BREAKING NEWS
Search

ಕೊಡಸಳ್ಳಿ ಜಲಾಶಯದಿಂದ ಹರಿದ ನೀರು:ಕಾಳಿ ನದಿ ತಡದ ಜನರಿಗೆ ಕಟ್ಟೆಚ್ಚರ!ವೀಡಿಯೋ ಸಮೇತ ಸುದ್ದಿ ನೋಡಿ

572

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಉತ್ತಮ ಮಳೆಯಾಗಿದ್ದು ಜಿಲ್ಲೆಯ ಕೊಡಸಳ್ಳಿ ಡ್ಯಾಂನಲ್ಲಿ 9.30 tmc ಮತ್ತು ಕದ್ರಾ ಡ್ಯಾಂ ನಲ್ಲಿ 13.40 tmc ನೀರು ತುಂಬಿದೆ.

ಕೊಡಸಳ್ಳಿ ಡ್ಯಾಂ ನಿಂದ 0.2 tmc ನೀರನ್ನು ಕದ್ರ ಡ್ಯಾಮ್ ಗೆ ಇಂದು ಸಂಜೆ ಹರಿಸಲಾಗಿದೆ.

ಕದ್ರಾ ಜಲಾಶಯದಿಂದ 500ಕ್ಯೂಸೆಕ್ಸ ನೀರು ಬಿಟ್ಟಿರುವುದಾಗಿ ಅಧೀಕ್ಷಕ ಎಂಜಿನಿಯರ್ ನಿಂಗಣ್ಣ ತಿಳಿಸಿದ್ದು ಕದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಿದ್ದರಿಂದ ಪ್ರಾಯೋಗಿಕವಾಗಿ ಒಂದು ಗಂಟೆ ಕಾಲ ನೀರು ಬಿಡಲಾಗುವುದು.

ಸಾರ್ವಜನಿಕರಿಗೂ ಈ ಬಗ್ಗೆ ಎಚ್ಚರ ವಹಿಸಲು ಅನುಕೂಲವಾಗಿದೆ ಎಂದಿದ್ದಾರೆ.

ಇನ್ನು ಡ್ಯಾಂ ನಿಂದ ನೀರನ್ನು ಹೊರ ಬಿಟ್ಟಿದಗ್ರಿಂದ ಕಾಳಿ ನದಿ ತಡದ 28 ಗ್ರಾಮಗಳಿಗೆ ಈಗಾಗಲೇ ಕಟ್ಟೆಚ್ಚರದಿಂದ ಇರಲು ತಿಳಿಸಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.




Leave a Reply

Your email address will not be published. Required fields are marked *