವಾಗಿ ಮರಳಿದ ಪ್ರತೀಕ್. ಭಾರತೀಯರಿಗಾಗಿ 130 ಬಸ್ ನನ್ನು ರಷ್ಯ ವ್ಯವಸ್ಥೆ ಮಾಡಿದೆ-ಪ್ರತೀಕ್

1052

ಕಾರವಾರ: ಉಕ್ರೇನ್‌ನ ಉಝೊರೋಡ್ ನ್ಯಾಶನಲ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದ ನಗರದ ಪ್ರತೀಕ ನಾಗರಾಜ ಶೇಟ್ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ.

ನಗರದ ಮುರಳೀಧರ ಮಠ ರಸ್ತೆಯಲ್ಲಿರುವ ಮನೆಗೆ ತಲುಪುತ್ತಿದ್ದಂತೆ ಪಾಲಕರು ಆನಂದದಿಂದ ಬರಮಾಡಿಕೊಂಡು ಅಪ್ಪಿಕೊಂಡರು. ಎಂ.ಬಿ.ಬಿ.ಎಸ್ ವಿದ್ಯಾಭ್ಯಾಸಕ್ಕಾಗಿ ಅವರು ಜ.19ರಂದು ಉಕ್ರೇನ್‌ಗೆ ಹೋಗಿದ್ದರು. ತರಗತಿಗಳು ಫೆಬ್ರುವರಿ ಮೊದಲ ವಾರ ಆರಂಭವಾಗಿದ್ದವು. ಆದರೆ, ಅಲ್ಲಿನ ವಿದ್ಯಾರ್ಥಿಗಳಿಗೆ ರಷ್ಯಾವು ಉಕ್ರೇನ್‌ನ ಮೇಲೆ ಯುದ್ಧ ಸಾರಿದ್ದ ಸಂಗತಿ ತಿಳಿದಿರಲಿಲ್ಲ. ಅವರಿಗೆ ಪಾಲಕರು ಕರೆ ಮಾಡಿ ತಿಳಿಸಿದಾಗಲೇ ವಿಚಾರ ಗೊತ್ತಾಯಿತು.

ವಿಶ್ವವಿದ್ಯಾಲಯವು ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕಳುಹಿಸುವ ಸಿದ್ಧತೆ ಮಾಡಿತ್ತು. ಪಾಸ್‌ಪೋರ್ಟ್‌ಗಳನ್ನು ಪರಿಶೀಲಿಸಿ ಐದು ಬಸ್‌ಗಳ ಮೂಲಕ ಹಂಗೆರಿಯ ಗಡಿ ಝೋಹಾನಿಗೆ ಕಳುಹಿಸಿಕೊಡಲಾಯಿತು. ಭಾರತೀಯ ರಾಯಬಾರಿ ಕಚೇರಿಯಿಂದಲೂ ಮಾರ್ಗದರ್ಶ ಮಾಡಿದ್ದರು. ಅಲ್ಲಿಂದ ಬುಡಾಫೆಸ್ಟ್‌ಗೆ ಹೋಗಿ ಏರ್ ಇಂಡಿಯಾ ವಿಮಾನದಲ್ಲಿ ದೆಹಲಿಗೆ ತಲುಪಿದೆವು. ನಮ್ಮ ಹಾಸ್ಟೆಲ್‌ನಲ್ಲಿ ಊಟೋಪಹಾರದ ತೊಂದರೆಯಾಗಲಿಲ್ಲ ಎಂದು ಪ್ರತೀಕ್ ತಿಳಿಸಿದರು.

ಕೇಂದ್ರ ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ- ಪ್ರತೀಕ್

ಭಾರತೀಯ ರಾಯಭಾರಿ ಕಚೇರಿ ನಮಗೆ ಮೊದಲೇ ಮಾಹಿತಿ ನೀಡಿ ಬಸ್ ವ್ಯವಸ್ಥೆ ಮಾಡಿತ್ತು.ಯುದ್ದ ನಡೆಯುವ ಪ್ರದೇಶದಿಂದ ನಮ್ಮವರು ಬರುವುದೇ ತ್ರಾಸದಾಯಕವಾಗಿದೆ.ಹಲವರು ರಾಯಬಾರಿ ಕಚೇರಿ ನೀಡಿದ ಫಾರಮ್ ಫಿಲ್ ಮಾಡಿರಲಿಲ್ಲ.
ಈಸ್ಟನ್ ಫಾರ್ಟ ನಿಂದ ವೆಸ್ಟನ್ ಪಾರ್ಟ ಗೆ ತೆರಳಲು ವಾರ್ ನಿಂದ ತೊಂದರೆಯಾಗಿದೆ.
ಯುಕ್ರೇನಿಯನ್ ,ನೈಜೀರಿಯನ್ ಇಂಡಿಯನ್ ಸಹ ಬಾರ್ಡರ್ ಕ್ರಾಸ್ ಮಾಡುತಿದ್ದಾರೆ ಹೀಗಾಗಿ ಸಮಸ್ಯೆಯಾಗುತ್ತಿದೆ.ವಿಮಾನ ನಿಲ್ದಾಣವನ್ನ ರಷ್ಯ ವಶಪಡಿಸಿಕೊಂಡಿದ್ದರಿಂದ ಹಲವರಿಗೆ ದೇಶಕ್ಕೆ ತೆರಳಲು ತೊಂದರೆಯಾಯ್ತು.ಆದರೇ ಇದೀಗ
ರಷ್ಯ ಸಹ ಭಾರತೀಯರಿಗೆ 130 ಬಸ್ ವ್ಯವಸ್ಥೆ ಮಾಡಿದೆ.ಹೀಗಾಗಿ ನಮ್ಮವರು ಸುರಕ್ಷಿತವಾಗಿ ಬರುತ್ತಾರೆ ಎಂದು ಪತೀಕ್ ಮಾಹಿತಿ ನೀಡಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!